ಹಾಸನ : ಇಲ್ಲಿನ ಜಿಲ್ಲಾಪಂಚಾಯತ್ ಒಳಗಿನ ಲಿಫ್ಟ್ನಿಂದಾಗಿ ಸಮಸ್ಯೆಗೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಯಾರಾದರೂ ಜನಪ್ರತಿನಿಧಿಗಳು ಬಂದಾಗಲೇ ಲಿಫ್ಟ್ ಕೈಕೊಡುತ್ತಿದೆ.
ಇಂದು ಸಚಿವರಾದ ಡಾ. ಕೆ ಸುಧಾಕರ್ ಹಾಗೂ ಸಚಿವ ಮಾಧುಸ್ವಾಮಿ ಲಿಫ್ಟ್‌ನಲ್ಲಿ ಆಗಮಿಸುವ ವೇಳೆ ಮತ್ತೆ ಕೆಲಕಾಲ ಕೆಟ್ಟುನಿಂತು ಸಮಸ್ಯೆ ತಂದೊಡ್ಡಿತ್ತು. ಕೋವಿಡ್-19 ಸಂಬಂಧ ಚರ್ಚಿಸಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಗೆ ಕೆ.ಸುಧಾಕರ್ ಹಾಗೂ ಮಾಧುಸ್ವಾಮಿ ಲಿಫ್ಟ್‌ನಲ್ಲಿ ಹೊರಟಿದ್ದರು. ಈ ವೇಳೆ ಕೆಲ ಸಮಯ ಕೆಟ್ಟುನಿಂತ ಲಿಫ್ಟ್‌ನಿಂದ ಫಜೀತಿ ಅನುಭವಿಸಿ ಮೆಟ್ಟಿಲು ಹತ್ತಿ ಸಭೆಗೆ ಹಾಜರಾದರು.
ಇದಲ್ಲದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಹೆಚ್ ಡಿ ರೇವಣ್ಣ ಸಭೆಗೆ ಬರುವಾಗ ಅವರಿಗೂ ಇಂತಹ ಅನುಭವಗಳು ಆಗಿದ್ದವು. ಮೊದಲು ಇದನ್ನು ದುರಸ್ಥಿಪಡಿಸಿ ಅಂತಾ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ಸಚಿವರು ಕಿಡಿಕಾರಿದ್ದರು.