ETV Bharat / state

ಪತಿಯಿಂದ ಪತ್ನಿ ಕೊಲೆ ಪ್ರಕರಣ: ಹೊಳೆನರಸೀಪುರದ ಹಲ್ಲೆ ವಿಡಿಯೋ - ಹಾಸನದಲ್ಲಿ ಪತಿಯಿಂದ ಪತ್ನಿ ಕೊಲೆ

ನವೆಂಬರ್​ 1 ರಂದು ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ರಸ್ತೆಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಲಭ್ಯವಾಗಿದೆ.

man kills wife in Holenarasipur of Hassan
ಪತ್ನಿ ಮೇಲೆ ಪುನೀತ್​ ಹಲ್ಲೆ ಮಾಡಿದಾಗಿನ ದೃಶ್ಯ
author img

By

Published : Nov 3, 2020, 1:18 PM IST

ಹಾಸನ: ವರದಕ್ಷಿಣೆ ಕಿರುಕುಳ ನೀಡಿ, ಪತಿಯೇ ಪತ್ನಿಯನ್ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ಪಾಪಿ ಪತಿ ಪತ್ನಿ ಮೇಲೆ ಹಲ್ಲೆ ಮಾಡಿದ್ದು ಎನ್ನಲಾದ ವಿಡಿಯೋವೊಂದು ಒಂದು ಲಭ್ಯವಾಗಿದೆ.

ನವೆಂಬರ್​ 1 ರಂದು ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ರಸ್ತೆಯ ಕೊಂಗಲಬಿಡು ಗ್ರಾಮದ ಬಳಿ ಪಾಪಿ ಪತಿ ಪುನೀತ್​ ಎಂಬಾತ ತನ್ನ ಪತ್ನಿ ಶಾಲಿನಿಯ ಕುತ್ತಿಗೆ, ಮುಖ, ಕೈ ಹೀಗೆ ಸಿಕ್ಕ ಸಿಕ್ಕ ಕಡೆಗಳೆಲ್ಲ ಚಾಕುವಿನಿಂದ ಇರಿದಿದ್ದ. ಈ ವೇಳೆ ಶಾಲಿನಿಯ ಚೀರಾಟ ಕೇಳಿ ಸ್ಥಳೀಯರು ಧಾವಿಸಿ ಬಂದಿದ್ದು, ಹಲ್ಲೆ ಮಾಡುತ್ತಿದ್ದ ಪುನೀತ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದರು.

ಆರೋಪಿ ಪುನೀತ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದ ಸ್ಥಳೀಯರು

ಇದನ್ನೂ ಓದಿ : ವರದಕ್ಷಿಣೆ ಭೂತ: ಹೆಂಡತಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿದ ಪಾಪಿ ಗಂಡ

ಪತ್ನಿ ಮಾತ್ರವಲ್ಲದೆ, ಪುನೀತ್​ ತನ್ನ ಮಗನನ್ನು ಕೊಲೆ ಮಾಡಲು ಮುಂದಾಗಿದ್ದ. ಈ ವೇಳೆ ಸ್ಥಳೀಯರೊಬ್ಬರು ಆತನ ತಲೆಗೆ ಹೆಲ್ಮೆಟ್​ನಿಂದ ಹೊಡೆದು ಮಗುವನ್ನು ರಕ್ಷಿಸಿದ್ದರು. ಗಂಭೀರ ಗಾಯಗೊಂಡಿದ್ದ ಶಾಲಿನಿ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಳು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆಕೆ ಮೃತಪಟ್ಟಿದ್ದಾಳೆ. ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹಾಸನ ಎಸ್ಪಿ ಆರ್. ಶ್ರೀನಿವಾಸಗೌಡ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.