ETV Bharat / state

ಡಿಕೆಶಿ ವಿಚಾರಣೆಗೆ ಸಹಕರಿಸದ ಕಾರಣ ಇಡಿ ಬಂಧಿಸಿದೆ- ಸಚಿವ ಮಾಧುಸ್ವಾಮಿ ಹೇಳಿಕೆ

ಜಾರಿ ನಿರ್ದೇಶನಾಲಯ ಡಿಕೆಶಿಯವರನ್ನ ಅಪರಾಧಿ ಎಂದು ತೀರ್ಮಾನ ಮಾಡಿಲ್ಲ. ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂಧನ ಮಾಡೋದು ಸಹಜ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಮಾಧುಸ್ವಾಮಿ
author img

By

Published : Sep 7, 2019, 7:22 PM IST

Updated : Sep 7, 2019, 8:49 PM IST

ಹಾಸನ: ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಡಿ ಕೆ ಶಿವಕುಮಾರ್ ಬಂಧನವಾಗಲಿ ಅನ್ನೋ ಬಯಕೆ ನಮಗಿಲ್ಲ. ಡಿಕೆಶಿ ಅರೆಸ್ಟ್ ಆದ್ರೇ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ ಅಂತಾ ನಮಗೆ ಗೊತ್ತು ಅಂತಾ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಡಿಕೆಶಿ ವಿರುದ್ದ ಖಾರವಾಗಿಯೇ ಮಾತನಾಡಿದ್ರು.

ಸರಿಯಾದ ದಾಖಲೆ ಕೊಡಲಿಲ್ಲ ಅಂದ್ರೆ ಬಂಧನ ಸಹಜ: ಮಾಧುಸ್ವಾಮಿ

ಸಕಲೇಶಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ಡಿಕೆಶಿಯವರನ್ನ ಅಪರಾಧಿ ಎಂದು ತೀರ್ಮಾನ ಮಾಡಿಲ್ಲ. ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂಧನ ಮಾಡೋದು ಸಹಜ. ತನಿಖಾ ಹಂತದಲ್ಲಿ ಸಹಕಾರ ಮಾಡಿಲ್ಲ ಎಂದು ಬಂಧಿಸಿದ್ದಾರೆ.

ಇನ್ನು ನಮ್ಮ ಪಕ್ಷ ಡಿಕೆಶಿ ವಿರುದ್ದ ದ್ವೇಷದ ರಾಜಕಾರಣ ಮಾಡ್ತಿಲ್ಲ ಎಂದ ಸಚಿವರು, ಹಣ ಇರಬಾರದು ಎಂದಲ್ಲ, ಇರೋ ಹಣಕ್ಕೆ ದಾಖಲೆ ಕೊಡಬೇಕು. ಬಿಜೆಪಿಯಿಂದ ದ್ವೇಷದ ರಾಜಕಾರಣ ಎಂದು ಆರೋಪಿಸಿರೋ ಕಾಂಗ್ರೆಸ್‌ಗೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ರು.

ಸಿಎಂಗೂ ಕೆಎಂಎಫ್‌ಗೂ ಸಂಬಂಧವೇ ಗೊತ್ತಿಲ್ಲ. ಅವರು ಇಷ್ಟ ಬಂದ ಹಾಗೆ ಚುನಾವಣೆ ಮಾಡೋಕೆ ಹೋಗಿದ್ರು. ಅದಕ್ಕೆ ತಡೆ ನೀಡಿ ಚುನಾವಣೆ ಮಾಡಲಾಗಿದೆ. ಇದರಲ್ಲಿ ಪಿತೂರಿ ಏನಿದೆ ಎಂದು ಮರು ಪ್ರಶ್ನೆ ಮಾಡಿದರು. ಆಸೆ ಇಲ್ಲವೆಂದ ಮೇಲೆ ಚುನಾವಣೆ ಮುಗಿದ ಬಳಿಕ ಏಕೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ರು..? ಎಂದು ಗಂಭೀರವಾಗಿ ಮರು ಪ್ರಶ್ನೆಮಾಡಿದ ಸಚಿವರು, ಸಿಎಂ ವಿಶ್ವಾಸಮತ ಕೇಳೋ ವೇಳೆ, ರೇವಣ್ಣ ಪ್ಲಾನ್ ಮಾಡಿ ಕೆಎಂಎಫ್ ಚುನಾವಣೆ ನಡೆಸೋಕೆ ಹೋಗಿದ್ರು. ಅವರು ಇಲ್ಲಿ ವಿಶ್ವಾಸ ಮತಕ್ಕೆ ಯಡಿಯೂರಪ್ಪ ವಿರುದ್ಧ ಕೈ ಎತ್ತಬೇಕಿತ್ತಾ, ಇಲ್ಲಾ ಎಲೆಕ್ಷನ್ ಮಾಡಬೇಕಿತ್ತಾ. ಅವರ ಮಟ್ಟಕ್ಕೆ ನಾವು ಇಳಿಯೋದಿಲ್ಲ ಅಂತಾ ಮಾಜಿ ಸಚಿವ ರೇವಣ್ಣ ವಿರುದ್ಧವೂ ಮಾಧುಸ್ವಾಮಿ ಕಿಡಿಕಾರಿದ್ರು.

