ETV Bharat / state

2019ರ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಇಟ್ಟ ಹಾಸನದ ಮಂದಿ

author img

By

Published : Jul 2, 2019, 10:44 PM IST

ಜುಲೈ 5ರಂದು ಮಂಡನೆಯಾಗಲಿರುವ ಬಜೆಟ್​ ಮೇಲೆ ರಾಜ್ಯದ ಜನರು ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಹಾಸನದ ಜನತೆ ಸಹ ನೂರಾರು ಕನಸು ಕಾಣುತ್ತಿದ್ದಾರೆ.

Budget

ಹಾಸನ: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ 2ನೇ ಅವಧಿಯ 2019-20ರ ಸಾಲಿನ ಬಜೆಟ್ ಮಂಡನೆಯನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಮಂಡಿಸಲಿದ್ದು, ಎಂದಿನಂತೆಯೇ ಈ ಬಾರಿ ಬಜೆಟ್ ಮೇಲೆ ಕರ್ನಾಟಕದ ಜನರ ನಿರೀಕ್ಷೆ ಬಹಳಷ್ಟಿದ್ದು, ಹಾಸನದಲ್ಲಿಯೂ ನಿರೀಕ್ಷೆಯ ಭರಪೂರವನ್ನೆ ಹೊಂದಿದ್ದಾರೆ.

ಹಾಸನದಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್

ಲೋಕಸಭಾ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್​ನ್ನ ಸಚಿವ ಪಿಯೂಶ್ ಗೋಯಲ್ ಮಂಡಿಸಿದ್ದರು. ಸದ್ಯ ಎರಡನೇ ಅವಧಿಗೆ ಎನ್​ಡಿಎ ಸರಕಾರ ಅಧಿಕಾರ ಹಿಡಿದಿದೆ. ಹಾಗಾಗಿಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದ್ದು, ರೈತರ ಪರವಾಗಿರುತ್ತೋ ಅಥವಾ ಬಂಡವಾಳದಾರರಿಗೆ ಅನುಕೂಲವಾಗಿರುತ್ತೋ ಎಂಬುದು ಜುಲೈ 5 ರಂದು ಗೊತ್ತಾಗಲಿದೆ. ಬಜೆಟ್ ಮೇಲೆ ಹಾಸನದ ಜನತೆ ಕೂಡಾ ಅನೇಕ ನೀರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

1. ನಿರುದ್ಯೋಗ ಸಮಸ್ಯೆ ದೂರ: ಹಾಸನ ಈ ಬಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯ ಪಾತ್ರವಹಿಸಿದೆ. ಅದಕ್ಕೆ ಇಂಬುಕೊಡುವಂತೆ ಎಸ್​ಎಸ್​ಎಲ್​​ಸಿ ಮತ್ತು ಪಿಯುಸಿಯ ಫಲಿತಾಂಶದಲ್ಲಿ ಈ ಬಾರಿ ಗಣನೀಯ ಸಾಧನೆ ಮಾಡಿದ್ದು, ಜಿಲ್ಲೆಯ ವಿದ್ಯಾವಂತ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಇದರ ನಿವಾರಣೆಗೆ ಹೊಸ ಯೋಜನೆಗಳನ್ನ ನೀಡುವರೇ ಎಂಬುದನ್ನ ಕಾಯುತ್ತಿದ್ದಾರೆ.

2. ನಿರ್ಮಲಾ ಸೀತರಾಮ್ ಮಂಡಿಸಲಿರುವ ಬಜೆಟ್​​ನಲ್ಲಿ ತೆರಿಗೆ ಸುಧಾರಣೆ ಮತ್ತು ತೆರಿಗೆ ದರ ಕಡಿತದ ಕುರಿತು ಘೋಷಣೆ ಸಾಧ್ಯತೆಯಿದ್ದು, ಮೆಡಿಕಲ್ ಇನ್ಸೂರೆನ್ಸ್​​ನಲ್ಲೂ ದರ ಕಡಿತ ಮಾಡುವ ನಿರೀಕ್ಷೆಯಿದೆ. ಅದರೆ ಜೊತೆಗೆ ಮಧ್ಯಮ ವರ್ಗದ ಸಂಬಳಾಧಾರಿತ ನೌಕರರಿಗೆ 5ಲಕ್ಷದ ವರೆಗೆ ವಿನಾಯ್ತಿಯನ್ನ ಮುಂದುವರೆಸಿಕೊಂಡು ಹೋಗುವರೆ ಎಂಬ ನಿರೀಕ್ಷೆ ಕುಡಾ ಇದೆ.

