ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಹೊಲಬಗೆರೆ ಗ್ರಾಮದಲ್ಲಿ ಚಿರತೆ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪುಟ್ಟರಂಗನಾಥ ಎಂಬುವವರ ಬಾಳೆ ತೋಟದಲ್ಲಿ 9 ವರ್ಷದ ಚಿರತೆ ಕಳೇಬರ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಚಿರತೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಿರತೆಯೊಂದು ಕುಂಟುತ್ತಾ ಅರಣ್ಯದಲ್ಲಿ ತಿರುಗಾಡುತ್ತಿತ್ತು. ಇದರ ಮದ್ಯೆ ಗ್ರಾಮದಲ್ಲಿನ 2 ನಾಯಿಗಳು ಹಾಗೂ 1 ಕುರಿಯನ್ನು ಬೇಟೆಯಾಡಿ ತಿಂದು ಮುಗಿಸಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇನ್ನು ಈ ಕುರಿತು ಅರಣ್ಯ ಇಲಾಖೆಯವರಿಗೆ ಸ್ಥಳೀಯರು ವಿಷಯ ತಿಳಿಸಿದ್ದು, ಸ್ಥಳಕ್ಕೆ ಉಪ ವಲಯಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.