ETV Bharat / state

ನೂರಕ್ಕೆ ನೂರರಷ್ಟು ಲಾಕ್​​​​​ಡೌನ್‌ ಮಾಡುವುದಿಲ್ಲ: ಸಚಿವ ಆರ್​.ಅಶೋಕ್ - ಲಾಕ್​​ಡೌನ್​​​ ಅಪ್​​ಡೇಟ್​​​

ಲಾಕ್​​​​ಡೌನ್ ವಿಚಾರವಾಗಿ ಕೂಲಿ ಕಾರ್ಮಿಕರು, ಬಡವರು ಇದಕ್ಕೆ ಬೆಂಬಲ ನೀಡಿಲ್ಲ. ಎಲ್ಲಿ ಕೊರೊನಾ ಪತ್ತೆಯಾದ ಪ್ರದೇಶವನ್ನು ಸೀಲ್​​​ಡೌನ್​​​ ಮಾಡಲು ತಿಳಿಸಿದ್ದೇವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಂತರ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ಆರ್​.ಅಶೋಕ್​​​ ತಿಳಿಸಿದರು.

Minister Ashok statement Lockdown
ಸಚಿವ ಆರ್​.ಅಶೋಕ್
author img

By

Published : Jun 30, 2020, 8:37 PM IST

ಹಾಸನ: ನೂರಕ್ಕೆ ನೂರರಷ್ಟು ಲಾಕ್​​​​​ಡೌನ್‌ ಅನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯಿಂದ ಕೊರೊನಾಗೆ ಸುಮಾರು ₹ 280 ಕೋಟಿ ಹಣ ಕೊಡಲಾಗಿದೆ. ಜಿಲ್ಲೆಗೂ ಎಷ್ಟೇ ಹಣ ಖರ್ಚಾಗಲಿ ಕೊಡಲಾಗುವುದು ಎಂದರು.

ಹೊರಗಿನಿಂದ ಇಲ್ಲಿರುವ ರೆಸಾರ್ಟ್​​​​​​​ಗೆ ಬರುವವರ ಕುರಿತು ಹಳ್ಳಿಯ ಜನತೆ ಭಯಭೀತರಾಗಿದ್ದಾರೆ. ಜಿಲ್ಲೆಯ ರೆಸಾರ್ಟ್ಸ್​​​​​ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮುಚ್ಚಲು ಇನ್ನೊಂದು ವಾರದೊಳಗೆ ಆದೇಶ ಕೊಡಲಾಗುವುದು ಎಂದರು.

ಕಂದಾಯ ಸಚಿವ ಆರ್.ಅಶೋಕ್

ಹತ್ತು ದಿನಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ಸೋಂಕು ಹೆಚ್ಚು ಹರಡುತ್ತಿದ್ದು, ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ರೋಗದ ಬಗ್ಗೆ ಆರು ತಿಂಗಳಾದರೂ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಸ್ವಯಂಪ್ರೇರಿತವಾಗಿ ಲಾಕ್​​​​​​​ಡೌನ್​​​ ಮಾಡುವವರು ರಾಜ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಂತಿಲ್ಲ. ನಿಮ್ಮ ಪ್ರದೇಶವನ್ನು ಬ್ಲಾಕ್ ಮಾಡಲು ನೀವು ಸ್ವತಂತ್ರರು. ಆದರೆ, ಇದಕ್ಕೂ ಒಪ್ಪಿಗೆ ಬೇಕಾಗುತ್ತದೆ. ಹೆದ್ದಾರಿ ಬಂದ್ ಮಾಡುವಂತಿಲ್ಲ ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.