ETV Bharat / state

ಹಾಸನ ಲಾಕ್​ಡೌನ್ ಆದೇಶ ವಾಪಸ್​ ಪಡೆದ ಜಿಲ್ಲಾ ಉಸ್ತುವಾರಿ ಸಚಿವ - Hassan lockdown order

ಬುಧವಾರ ನಡೆದ ಕೋವಿಡ್ ತುರ್ತು ಸಭೆಯಲ್ಲಿ ತೆಗೆದುಕೊಂಡ ನಾಲ್ಕು ದಿನಗಳ ಹಾಸನ ಲಾಕ್​ಡೌನ್ ಆದೇಶವನ್ನು ಕೇವಲ 2 ಗಂಟೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ವಾಪಸ್​ ಪಡೆದಿದ್ದಾರೆ.

hassan
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ
author img

By

Published : May 6, 2021, 9:30 AM IST

ಹಾಸನ: ಜಿಲ್ಲೆಯ ಶಾಸಕರು ಹಾಗೂ ಸಚಿವರು ಒಮ್ಮತದಿಂದ ತೆಗೆದುಕೊಂಡಿದ್ದ ಲಾಕ್​ಡೌನ್ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಾಪಸ್​ ಪಡೆದುಕೊಂಡಿದ್ದಾರೆ.

ಹಾಸನ ಲಾಕ್​ಡೌನ್ ಆದೇಶ ವಾಪಸ್​ ಪಡೆದ ಜಿಲ್ಲಾ ಉಸ್ತುವಾರಿ ಸಚಿವ

ಬುಧವಾರ ನಡೆದ ಕೋವಿಡ್ ತುರ್ತು ಸಭೆಯಲ್ಲಿ ತೆಗೆದುಕೊಂಡ ನಾಲ್ಕು ದಿನಗಳ ಲಾಕ್​ಡೌನ್ ಆದೇಶವನ್ನು ಕೇವಲ 2 ಗಂಟೆಯಲ್ಲೇ ವಾಪಸ್​ ಪಡೆಯಲಾಗಿದೆ. ಹಾಸನದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಸಿ.ಎನ್​.ಬಾಲಕೃಷ್ಣ, ಬೇಲೂರು ಶಾಸಕ ಲಿಂಗೇಶ್, ಸಕಲೇಶಪುರ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸಮ್ಮುಖದಲ್ಲಿ ನಾಲ್ಕು ದಿನಗಳ ಲಾಕ್​ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ಆದೇಶವನ್ನು ಕೇವಲ 2 ಗಂಟೆಯಲ್ಲೇ ವಾಪಸ್​ ಪಡೆಯಲಾಗಿದೆ.

ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರ ಅನುಪಸ್ಥಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಪ್ರೀತಂ ಗೌಡ ಹೈಕಮಾಂಡ್​ಗೆ ದೂರವಾಣಿ ಮೂಲಕ ದೂರು ನೀಡಿದ್ದರು. ದೂರಿನನ್ವಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೈಕಮಾಂಡ್ ತಕ್ಷಣ ಚಾಟಿ ಬೀಸಿದ್ದರಿಂದ ಸಂಜೆ ಹೊತ್ತಿಗೆ ಮಧ್ಯಾಹ್ನ ಹೊರಡಿಸಿದ್ದ ಆದೇಶವನ್ನು ವಾಪಸ್​ ಪಡೆದಿದ್ದಾರೆ ಎನ್ನಲಾಗಿದೆ.

ಓದಿ: ಕೋವಿಡ್ ಆಸ್ಪತ್ರೆಯಿಂದ ಹೊರಗೆ ಬಂದ ಮತ್ತೋರ್ವ ಸೋಂಕಿತ: ಆಂತಕದಲ್ಲಿ ಸಾಗರ ಜನತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.