ETV Bharat / state

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ... ಶಾಸಕರಾದ ಹೆಚ್​.ಡಿ ರೇವಣ್ಣ, ಪ್ರೀತಂಗೌಡ ಭಾಗಿ

ಕೈಗಾರಿಕೆಗಳ ಸಾಮಾಜಿಕ ಸೇವಾ ಹೊಣೆಗಾರಿಕಾ ನಿಧಿಯ ಬಳಕೆ ಕುರಿತು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

meeting-at-hassan-district-o
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
author img

By

Published : Jan 19, 2020, 8:05 AM IST

ಹಾಸನ: ಕೈಗಾರಿಕೆಗಳ ಸಾಮಾಜಿಕ ಸೇವಾ ಹೊಣೆಗಾರಿಕಾ ನಿಧಿಯ ಬಳಕೆ ಕುರಿತು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆ ನಡೆಯಿತು.

ಜಿಲ್ಲೆಯಲ್ಲಿ ಲಾಭದಾಯಕ ಉದ್ಯಮ ನಡೆಸುತ್ತಿರುವ ಕೈಗಾರಿಕೆಗಳು ಶೇ.20 ರಷ್ಟು ಲಾಭವನ್ನು ಸಿ.ಎಸ್.ಆರ್. ನಿಧಿಗೆ ನೀಡಬೇಕಾಗಿದ್ದು, ಅದನ್ನು ವ್ಯವಸ್ಥಿತವಾಗಿ ಸದ್ಭಳಕೆ ಮಾಡುವ ಸಲುವಾಗಿ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿ ಆರ್. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಮತ್ತು ಪ್ರೀತಂ ಗೌಡ ಭಾಗವಹಿಸಿ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ವಯ 5 ಕೋಟಿಗೂ ಹೆಚ್ಚಿನ ಆದಾಯ ಹೊಂದಿರುವ ಕಂಪನಿಗಳು, ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ತಮ್ಮ ಲಾಭಾಂಶದ ಕೆಲವು ಅಂಶವನ್ನು ಸಮಾಜದ ಅಭ್ಯುದಯಕ್ಕಾಗಿ ನೀಡಿ ಸಮಗ್ರ ಅಭಿವೃದ್ಧಿಗೆ ಖಾಸಗಿ ಕಂಪನಿಗಳು ಸಹ ಕೈ ಜೋಡಿಸಬೇಕೆಂದು ಹೇಳಿದರು.

ಶಾಲಾ ಕಾಲೇಜುಗಳ ಜೊತೆಗೆ ನಾಡ ಕಚೇರಿಗಳಿಗೂ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಕಂಪನಿಯವರು ಆದ್ಯತೆಯಾಗಿ ತೆಗೆದುಕೊಳ್ಳುವಂತೆ ಹೇಳಿದರು. ಅಲ್ಲದೆ, ಸಂಬಂಧಿತ ಅಧಿಕಾರಿಗಳು ಜಿಲ್ಲೆಯಲ್ಲಿರುವ ಕಂಪನಿಗಳಿಗೆ ಹೋಗಿ, ಅವರ ಆದಾಯದ ಸವಿವರ ಪಡೆದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕು. ನಂತರ ಅವರ ನಿಧಿಯ ಸಮರ್ಪಕ ಬಳಕೆಗೆ ಶಾಸಕರ ಸಭೆಯಲ್ಲಿ ಆಧ್ಯತೆಯ ಕೆಲಸಗಳ ಪಟ್ಟಿಯನ್ನು ಕಂಪನಿಯವರಿಗೆ ನೀಡಲಾಗುವುದು ಎಂದು ತಿಳಿಸಿದರು.

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ

ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ಸಿ.ಎಸ್.ಆರ್ ನಿಧಿಯನ್ನು ಶಾಲಾ-ಕಾಲೇಜುಗಳನ್ನು ಆದ್ಯತೆಯಾಗಿ ಆಯ್ಕೆ ಮಾಡಿಕೊಂಡು ಅವುಗಳ ಅಭಿವೃದ್ದಿಗೆ ಬಳಸುವಂತೆ ಹೇಳಿದರು. ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೇಜು, ಕಂಪ್ಯೂಟರ್, ಗ್ರಂಥಾಲಯ, ಪಠ್ಯ ಪುಸ್ತಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಅಭಿವೃದ್ಧಿ ಕೆಲಸಗಳಿಗೆ ಸಿ.ಎಸ್.ಆರ್. ನಿಧಿ ಬಳಕೆಯಾಗಲಿ ಎಂದು ತಿಳಿಸಿದರು.

