ಹಾಸನ : ವಿದ್ಯುತ್ ತಂತಿ ಮೇಲೆ ಸಿಕ್ಕಿಹಾಕಿಕೊಂಡಿದ್ದ ಕಾರಿನ ಕೀ ತೆಗೆಯಲು ಹೋದ ವ್ಯಕ್ತಿಯೊಬ್ಬರಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಉದಯಗಿರಿ ಬಡಾವಣೆಯಲ್ಲಿ ಸಂಭವಿಸಿದೆ. ಮಲ್ಲಪ್ಪ (58) ಮೃತ ವ್ಯಕ್ತಿ.
ಮಲ್ಲಪ್ಪ ಅವರು ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ಮುಂದೆ ಹಾದು ಹೋಗಿದ್ದ ವಿದ್ಯುತ್ ತಂತಿಯ ಮೇಲೆ ಕಾರಿನ ಕೀ ಬಿದ್ದಿರುವುದನ್ನು ಗಮನಿಸಿ, ಅದನ್ನು ತೆಗೆಯಲು ಮನೆ ನೆಲ ಒರೆಸುವ ಕೋಲು ತೆಗೆದುಕೊಂಡು ಹೋಗಿ ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಹೈವೋಲ್ಟೇಜ್ ಪವರ್ ತುಂಬಾ ಡೇಂಜರ್.. ವಿದ್ಯುತ್ ತಂತಿ ಹಿಡಿದ ಯುವಕ ಸುಟ್ಟು ಕರಕಲು
ವಿದ್ಯುತ್ ಶಾಕ್ನಿಂದ ಮಲ್ಲಪ್ಪ ಸಾಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.
ಸೂಚನೆ: ಈ ದುರ್ಘಟನೆಯ ವಿಡಿಯೋ ಭಯಾನಕವಾಗಿದೆ. ವಿದ್ಯುತ್ ತಂತಿ ಅಥವಾ ಯಾವುದೇ ಪರಿಕರಗಳನ್ನು ಸ್ಪರ್ಶಿಸಲು ಯಾರೂ ಕೂಡ ಮುಂದಾಗಬಾರದು. ಅಗತ್ಯವಿದ್ದ ಸಂದರ್ಭಗಳಲ್ಲಿ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಯ ಸಹಾಯ ಪಡೆಯಬೇಕು ಅಥವಾ ಅವರ ಗಮನಕ್ಕೆ ತರಬೇಕು. ಇದರಿಂದ ಜನರ ಪ್ರಾಣ ಉಳಿಯುತ್ತದೆ ಮತ್ತು ವಿದ್ಯುತ್ ಅವಘಡಗಳು ತಪ್ಪುತ್ತವೆ.