ETV Bharat / state

ಹಾಸನದಲ್ಲಿ ಕಬ್ಬಿನ ಗದ್ದೆ ಮಧ್ಯೆ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ - ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಸದ್ದಿಲ್ಲದೇ ನಡೆಯುತ್ತಿದ್ದು, ಇದರ ಹಿಂದೆ ಒಂದು ದೊಡ್ಡ ಜಾಲವೇ ಕಾರ್ಯಪ್ರವೃತ್ತವಾಗಿದ್ದು, ನಗರದ ಕಾಲೇಜುಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗಾಂಜಾ ಮಾರಾಟ ಮಾಡುವ ಮೂಲಕ ಯುವ ಸಮೂಹದ ಭವಿಷ್ಯಕ್ಕೇ ಕೊಳ್ಳಿ ಇಡುತ್ತಿದೆ.

ಕಬ್ಬಿನ ಗದ್ದೆ ಮಧ್ಯೆ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ
author img

By

Published : Oct 10, 2019, 5:08 AM IST

ಹಾಸನ: ತಾಲೂಕಿನ ನಿಟ್ಟೂರು ಬಳಿ ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾಸನ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ವಿದ್ಯಾರ್ಥಿಗಳಿಗೆ ಸಿಗುವ ಗಾಂಜಾ ಎಲ್ಲಿಂದ ಸರಬರಾಜಾಗುತ್ತೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು.

ಕಬ್ಬಿನ ಗದ್ದೆ ಮಧ್ಯೆ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ

ಅದಕ್ಕೀಗ ಉತ್ತರ ಲಭ್ಯವಾಗಿದ್ದು, ಹಾಸನ ತಾಲೂಕಿನಲ್ಲೇ ಕದ್ದು ಮುಚ್ಚಿ ಗಾಂಜಾ ಗಿಡಗಳನ್ನ ಬೆಳೆಯುತ್ತಿರುವ ಅಡ್ಡೆಯ ಮೇಲೆ ದಾಳಿ ನಡೆಸಿದ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಗಿಡಗಳನ್ನ ವಶಪಡಿಸಿಕೊಂಡಿದ್ದಾರೆ. ಹಾಸನ ತಾಲೂಕಿನ ನಿಟ್ಟೂರು ಸಮೀಪದ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಅಶೋಕ್ ಎಂಬುವವರಿಂದ ವಾರಕ್ಕೆ ಪಡೆದಿದ್ದ ಜಮೀನಿನಲ್ಲಿ ಪ್ರಕಾಶ್ ಎಂಬಾತ ಕಬ್ಬಿನ ಗದ್ದೆಯ ಮಧ್ಯದಲ್ಲಿ ಗಾಂಜಾ ಗಿಡ ಬೆಳೆಸಿ ಹಾಸನಕ್ಕೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಡಿಸಿ ಗೋಪಾಲಕೃಷ್ಣಗೌಡ ಹಾಗೂ ತಹಸೀಲ್ದಾರ್ ಮೇಘನಾ ಅವರೊನ್ನಳಗೊಂಡ ತಂಡ ಸುಮಾರು 70 ಕೆಜಿ ತೂಕದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಗಾಂಜಾ ದಂಧೆ ಎಗ್ಗಿಲ್ಲದೇ ಸಾಗಿದ್ದು, ಮತ್ತಷ್ಟು ಯುವಕರು ಗಾಂಜಾದ ಪಾಶಕ್ಕೆ ಸಿಲುಕುವ ಮುನ್ನ ಅಧಿಕಾರಿಗಳು ಹೆಚ್ಚೆಚ್ಚು ದಾಳಿ ನಡೆಸಿ ಈ ದಂಧೆಗೆ ಬ್ರೇಕ್​ ಹಾಕಬೇಕಾಗಿದೆ.

Intro:ಹಾಸನ: ಹಾಸನ ತಾಲ್ಲೂಕಿನ ನಿಟ್ಟೂರು ಬಳಿ ಅಕ್ರಮವಾಗಿ ಬೆಳೆಯುತ್ತಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾಸನ ಅಭಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಸದ್ದಿಲ್ಲದೇ ನಡೆಯುತ್ತಿದ್ದು, ಇದರಹಿಂದೆ ಒಂದು ದೊಡ್ಡಜಾಲವೇ ಕಾರ್ಯಪ್ರವೃತ್ತರಾಗಿ ನಗರದ ಕಾಲೇಜುಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗಾಂಜ ಮಾರಾಟ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕೊಳ್ಳಿ ಹಿಡುತ್ತಿದ್ದು, ಈ ಗಾಂಜಾ ಎಲ್ಲಿಂದಾ ಸರಬರಾಜಾಗುತ್ತೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು, ಅದಕ್ಕೀಗಾ ಉತ್ತರ ಲಭ್ಯವಾಗಿದ್ದು, ಹಾಸನ ತಾಲ್ಲೂಕಿನಲ್ಲೇ ಕದ್ದು ಮುಚ್ಚಿ ಗಾಂಜ ಗಿಡಗಳನ್ನ ಬೆಳೆಯುತ್ತ ಅಡ್ಡೆಯ ಮೇಲೆ ಧಾಳಿ ನಡೆದಿದ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಗಿಡಗಳನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಹಾಸನ ತಾಲ್ಲೂಕಿನ ನಿಟ್ಟೂರು ಸಮೀಪದದ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಗಾಂಜ ಗಿಡಗಳನ್ನು ಯಾರಿಗೂ ಕಾಣದಂತೆ ಆಶೋಕ್ ಎಂಬುವವರಿಂದ ವಾರಕ್ಕೆ ಪಡೆದಿದ್ದ ಜಮೀನಿನಲ್ಲಿ ಪ್ರಕಾಶ್ ಎಂಬಾತ ಕಬ್ಬಿನ ಗದ್ದೆಯ ಮದ್ಯದಲ್ಲಿ ಬೆಳಸಿ ಹಾಸನಕ್ಕೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿದ ಅಬಕಾರಿ ಡಿಸಿ ಗೋಪಾಲ್‌ಕೃಷ್ಣಗೌಡ ನೇತೃತ್ವದ ಸ್ಥಳೀಯ ತಹಸೀಲ್ದಾರ್ ಮೇಘನ ಅವರೊನ್ನಳಗೊಂಡ ತಂಡ ಸುಮಾರು ೭೦ಕೆಜಿಯ ಲಕ್ಷಾಂತರ ರೂ ಮೌಲ್ಯದ ಗಾಂಜಾ ಗಿಡಗಳನ್ನ ವಶಪಡಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಗಾಂಜಾ ದಂದೆ ಹೆಗ್ಗಿಲ್ಲದೇ ಸಾಗುವ ಮೂಲಕ ಯುವಕರ ಭವಿಷ್ಯಕ್ಕೆ ಮಾರಕವಾಗುತ್ತಿದ್ದು, ಇದೇ ರೀತಿ ಅಧಿಕಾರಿಗಳು ಮತಷ್ಟು ಎಚ್ಚೆತ್ತುಕೊಂಡು ಈ ದಂಧೆಗೆ ಬ್ರೇಕ್ ಹಾಕುವರೇ ಕಾದು ನೋಡಬೇಕಿದೆ.
Body:- ಅರಕೆರೆ ಮೋಹನಕುಮಾರ, ಈಟಿವಿಭಾರತ,ಹಾಸನ.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.