ಹಾಸನ ನಗರದಲ್ಲಿರುವ ಗಂಧದಕೋಟಿ ಮಹಿಳಾ ಪ್ರಥಮದರ್ಜೆ ಕಾಲೇಜು, ಹೊಳೆನರಸೀಪುರ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಅಲ್ಲದೆ ಸರ್ಕಾರಿ ತಾಂತ್ರಿಕ ಕಾಲೇಜಿನಲ್ಲಿ ಪ್ರಯೋಗಾಲಯ ಅವಶ್ಯಕವಾಗಿದ್ದು, ಅವುಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.

ಶಾಸಕ ಪ್ರೀತಂ ಜೆ. ಗೌಡ ಮಾತನಾಡಿ, ಕಂಪನಿಗಳು ಸಿ.ಎಸ್.ಆರ್. ನಿಧಿ ಖರ್ಚು ಮಾಡಲು ಮುಂದಾಗುವಾಗ, ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಸಲಹೆಗಳನ್ನು ಪಡೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಒಂದೇ ಕಡೆಗೆ ಹಲವು ರೂಪದಲ್ಲಿ ಹಣ ವಿನಿಯೋಗವಾಗುವುದು ತಪ್ಪುತ್ತದೆ ಮತ್ತು ಹೆಚ್ಚಿನ ಕಡೆ ವಿವಿಧ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದರು.

ಕಂಪನಿಯವರು ಕೆರೆ-ಕಟ್ಟೆಗಳ ಅಭಿವೃದ್ಧಿ ಮಾಡುವ, ಟ್ಯಾಂಕ್‌ಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಶಾಲಾ ಕಾಲೇಜುಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸಗಳಿಗೆ ತಮ್ಮ ಅಮೂಲ್ಯವಾದ ಆದಾಯವನ್ನು ಬಳಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಠಿಸುವ ಉದ್ಯಮಗಳ ಅಭಿವೃದ್ಧಿಗೆ ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸಹಕರಿಸುತ್ತಾರೆ. ಅದೇ ರೀತಿ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದರು.

