ETV Bharat / state

ಹಾಸನ: ಕುಡಿಯಲು ಹಣ ಕೊಡಲಿಲ್ಲ ಎಂದು ಅಜ್ಜಿಯನ್ನೇ ಕೊಂದ ಮೊಮ್ಮಗ - hassan grand mother murder case

ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ಕೋಪದಿಂದ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿದ್ದಾನೆ.

man-murdered-his-grand-mother-for-money-in-hassan
ಅಜ್ಜಿಯನ್ನೇ ಕೊಂದ ಮೊಮ್ಮಗ
author img

By

Published : Jan 25, 2022, 1:57 AM IST

ಸಕಲೇಶಪುರ : ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂದು ಕುಪಿತಗೊಂಡ ವ್ಯಕ್ತಿಯೊಬ್ಬ ಅಜ್ಜಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹಾರಳ್ಳಿ ಗ್ರಾಮದ ರುದ್ರಗೌಡ (62) ಕೊಲೆ ಮಾಡಿದ ಆರೋಪಿ ಮೊಮ್ಮಗ. ಮಲ್ಲಮ್ಮ (80) ಎಂಬುವರೆ ಮೊಮ್ಮಗನಿಂದಲೇ ಕೊಲೆಗೀಡಾದ ಅಜ್ಜಿಯಾಗಿದ್ದಾರೆ.

ಏನಿದು ಪ್ರಕರಣ: ಮದ್ಯದ ದಾಸನಾಗಿದ್ದ ರುದ್ರೇಗೌಡ ಮನೆಯಲ್ಲಿ ಹಣಕ್ಕಾಗಿ ಹೆಂಡತಿ, ಮಕ್ಕಳಿಗೆ ಹಿಂಸೆ ನೀಡುತ್ತಿದ್ದ. ನಿತ್ಯ ಪಾನಮತ್ತನಾಗಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಅಲ್ಲದೆ ಈ ಹಿಂದೆ ಮದ್ಯಪಾನಕ್ಕಾಗಿ ತನ್ನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಾಫಿ, ಮೆಣಸಿನ ಚೀಲಗಳನ್ನು ಕಳ್ಳತನ ಮಾಡಿದ್ದ ಎಂದು ಕುಟುಂಬಸ್ಥರು ಆತನನ್ನು ಮನೆಯಿಂದ ಹೊರಹಾಕಿದ್ದರು.

man-murdered-his-grand-mother-for-money-in-hassan
ಕೊಲೆಗೀಡಾದ ಅಜ್ಜಿ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದೀಗ ಕುಡಿತಕ್ಕೆ ಹಣ ಇಲ್ಲ ಎಂಬ ಕಾರಣಕ್ಕೆ ಭಾನುವಾರ ಅಕ್ಕಪಕ್ಕದ ಮನೆಯವರ ಬಳಿ ಹಣ ಕೇಳಿದ್ದಾನೆ, ಆದರೆ ಯಾರೂ ಕೊಡದ್ದರಿಂದ ತನ್ನ ಮನೆಯಿಂದ ಕೂಗಳತೆ ದೂರದಲ್ಲಿರುವ ಅಜ್ಜಿ ಮನೆಗೆ ತೆರಳಿ ಆಕೆಯ ಬಳಿ ಹಣ ನೀಡುವಂತೆ ಕೇಳಿದ್ದಾನೆ. ಅಜ್ಜಿಯೂ ಕೂಡ ನಿರಾಕರಿಸಿದ್ದ ಮನೆಯ ಹೊರಗಿದ್ದ ಕಲ್ಲನ್ನು ತಂದು ಅವಳ ತಲೆಯ ಮೇಲೆ ಎತ್ತಿ ಹಾಕಿ ಕೊಲೆಗೈದು, ಕೊರಳಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯಸಳೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಕೇವಲ 24 ಗಂಟೆಯಲ್ಲೇ ಆರೋಪಿ ರುದ್ರಗೌಡನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಆಸ್ತಿ ಮೇಲಿನ ದುರಾಸೆ: ಅಜ್ಜಿಗೆ ನಾಯಿಯಿಂದ ಕಚ್ಚಿಸಿದ ಮೊಮ್ಮಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.