ಸಕಲೇಶಪುರ(ಹಾಸನ): ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿ ಆಟೋದಲ್ಲೇ ಪ್ರಾಣ ಬಿಟ್ಟ ಘಟನೆ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಮೂಲದ ನಾಗರಾಜ್ (39) ಮೃತರು.
ಬೆಂಗಳೂರಿನಿಂದ ಸಕಲೇಶಪುರದ ಗೊಲಗೊಂಡೆ ಗ್ರಾಮದ ಸ್ನೇಹಿತ ಮಂಜುನಾಥನನ್ನು ನೋಡಲು ನಾಗರಾಜ್ ಬಂದಿದ್ದ. ಹಾಸನದಿಂದ ಬಸ್ ಮೂಲಕ ಬಂದು ನಂತರ ಬಾಗೆ ಗ್ರಾಮಕ್ಕೆ ಆಟೋದಲ್ಲಿ ಹೋಗುವಾಗ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರ ಜೇಬಿನಲ್ಲಿದ್ದ ಚಾಲನಾ ಪರವಾನಗಿ ಪತ್ರದಿಂದ ಅವರ ಗುರುತು ಸಿಕ್ಕಿದೆ.
ಸ್ನೇಹಿತನ ಸಾವಿನ ವಿಚಾರ ತಿಳಿದು ಮಂಜುನಾಥ ದುಃಖಿತನಾಗಿದ್ದಾರೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಫ್ಲೆಕ್ಸ್ ಬ್ಯಾನರ್ ಅಳವಡಿಸುವಾಗ ವಿದ್ಯುತ್ ಶಾಕ್: ಬೆಳ್ತಂಗಡಿಯಲ್ಲಿ ಓರ್ವ ಸಾವು, ಮತ್ತೋರ್ವ ಗಂಭೀರ