Intro:ಹಾಸನ : ಕೈಗಾರಿಕೆಗಳ ಸಾಮಾಜಿಕ ಸೇವಾ ಹೊಣೆಗಾರಿಕಾ ನಿಧಿಯ ಬಳಕೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆ ನಡೆಯಿತು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಮತ್ತು ಪ್ರೀತಂ ಗೌಡ ಭಾಗವಹೆಸಿದ್ದು ಹಲವು ಸಲಹೆ ಸೂಚನೆಗಳನ್ನು ನೀಡಿದರು.
  ಜಿಲ್ಲೆಯಲ್ಲಿ ಲಾಭದಾಯಕ ಉದ್ಯಮ ನಡೆಸುತ್ತಿರುವ ಕೈಗಾರಿಕೆಗಳು ಶೇ೨೦ ರಷ್ಟು ಲಾಭವನ್ನು ಸಿ.ಎಸ್.ಆರ್. ನಿಧಿಗೆ ನೀಡಬೇಕಾಗಿದ್ದು, ಅದನ್ನು ವ್ಯವಸ್ಥಿತವಾಗಿ ಸದ್ಭಳಕೆ ಮಾಡುವ ಸಲುವಾಗಿ ಸಭೆ ನಡೆಸಲಾಯಿತು.
ಶಾಸಕರಾದ ಹೆಚ್.ಡಿ. ರೇವಣ್ಣ ಮಾತನಾಡಿ ಸಿ.ಎಸ್.ಆರ್ ನಿಧಿಯನ್ನು ಶಾಲಾ-ಕಾಲೇಜುಗಳನ್ನು ಆಧ್ಯತೆಯಾಗಿ ಆಯ್ಕೆ ಮಾಡಿಕೊಂಡು ಅವುಗಳ ಅಭಿವೃದ್ದಿಗೆ ಬಳಸುವಂತೆ ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೇಜು, ಕಂಪ್ಯೂಟರ್, ಗ್ರಂಥಾಲಯ, ಪಠ್ಯ ಪುಸ್ತಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸರ್ಕಾರಿ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಅಭಿವೃದ್ಧಿ ಕೆಲಸಗಳಿಗೆ ಸಿ.ಎಸ್.ಆರ್. ನಿಧಿ ಬಳಕೆಯಾಗಲಿ ಎಂದು ತಿಳಿಸಿದರು.
ಹಾಸನ ನಗರದಲ್ಲಿರುವ ಗಂಧದಕೋಟಿ ಮಹಿಳಾ ಪ್ರಥಮದರ್ಜೆ ಕಾಲೇಜು, ಹೊಳೆನರಸೀಪುರ ಮಹಿಳಾ ಪ್ರಥಮದರ್ಜೆ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ, ಅಲ್ಲದೆ, ಸರ್ಕಾರಿ ತಾಂತ್ರೀಕ ಕಾಲೇಜಿನಲ್ಲಿ ಪ್ರಯೋಗಾಲಯ ಅವಶ್ಯಕವಾಗಿದ್ದು, ಅವುಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.
ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ಕಂಪನಿಗಳು ಸಿ.ಎಸ್.ಆರ್. ನಿಧಿ ಖರ್ಚು ಮಾಡಲು ಮುಂದಾಗುವಾಗ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಸಲಹೆಗಳನ್ನು ಪಡೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಇದರಿಂದ ಒಂದೆ ಕಡೆಗೆ ಹಲವು ರೂಪದಲ್ಲಿ ಹಣ ವಿನಿಯೋಗವಾಗುವುದು ತಪ್ಪುತ್ತದೆ ಮತ್ತು ಹೆಚ್ಚಿನ ಕಡೆ ವಿವಿಧ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದರು.
ಕಂಪನಿಯವರು ಕೆರೆ-ಕಟ್ಟೆಗಳ ಅಭಿವೃದ್ಧಿ ಮಾಡುವ, ಟ್ಯಾಂಕ್‌ಗಳನ್ನು ನಿರ್ಮಿಸುವ ಅಗತ್ಯವಿಲ್ಲ, ಶಾಲಾ ಕಾಲೇಜುಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸಗಳಿಗೆ ತಮ್ಮ ಅಮೂಲ್ಯವಾದ ಆದಾಯವನ್ನು ಬಳಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ರೀತಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಠಿಸುವ ಉದ್ಯಮಗಳ ಅಭಿವೃದ್ಧಿಗೆ ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸಹಕರಿಸುತ್ತಾರೆ ಅದೇರೀತಿ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ವಯ ೫ ಕೋಟಿಗೂ ಹೆಚ್ಚಿನ ಆದಾಯ ಹೊಂದಿರುವ ಕಂಪನಿಗಳು ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ತಮ್ಮ ಲಾಭಾಂಶದ ಕೆಲವು ಅಂಶವನ್ನು ಸಮಾಜದ ಅಭ್ಯುದಯಕ್ಕಾಗಿ ನೀಡಿ ಸಮಗ್ರ ಅಭಿವೃದ್ಧಿಗೆ ಖಾಸಗಿ ಕಂಪನಿಗಳು ಸಹ ಕೈ ಜೋಡಿಸಬೇಕೆಂದು ಹೇಳಿದರು.
ಶಾಲಾ ಕಾಲೇಜುಗಳ ಜೊತೆಗೆ ನಾಡಕಚೇರಿಗಳಿಗೂ ಮೂಲಭೂತ ಸೌಕರ್ಯ ಒದಗಿಸುವ ಕೆಲಸವನ್ನು ಕಂಪನಿಯವರು ಆಧ್ಯತೆಯಾಗಿ ತೆಗೆದುಕೊಳ್ಳುವಂತೆ ಹೇಳಿದರು. ಅಲ್ಲದೆ, ಸಂಬಂದಿತ ಅಧಿಕಾರಿಗಳು ಜಿಲ್ಲೆಯಲ್ಲಿರುವ ಕಂಪನಿಗಳಿಗೆ ಹೋಗಿ ಅವರ ಆದಾಯದ ಸವಿವರ ಪಡೆದು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಬೇಕು, ನಂತರ ಅವರ ನಿಧಿಯ ಸಮರ್ಪಕ ಬಳಕೆಗೆ ಶಾಸಕರ ಸಭೆಯಲ್ಲಿ ಆಧ್ಯತೆಯ ಕೆಲಸಗಳ ಪಟ್ಟಿಯನ್ನು ಕಂಪನಿಯವರಿಗೆ ನೀಡಲಾಗುವುದು ಎಂದು ತಿಳಿಸಿದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ. 

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.