Intro:ಹಾಸನ : ನಾನು ಪ್ರಾಮಾಣಿಕವಾಗಿ ಹೇಳ್ತೇನೆ ಶಿವಕುಮಾರ್ ಬಂಧನವಾಗಲಿ ಎನ್ನೋ ಬಯಕೆ ನಮಗಿಲ್ಲ. ಡಿಕೆಶಿ ಅರೆಸ್ಟ್ ಆದ್ರೆ ಸಾರ್ವಜನಿಕವಾಗಿ ಆತ ಸಿಂಪತಿ ಗಿಟ್ಟಿಸಿಕೊಳ್ತಾನೆ ಅಂತ ನಮಗೆ ಗೊತ್ತು ಅಂತ ಕಾನೂನು ಮತ್ತು ಸಂಸದೀಯ ಸಚಿವ ಸಚಿವ ಮಾಧುಸ್ವಾಮಿ ಡಿಕೆಶಿ ವಿರುದ್ದ ಖಾರವಾಗಿಯೇ ಮಾತನಾಡಿದ್ರು.

ಸಕಲೇಶಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಅವರು ಜಾರಿ ನಿರ್ದೇಶನಾಲಯ ಡಿಕೆಶಿಯವರನ್ನ ಅಪರಾಧಿ ಎಂದು ತೀರ್ಮಾನ ಮಾಡಿಲ್ಲ. ಯಾವುದೇ ತನಿಖಾ ಸಂಸ್ಥೆ ತನಿಖೆಗೆ ಸಹಕರಿಸದಿದ್ದರೆ ಬಂಧನ ಮಾಡೋದು ಸಹಜ. ತನಿಖಾ ಹಂತದಲ್ಲಿ ಸಹಕಾರ ಮಾಡಿಲ್ಲ ಎಂದು ಬಂಧಿಸಿದ್ದಾರೆ. ಅಂತ ತಮ್ಮ ಮಾತನ್ನ ಸಮರ್ಥನೆ ಮಾಡಿಕೊಂಡರು.

ಇನ್ನು ನಮ್ಮ ಪಕ್ಷ ಡಿಕೆಶಿ ವಿರುದ್ದ ದ್ಚೇಷದ ರಾಜಕಾರಣ ಮಾಡ್ತಿಲ್ಲ ಎಂದ ಸಚಿವ. ಹಣ ಇರಬಾರದು ಎಂದಲ್ಲ, ಇರೋ ಹಣಕ್ಕೆ ದಾಖಲೆ ಕೊಡಬೇಕು. ಬಿಜೆಪಿಯಿಂದ ದ್ವೇಷದ ರಾಜಕಾರಣ ಎಂದು ಆರೋಪಿಸಿರೋ ಕಾಂಗ್ರೆಸ್ ಗೆ ಸಚಿವ ಮಾಧುಸ್ವಾಮಿ ತಿರುಗೇಟು ನಿಡಿದ್ರು.

ಸಿಎಂಗೂ ಕೆಎಂಎಫ್ ಗೂ ಸಂಬಂಧವೇ ಗೊತ್ತಿಲ್ಲ. ಅವರು ಇಷ್ಟ ಬಂದ ಹಾಗೆ ಚುನಾವಣೆ ಮಾಡೋಕೆ ಹೋಗಿದ್ರು ಅದಕ್ಕೆ ತಡೆ ನೀಡಿ ಚುನಾವಣೆ ಮಾಡಲಾಗಿದೆ. ಇದರಲ್ಲಿ ಪಿತೂರಿ ಏನಿದೆ ಎಂದು ಮರು ಪ್ರಶ್ನೆ ಮಾಡಿದ ಸಚಿವ, ಆಸೆ ಇಲ್ಲವೆಂದ ಮೇಲೆ ಚುನಾವಣೆ ಮುಗಿದ ಬಳಿಕ ಏಕೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ರು..? ಎಂದು ಗಂಭೀರವಾಗಿ ಮರು ಪ್ರಶ್ನೆಮಾಡಿ, ಸಿಎಂ ವಿಶ್ವಾಸಮತ ಕೇಳೋ ವೇಳೆ, ರೇವಣ್ಣ ಪ್ಲಾನ್ ಮಾಡಿ ಕೆಎಂಎಫ್ ಚುನಾವಣೆ ನಡೆಸೋಕೆ ಹೋಗಿದ್ರು. ಅವರು ಇಲ್ಲಿ ವಿಶ್ವಾಸ ಮತಕ್ಕೆ ಯಡಿಯೂರಪ್ಪ ವಿರುದ್ಧ ಕೈ ಎತ್ತಬೇಕಿತ್ತಾ, ಇಲ್ಲಾ ಎಲೆಕ್ಷನ್ ಮಾಡಬೇಕಿತ್ತಾ. ಅವರ ಮಟ್ಟಕ್ಕೆ ನಾವು ಇಳಿಯೋದಿಲ್ಲ. ಅಂತ ಮಾಜಿ ಸಚಿವ ರೇವಣ್ಣ ವಿರುದ್ಧವೂ ಕಿಡಿಕಾರಿದ್ರು.

ಬೈಟ್: ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವ

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Sep 7, 2019, 8:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.