ETV Bharat / state

ಸೋಂಕಿತೆ ಓಡಾಟ ಹಿನ್ನೆಲೆ: ಕೊಣನೂರಿನ ಹಳೇ ಎಸ್‌ಬಿಎಂ ರಸ್ತೆ ಸಂಪೂರ್ಣ ಸೀಲ್‌ಡೌನ್ - Arakalagudu latest news

ಕೊಡಗಿನ ಆಲೂರಲ್ಲಿ ಕೊರೊನಾ ಸೋಂಕಿತೆಯೊಬ್ಬರು ಅರಕಲಗೂಡಿನ ಕೊಣನೂರು ಪಟ್ಟಣದಲ್ಲಿ ಸಂಚರಿಸಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ.

Konanuru
Konanuru
author img

By

Published : Jun 25, 2020, 5:38 PM IST

ಅರಕಲಗೂಡು: ಕೊಡಗಿನ ಆಲೂರು ಸಿದ್ದಾಪುರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತೆಯೋರ್ವರು ಕೊಣನೂರು ಪಟ್ಟಣದಲ್ಲಿ ಸಂಚಾರ ನಡೆಸಿದ್ದು,ಈ ಹಿನ್ನೆಲೆಯಲ್ಲಿ ಕೊಣನೂರು ಪಟ್ಟಣವನ್ನು ಸೀಲ್ ಡೌನ್ ಮಾಡಲಾಗಿದೆ.

ಸೋಂಕಿತೆಯು ಕೊಣನೂರು ಪಟ್ಟಣಕ್ಕೆ ಭೇಟಿ ನೀಡದ್ದ ಅಂಗಡಿಯವರನ್ನು ಪರೀಕ್ಷೆಗೆ ಕರೆದುಕೊಂಡ ಹೋಗಿದ್ದು, ಕೆಲ ಅಂಗಡಿಯವರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದರು.

ಇತ್ತ ಆರೋಗ್ಯ ಇಲಾಖೆಯವರು ಚರ್ಚಿಸಿ ಪರೀಕ್ಷೆಗೆ ಕರೆದುಕೊಂಡು ಹೋಗಿರುವವರ ವರದಿ ಬರುವವರೆಗೂ ಈ ರಸ್ತೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡುವುದೆಂದು ನಿರ್ಧರಿಸಿದ್ದು‍, ಪಟ್ಟಣದ ಗಣಪತಿ ಪೆಂಡಾಲ್ ಬಳಿ, ಈಶ್ವರ ದೇವಾಲಯದ ಕ್ರಾಸ್ ಬಳಿ ಹಾಗೂ ಗಾಂಧಿ ವೃತ್ತದ ಬಳಿ ಪೊಲೀಸರ ಸಹಕಾರದಿಂದ ಬ್ಯಾರಿಕೇಡ್‌ಗಳನ್ನು ಹಾಕಿ ಸಂಪೂರ್ಣ ಬಂದ್ ಮಾಡಲಾಗಿದೆ.

ಕೊಣನೂರು ಗಾಂಧಿ ವೃತ್ತದಿಂದ ಗಣಪತಿ ಪೆಂಡಾಲ್‌ವರೆಗೆ ಒಂದು ವಾರಗಳ ಕಾಲ ಸೀಲ್‌ಡೌನ್ ಮಾಡಿ, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಅನವಶ್ಯಕವಾಗಿ ಆ ಭಾಗದಲ್ಲಿ ಸುತ್ತಾಡುವುದು ಅಥವಾ ಮಾಸ್ಕ್ ಧರಿಸದೆ ಇರುವುದು ಕಂಡು ಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಣನೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಣೇಶ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.