3. ಇನ್ನು ಹಾಸನ ಮತ್ತು ಅರಸೀಕೆರೆ ರೈಲ್ವೆ ಜಂಕ್ಷನ್​ಗೆ ಮೂಲಸೌಕರ್ಯಗಳಿಗೆ ಒತ್ತು ನೀಡುವಲ್ಲಿ ಹೆಚ್ಚಿನ ಗಮನಹರಿಸಬೇಕು. ವೈ-ಪೈ, ಸ್ವಚ್ಚತೆ, ರೈಲ್ವೆ ಮಾರ್ಗಗಳನ್ನ ಬದಲಾವಣೆ ಮಾಡಬೇಕು. ಬೆಂಗಳೂರಿನಿಂದ ಮೈಸೂರು, ಚಾಮರಾಜನಗರಕ್ಕೆ ಹೋಗುವ ರೈಲುಗಳನ್ನ ಹಾಸನದ ಜಂಕ್ಷನ್​ಗೆ ಬರುವ ತನಕ ಮಾಡಿದ್ರೆ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಮತ್ತು ಉತ್ತರ ಕರ್ನಾಟಕದ ಭಾಗದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಪ್ರವಾಸೋದ್ಯಮಕ್ಕೆ ಇಂಬುಕೊಡುತ್ತದೆ.

4. ಇನ್ನು ಹಾಸನ ಜಿಲ್ಲೆಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಮಲೆನಾಡ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ದಾಳಿ, ಹಾವಳಿ ಹೆಚ್ಚಾಗುತ್ತಿದ್ದು, ಜೊತೆಗೆ ಹೊಳೆನರಸೀಪುರ, ಚನ್ನರಾಯಪಟ್ಟಣ ಭಾಗದಲ್ಲಿ ಚಿರತೆಗಳ ಆರ್ಭಟ ಜೋರಾಗಿದ್ದು, ಜೂನ್ ತಿಂಗಳಲ್ಲಿಯೇ ಈ ಭಾಗದಲ್ಲಿ ಸುಮಾರು 5 ಚಿರತೆಗಳು ಸೆರೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಠಿಸಿದೆ. ಇದಲ್ಲದೇ ಮೂರು ದಿನಗಳ ಹಿಂದೆ, ಹಾಸನ ಹೊರವಲಯದ ಕೆಂಚಟ್ಟಹಳ್ಳಿ, ಭೂವನಹಳ್ಳಿ, ಚನ್ನರಾಯಪಟ್ಟಣದ ಕುಂದೂರು, ಅಗ್ರಹಾರದಲ್ಲಿ ಆನೆಗಳ ಚಲನವಲನಗಳು ದೊರೆತಿದ್ದು, ಬೇಲೂರಿನ ಹಳೇಬೀಡಿನಲ್ಲಿ ಆನೆಯಿಂದ ಓರ್ವ ಮಹಿಳೆಯ ಸಾವಿಗೀಡಾಗಿದ್ದು, ಕಾಡಾನೆಗಳ ಹಾವಳಿ ತಪ್ಪಿಸಲು ಆನೆ ಕಾರಿಡಾರ್ ನಿರ್ಮಾಣವಾಗಬೇಕು ಎಂಬುದನ್ನ ಈ ಬಜೆಟ್ ನಲ್ಲಿ ಜನರು ನಿರೀಕ್ಷೆ ಮಾಡ್ತಿದ್ದಾರೆ

5. ಹಾಗೆಯೇ ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆ ತೆರಿಗೆ ಸುಧಾರಣಾ ಕ್ರಮ ಈ ಬಾರಿಯ ಬಜೆಟ್ನ ಪ್ರಮುಖ ಅಂಶವಾಗಲಿದೆ. ಚುನಾವಣೆ ನಂತರ ಜನರಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದಂತೇ ಬಜೆಟ್ ಮಂಡಿಸಲಿದ್ದಾರೆಂಬ ನಂಬಿಕೆ ರೈತಾಪಿ ವರ್ಗದವರದ್ದು. ಕೇಂದ್ರದ ಹಿಡಿತದಲ್ಲಿರುವ ಸ್ವಾಮಿನಾಥ್ ವರದಿಯನ್ನ ಜಾರಿಗೆ ತರುವುದರಿಂದ ಹಿಡಿದು, ಬೆಳೆ ವಿಮೆ, ಫಸಲ್ ಭೀಮಾ ಯೋಜನೆ ರೈತರ ಪರವಾಗಿರದೇ ದಲ್ಲಾಳಿಗಳ ಪರವಾಗಿದೆ. ಅದನ್ನ ಬದಲಾಯಿಸಬೇಕು. ತರಕಾರಿ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯ ನಿಯಮಗಳು ಅವೈಜ್ಞಾನಿಕವಾಗಿದೆ. ಅದನ್ನ ಸರಿಪಡಿಸುವ ಯೋಜನೆ ರೂಪಿತವಾಗಬೇಕು.

6. ಜಿಲ್ಲೆ ತರಕಾರಿ ಬೆಳೆಯುವುದರಲ್ಲಿ 2ನೇ ಸ್ಥಾನದಲ್ಲಿದ್ದು,ಅವುಗಳ ಸಾಗಾಣಿಕೆಗೆ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕೆಲಸವಾಗಬೇಕು. ಈಗಾಗಲೇ ಭೂಮಿ ಸ್ವಾಧೀನವಾಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾದ್ರೆ, ಮುಂದಿನ 5-6 ವರ್ಷಗಳಲ್ಲಿ ಪ್ರವಾಸೋದ್ಯಮದ ಜೊತೆಗೆ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನ ವಿದೇಶಕ್ಕೆ ರಫ್ತು ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಯೋಜನೆ ರೂಪುಗೊಳ್ಳಬೇಕು. ಬದಲಿಗೆ ರಾಜಕೀಯ ಪ್ರೇರಿತವಾಗಿ ಮತ್ತೆ ವಿಮಾನ ನಿಲ್ದಾಣ ನೆನೆಗುದಿಗೆ ಬೀಳುವುದು ಬೇಡ ಎನ್ನುವುದು ರೈತಾಪಿ ವರ್ಗದವರ ಮಾತು.

7. ಆಲೂಗೆಡ್ಡೆ ಬೆಳೆಯನ್ನ ಕೋಲ್ಡ್ ಸ್ಟೋರೆಜ್ ನಲ್ಲಿರುವ ಪದ್ದತಿಯನ್ನ ಕೈಬಿಟ್ಟು, ಸಾಂಪ್ರದಾಯಕ ಪದ್ದತಿಗೆ ಒಲವು ತೋರುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಬಹುದು. ಅಂಗಮಾರಿ ರೋಗ ಭಾರದಂತೆ ಹೊಸ ಸಂಶೋಧನೆಯ ಮೂಲಕ ಬೀಜವನ್ನ ವಿತರಿಸುವ ಕೆಲಸವಾಗಬೇಕು. ಬೀಜಕ್ಕೆ ರೈತರು ಖರ್ಚು ಮಾಡುವ ಹಣವನ್ನ ಇದ್ರಿಂದ ಉಳಿಸಬಹುದು. ಈ ಬಾರಿ ಬರಗಾಲ ಉಲ್ಬಣಿಸಿದ್ದು, ಈ ಬಾರಿ ವಾಣಿಜ್ಯ ಬೆಳೆ ಆಲೂಗೆಟ್ಟೆ ಮತ್ತೆ ಮಂಕಾಗುವ ಸಾಧ್ಯತೆಯಿದ್ದು, ಅದಕ್ಕೆ ಪರ್ಯಾಯ ಮಾರ್ಗಸೂಚಿ ರೂಪಿಸಬೇಕು ಎಂಬುದು ನಮ್ಮ ರೈತ ಮುಖಂಡರ ಮಾತು.

ಇದಲ್ಲದೇ ಜನಸಾಮಾನ್ಯರ ನಿರೀಕ್ಷೆಗಳನ್ನ ನೋಡುವುದಾದ್ರೆ,

• ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆ ಘೋಷಣೆ ಮಾಡಬಹುದು.
• ಕೃಷಿ ಉಪಕರಣ, ರಸಗೊಬ್ಬರ ಖರೀದಿಗೆ ರೈತರ ಖಾತೆಗೆ ವಾರ್ಷಿಕ 12 ಸಾವಿರ ರೂ. ಜಮೆ ಸಾಧ್ಯತೆ
• ರೈತರ ಸಾಲದ ಪೂರ್ಣ ಬಡ್ಡಿ ಮನ್ನಾ ಸಾಧ್ಯತೆ
• ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಘೋಷಣೆ ಸಾಧ್ಯತೆ
• ಜಿಲ್ಲೆಯ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆಗೆ ಉಂಟಾಗುವ ಅಂಗಮಾರಿ ರೋಗಕ್ಕೆ ಸಂಶೋಧನಾ ಕೇಂದ್ರ ಸ್ಥಾಪನೆ.
• ನರೇಗಾದ ಕೂಲಿ ಹಣ ಹೆಚ್ಚಳ ಸಾಧ್ಯತೆ.
• ಜಿಎಸ್ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುಬಹುದಾ ಎಂಬುದನ್ನ ಜಿಲ್ಲೆಯ ಜನ ನಿರೀಕ್ಷೆ ಮಾಡಿದ್ದು, ಒಟ್ಟಾರೆ ರಾಜ್ಯದ ಜನರಷ್ಟೆಯಲ್ಲದೇ ಜಿಲ್ಲೆಯ ಜನರು ಕೂಡಾ ಕೇಂದ್ರದ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು, ಕೃಷಿ, ಕೈಗಾರಿಕೆ, ನಿರುದ್ಯೋಗ ಸಮಸ್ಯೆ, ಅಂಗಮಾರಿ ರೋಗ, ವಿಮಾನ ನಿಲ್ದಾಣದ ಕನಸುಗಳು ಈ ಬಾರಿಯ ಬಜೆಟ್ ನಲ್ಲಿ ನನಸಾಗಲಿವೆಯಾ ಎಂಬುದನ್ನ ಕಾದುನೋಡಬೇಕಿದೆ.

Intro:ಹಾಸನ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 2ನೇ ಅವಧಿಯ 2019-20ರ ಸಾಲಿನ ಬಜೆಟ್ ಮಂಡನೆಯನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 5ರಂದು ಮಂಡಿಸಲಿದ್ದು, ಎಂದಿನಂತೆಯೇ ಈ ಬಾರಿ ಬಜೆಟ್ ಮೇಲೆ ಕರ್ನಾಟಕದ ಜನರ ನಿರೀಕ್ಷೆ ಬಹಳಷ್ಟಿದ್ದು, ಹಾಸನದಲ್ಲಿಯೂ ನಿರೀಕ್ಷೆಯ ಭರಪೂರವನ್ನೆ ಹೊಂದಿದ್ದಾರೆ.

ಲೋಕಸಭಾ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್ ನ್ನ ಮಾಜಿ ಸಚಿವ ಪಿಯೂಶ್ ಗೋಯಲ್ ಮಂಡಿಸಿದ್ದರು. ಸದ್ಯ ಎರಡನೇ ಅವಧಿಗೆ ಎನ್ಡಿಎ ಸರಕಾರ ಅಧಿಕಾರ ಹಿಡಿದಿದೆ. ಹಾಗಾಗಿಯೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದ್ದು, ರೈತ ಪರವಾಗಿರುತ್ತೋ ಅಥವಾ ಬಂಡವಾಳದಾರರಿಗೆ ಅನುಕೂಲವಾಗಿರುತ್ತೋ ಎಂಬುದು ಜುಲೈ 5 ರಂದು ಗೊತ್ತಾಗಲಿದೆ

ಬಜೆಟ್ ಮೇಲೆ ಹಾಸನದ ಜನತೆ ಕೂಡಾ ನೀರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

1. ನಿರುದ್ಯೋಗ ಸಮಸ್ಯೆ ದೂರ: ಹೌದು ಹಾಸನದ ಈ ಬಾರಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯ ಪಾತ್ರವಹಿಸಿದೆ. ಅದಕ್ಕೆ ಇಂಬುಕೊಡುವಂತೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯ ಫಲಿತಾಂಶದಲ್ಲಿ ಈ ಬಾರಿ ಗಣನೀಯ ಸಾಧನೆ ಮಾಡಿದ್ದು, ಜಿಲ್ಲೆಯ ವಿದ್ಯಾವಂತ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಇದನ್ನ ನಿವಾರಣೆಗೆ ಹೊಸ ಯೋಜನೆಗಳನ್ನ ನೀಡುವೆರೆ ಎಂಬುದನ್ನ ಕಾಯುತ್ತಿದ್ದಾರೆ.

2. ನಿರ್ಮಲಾ ಸೀತರಾಮ್ ಮಂಡಿಸಲಿರುವ ಬಜೆಟ್ನಲ್ಲಿ ತೆರಿಗೆ ಸುಧಾರಣೆ ಮತ್ತು ತೆರಿಗೆ ದರ ಕಡಿತದ ಕುರಿತು ಘೋಷಣೆ ಸಾಧ್ಯತೆಯಿದ್ದು, ಮೆಡಿಕಲ್ ಇನ್ಸೂರೆನ್ಸ್ನಲ್ಲೂ ದರ ಕಡಿತ ಮಾಡುವ ನಿರೀಕ್ಷೆಯಿದೆ. ಅದ್ರೆ ಜೊತೆಗೆ ಮಧ್ಯಮ ವರ್ಗದ ಸಂಬಳಾಧಾರಿತ ನೌಕರರಿಗೆ 5ಲಕ್ಷದ ವರೆಗೆ ವಿನಾಯ್ತಿಯನ್ನ ಮುಂದುವರೆಸಿಕೊಂಡು ಹೋಗುವರೆ ಎಂಬ ನಿರೀಕ್ಷೆ ಕುಡಾ ಇದೆ.

3. ಇನ್ನು ಹಾಸನ ಮತ್ತು ಅರಸೀಕೆರೆ ರೈಲ್ವೆ ಜಂಕ್ಷನ್ ಗೆ ಮೂಲಸೌಕರ್ಯಗಳಿಗೆ ಒತ್ತು ನೀಡುವಲ್ಲಿ ಹೆಚ್ಚಿನ ಗಮನಹರಿಸಬೇಕು. ವೈ-ಪೈ, ಸ್ವಚ್ಚತೆ, ರೈಲ್ವೆ ಮಾರ್ಗಗಳನ್ನ ಬದಲಾವಣೆ ಮಾಡಬೇಕು. ಬೆಂಗಳೂರಿನಿಂದ ಮೈಸೂರು, ಚಾಮರಾಜನಗರಕ್ಕೆ ಹೋಗುವ ರೈಲುಗಳನ್ನ ಹಾಸನದ ಜಂಕ್ಷನ್ ಗೆ ಬರುವ ತನಕ ಮಾಡಿದ್ರೆ, ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಮತ್ತು ಉತ್ತರ ಕರ್ನಾಟಕದ ಭಾಗದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮತ್ತು ಪ್ರವಾಸೋದ್ಯಮಕ್ಕೆ ಇಂಬುಕೊಡುತ್ತದೆ.

4. ಇನ್ನು ಹಾಸನ ಜಿಲ್ಲೆಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಮಲೆನಾಡ ಭಾಗದಲ್ಲಿ ಪ್ರತಿನಿತ್ಯ ಕಾಡಾನೆಗಳ ದಾಳಿ, ಹಾವಳಿ ಹೆಚ್ಚಾಗುತ್ತಿದ್ದು, ಜೊತೆಗೆ ಹೊಳೆನರಸೀಪುರ, ಚನ್ನರಾಯಪಟ್ಟಣ ಭಾಗದಲ್ಲಿ ಚಿರತೆಗಳ ಆರ್ಭಟ ಜೋರಾಗಿದ್ದು, ಜೂನ್ ತಿಂಗಳಲ್ಲಿಯೇ ಈ ಭಾಗದಲ್ಲಿ ಸುಮಾರು 5 ಚಿರತೆಗಳು ಸೆರೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಠಿಸಿದೆ. ಇದಲ್ಲದೇ ಮೂರು ದಿನಗಳ ಹಿಂದೆ, ಹಾಸನ ಹೊರವಲಯದ ಕೆಂಚಟ್ಟಹಳ್ಳಿ, ಭೂವನಹಳ್ಳಿ, ಚನ್ನರಾಯಪಟ್ಟಣದ ಕುಂದೂರು, ಅಗ್ರಹಾರದಲ್ಲಿ ಆನೆಗಳ ಚಲನವಲನಗಳು ದೊರೆತಿದ್ದು, ಬೇಲೂರಿನ ಹಳೇಬೀಡಿನಲ್ಲಿ ಆನೆಯಿಂದ ಓರ್ವ ಮಹಿಳೆಯ ಸಾವಿಗೀಡಾಗಿದ್ದು, ಕಾಡಾನೆಗಳ ಹಾವಳಿ ತಪ್ಪಿಸಲು ಆನೆ ಕಾರಿಡಾರ್ ನಿರ್ಮಾಣವಾಗಬೇಕು ಎಂಬುದನ್ನ ಈ ಬಜೆಟ್ ನಲ್ಲಿ ಜನರು ನಿರೀಕ್ಷೆ ಮಾಡ್ತಿದ್ದಾರೆ.

ಇದಲ್ಲದೇ ಜನಸಾಮಾನ್ಯರ ನಿರೀಕ್ಷೆಗಳನ್ನ ನೋಡುವುದಾದ್ರೆ,

•         ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆ ಘೋಷಣೆ ಮಾಡಬಹುದು.
•         ಕೃಷಿ ಉಪಕರಣ, ರಸಗೊಬ್ಬರ ಖರೀದಿಗೆ ರೈತರ ಖಾತೆಗೆ ವಾರ್ಷಿಕ 12 ಸಾವಿರ ರೂ. ಜಮೆ ಸಾಧ್ಯತೆ
•         ರೈತರ ಸಾಲದ ಪೂರ್ಣ ಬಡ್ಡಿ ಮನ್ನಾ ಸಾಧ್ಯತೆ
•         ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಘೋಷಣೆ ಸಾಧ್ಯತೆ
•         ಜಿಲ್ಲೆಯ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆಗೆ ಉಂಟಾಗುವ ಅಂಗಮಾರಿ ರೋಗಕ್ಕೆ ಸಂಶೋಧನಾ ಕೇಂದ್ರೆ ಸ್ಥಾಪನೆ.
•         ನರೇಗಾದ ಕೂಲಿ ಹಣ ಹೆಚ್ಚಳ ಸಾಧ್ಯತೆ.
•         ಜಿಎಸ್ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುಬಹುದಾ ಎಂಬುದನ್ನ ಜಿಲ್ಲೆಯ ಜನ ನಿರೀಕ್ಷೆ ಮಾಡಿದ್ದು,

ಬೈಟ್: ಚಂದ್ರಶೇಖರ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ.

5. ಹಾಗೆಯೇ ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆ ತೆರಿಗೆ ಸುಧಾರಣಾ ಕ್ರಮ ಈ ಬಾರಿಯ ಬಜೆಟ್ನ ಪ್ರಮುಖ ಅಂಶವಾಗಲಿದೆ. ಚುನಾವಣೆ ನಂತರ ಜನರಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದಂತೇ ಬಜೆಟ್ ಮಂಡಿಸಲಿದ್ದಾರೆಂಬ ನಂಬಿಕೆ ರೈತಾಪಿ ವರ್ಗದವರದ್ದು. ಕೇಂದ್ರದ ಹಿಡಿತದಲ್ಲಿರುವ ಸ್ವಾಮಿನಾಥ್ ವರದಿಯನ್ನ ಜಾರಿಗೆ ತರುವುದರಿಂದ ಹಿಡಿದು, ಬೆಳೆ ವಿಮೆ, ಫಸಲ್ ಭೀಮಾ ಯೋಜನೆ ರೈತರ ಪರವಾಗಿರದೇ ದಲ್ಲಾಳಿಗಳ ಪರವಾಗಿದೆ. ಅದನ್ನ ಬದಲಾಯಿಸಬೇಕು. ತರಕಾರಿ ಮತ್ತು ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯ ನಿಯಮಗಳು ಅವೈಜ್ಞಾನಿಕವಾಗಿದೆ. ಅದನ್ನ ಸರಿಪಡಿಸುವ ಯೋಜನೆ ರೂಪಿತವಾಗಬೇಕು.

6. ಜಿಲ್ಲೆ ತರಕಾರಿ ಬೆಳೆಯುವುದರಲ್ಲಿ 2ನೇ ಸ್ಥಾನದಲ್ಲಿದ್ದು,ಅವುಗಳ ಸಾಗಾಣಿಕೆಗೆ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕೆಲಸವಾಗಬೇಕು. ಈಗಾಗಲೇ ಭೂಮಿ ಸ್ವಾಧೀನವಾಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾದ್ರೆ, ಮುಂದಿನ 5-6 ವರ್ಷಗಳಲ್ಲಿ ಪ್ರವಾಸೋದ್ಯಮದ ಜೊತೆಗೆ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನ ವಿದೇಶಕ್ಕೆ ರಫ್ತು ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ. ಇದನ್ನ ಗಮನದಲ್ಲಿಟ್ಟುಕೊಂಡು ಯೋಜನೆ ರೂಪುಗೊಳ್ಳಬೇಕು. ಬದಲಿಗೆ ರಾಜಕೀಯ ಪ್ರೇರಿತವಾಗಿ ಮತ್ತೆ ವಿಮಾನ ನಿಲ್ದಾಣ ನೆನೆಗುದಿಗೆ ಬೀಳುವುದು ಬೇಡ ಎನ್ನುವುದು ರೈತಾಪಿ ವರ್ಗದವರ ಮಾತು.

7. ಆಲೂಗೆಡ್ಡೆ ಬೆಳೆಯನ್ನ ಕೋಲ್ಡ್ ಸ್ಟೋರೆಜ್ ನಲ್ಲಿರುವ ಪದ್ದತಿಯನ್ನ ಕೈಬಿಟ್ಟು, ಸಾಂಪ್ರದಾಯಕ ಪದ್ದತಿಗೆ ಒಲವು ತೋರುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಬಹುದು. ಅಂಗಮಾರಿ ರೋಗ ಭಾರದಂತೆ ಹೊಸ ಸಂಶೋಧನೆಯ ಮೂಲಕ ಬೀಜವನ್ನ ವಿತರಿಸುವ ಕೆಲಸವಾಗಬೇಕು. ಬೀಜಕ್ಕೆ ರೈತರು ಖರ್ಚು ಮಾಡುವ ಹಣವನ್ನ ಇದ್ರಿಂದ ಉಳಿಸಬಹುದು. ಈ ಬಾರಿ ಬರಗಾಲ ಉಲ್ಬಣಿಸಿದ್ದು, ಈ ಬಾರಿ ವಾಣಿಜ್ಯ ