ETV Bharat / state

ಕೊರೊನಾ, ಲಾಕ್​ಡೌನ್​ಗೆ ಸಿಲುಕಿದ ''ಕೆಂಪು ದೀಪದ ಸುಂದರಿಯರ'' ಬದುಕು-ಬವಣೆ..!

author img

By

Published : Jun 30, 2020, 4:00 PM IST

Updated : Jul 1, 2020, 5:34 PM IST

ಬಡತನದ ಹೊಡೆತಕ್ಕೆ ಸಿಲುಕಿ ಹೇಗಾದರೂ ಸರಿ ಜೀವನದ ನಡೆಸಿದರೆ ಸಾಕು ಎಂದು ಮೂರು ದಶಕಗಳಿಂದ ಇತರರ ಸುಖಕ್ಕಾಗಿ ತಮ್ಮ ದೇಹವನ್ನು ಅರ್ಪಿಸುತ್ತಾ ಬಂದಿರುವ ಹಾಗೂ ಕೊರೊನಾಘಾತಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವ 'ಕೆಲವರ' ಸ್ಟೋರಿ ಇಲ್ಲಿದೆ.

lockdown effect
ಲಾಕ್​ಡೌನ್​ ಎಫೆಕ್ಟ್​​

ಹಾಸನ: ಆರ್ಥಿಕ ಪರಿಸ್ಥಿತಿ ಎಂಥವರನ್ನೂ ಯಾವ ಮಟ್ಟಕ್ಕೆ ಕರೆದೊಯ್ಯುತ್ತೆ ಅನ್ನುವುದಕ್ಕೆ ನಾವು ಇವತ್ತು ತೋರಿಸುವಂತಹ ಈ ಸ್ಟೋರಿ ಸಾಕ್ಷಿಯಾಗಿದೆ.

ಬಡತನದ ಹೊಡೆತಕ್ಕೆ ಸಿಲುಕಿ ಜೀವನದ ಬಂಡಿ ಸಾಗಿಸುವ ಸಲುವಾಗಿ ಮೂರು ದಶಕಗಳಿಂದ ಇತರರ ಸುಖಕ್ಕಾಗಿ ತಮ್ಮ ದೇಹವನ್ನು ಅರ್ಪಿಸುತ್ತಾ ಬಂದಿದ್ದರು. ಆದರೆ ನಾಲ್ಕು ತಿಂಗಳಿಂದ ಕೊರೊನಾ ಹಾವಳಿ ಹೆಚ್ಚಾಗಿರುವುದು ​​​ ಇವರ ಬದುಕಿಗೆ ಕುತ್ತು ತಂದಿದೆ.

ಲಾಕ್​ಡೌನ್​ ಎಫೆಕ್ಟ್​​, ಲೈಂಗಿಕ ಕಾರ್ಯಕರ್ತೆಯರ ಬದುಕು ಮತ್ತಷ್ಟು ದುಸ್ತರ

ಹಾಸನ ನಗರ ಸೇರಿದಂತೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ 1400 ದಮನಿತರು ಲೈಂಗಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಕೆಲವರು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿ ಬದುಕು ಏನೆಂಬುದನ್ನು ಕಲಿತುಕೊಂಡಿದ್ದಾರೆ. ತಾವು ಮಾಡುತ್ತಿದ್ದ ಕೆಲಸಕ್ಕೆ ಡೆಡ್ಲಿ ವೈರಸ್ ಅಡ್ಡ ಬಂದಿದ್ದರಿಂದ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಅಂತಹ ಕೆಂಪು ವಲಯದ ಬದುಕಿನಿಂದ ಹಸಿರು ವಲಯದ ಬದುಕಿನೆಡೆಗೆ ಸಾಗಲು ಇದು ಮುಖ್ಯ ಕಾರಣ ಎನ್ನುತ್ತಾರೆ ಇವರು.

ಹಾಸನದಲ್ಲಿ ಹೋಂ ಬೆಡ್ಸಿ ಮತ್ತು ಸ್ಟ್ರೀಟ್ ಬೆಡ್ಸಿ ಎಂಬ ಎರಡು ರೀತಿಯ ದಮನಿತರ ಮಹಿಳೆಯರು ತುತ್ತಿನ ಚೀಲವನ್ನ ತುಂಬಿಸಿಕೊಳ್ಳಲು, ಸಂಸಾರದ ನೊಗವನ್ನು ಎಳೆಯಲು ಮೂರು ದಶಕಗಳಿಂದ ಇದೇ ಕೆಲಸ ಮಾಡುತ್ತಿದ್ದಾರೆ. ಆಗಿನಿಂದ ಇವರಿಗೆ ಹಣದ ಸಮಸ್ಯೆ ಹೆಚ್ಚು ಕಾಡಲಿಲ್ಲ. ದೇಹಸುಖ ಪಡೆದುಕೊಂಡ ಕೆಲವರು ಹಣವನ್ನು ಕೂಡ ಕೊಡದೇ ಹೆದರಿಸಿ ಹೋಗುತ್ತಿದ್ದರಂತೆ. ಇದರ ನಡುವೆ ಪೊಲೀಸರ ಕಾಟ ಬೇರೆ.

ಸಮಾಜದಲ್ಲಿ ದುಡಿದು ತಿನ್ನುವ ಮನಸ್ಸು ಮಾಡಿದರು ಕೆಲವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲವಂತೆ. ಕೆಲವರು ದಮನಿತ ಮಹಿಳೆಯರನ್ನು ಒಗ್ಗೂಡಿಸಿ ಒಂದು ಎನ್​ಜಿಒ ಪ್ರಾರಂಭಿಸಿ ''ಕೆಂಪು ವಲಯ''ವನ್ನು ತೊರೆದು ಸಮಾಜಮುಖಿಯಾಗಿಸಲು ಮುಂದಾಗಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ನಿಂತವರು ಓರ್ವ ಲೇಖಕಿ, ಸಾಹಿತಿ, ವಿಮರ್ಶಕಿ ರೂಪ ಹಾಸನ.

Last Updated : Jul 1, 2020, 5:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.