ETV Bharat / state

ರಾಜಕಾರಣಿಗಳದ್ದು ಬರೀ ಸುಳ್ಳು ಭರವಸೆ : ರಸ್ತೆಯಲ್ಲಿ ಹಳ್ಳವೋ, ಹಳ್ಳದಲ್ಲಿ ರಸ್ತೆಯೋ !

ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ ,ರಾಮನಾಥಪುರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 15 ವರ್ಷಗಳಿಂದ ಈ ರಸ್ತೆಯಲ್ಲಿ ಹೊಂಡ ಗುಂಡಿ ಬಿದ್ದಿವೆ, ಹಲವರು ಕೈ-ಕಾಲು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರಗಳು ಭರವಸೆ ಕೊಡುತ್ತಿವೆ ಹೊರತು ರಸ್ತೆ ಡಾಂಬರೀಕರಣಕ್ಕೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

arkalgodu village
ಹೋಂಡ ಗುಂಡಿಗಳಿಂದ ತುಂಬಿದ ರಸ್ತೆ
author img

By

Published : May 8, 2020, 3:46 PM IST

ಅರಕಲಗೂಡು : ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ ,ರಾಮನಾಥಪುರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಶಿಥಿಲಾವಸ್ಥೆ ತಲುಪಿ ದಶಕಗಳೇ ಕಳೆದಿವೆ. ಆದರೂ ಯಾವೊಬ್ಬ ಜನಪ್ರತಿನಿಧಿಗಳು ಇತ್ತ ಗಮನ ಹರಿಸದೇ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕಳೆದ 15 ವರ್ಷಗಳಿಂದ ಈ ರಸ್ತೆಯಲ್ಲಿ ಹೊಂಡ ಗುಂಡಿ ಬಿದ್ದಿವೆ. ಹಲವರು ಕೈ-ಕಾಲು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರಗಳು ಭರವಸೆ ಕೊಡುತ್ತಿವೆಯೇ ಹೊರತು ರಸ್ತೆ ಡಾಂಬರೀಕರಣಕ್ಕೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಹಲವಾರು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡುತ್ತಲೇ ಬರುತ್ತಿದೆ, ಮಾತ್ರವಲ್ಲ ಚುನಾವಣೆ ಬಂದಾಗಲೆಲ್ಲಾ ಜನಪ್ರತಿನಿಧಿಗಳು ಈ ರಸ್ತೆ ವಿಚಾರ ಇಟ್ಟುಕೊಂಡೇ ಮತ ಕೇಳುತ್ತಾರ. ರಸ್ತೆ ನಿರ್ಮಾಣ ಕಾರ್ಯಕ್ಕೆ ಇದುವರೆಗೂ ಅನೇಕ ಭಾರಿ ಶಿಲಾನ್ಯಾಸ ಕೂಡ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಕೆಲಸ ಆರಂಭಿಸಿಲ್ಲ.

ಹೋಂಡ ಗುಂಡಿಗಳಿಂದ ತುಂಬಿದ ರಸ್ತೆ

ಈ ಸಂಬಂಧ ಅಧಿಕಾರಿಗಳನ್ನು ಕೇಳಿದ್ರೆ, ಹಣ ಮಂಜೂರಾಗಿದೆ ಬೇಸಿಗೆ ಮುಗಿದ ನಂತರ ಆರಂಭಿಸುತ್ತೇವೆ, ಮಳೆಗಾಲ ಮುಗಿದ ಮೇಲೆ ಮಾಡುತ್ತೇವೆ, ಟೆಂಡರ್​​​ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳೂ ನಮಗೆ ಸುಳ್ಳು ಭರವಸೇ ಕೊಡುತ್ತಲೇ ಇದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.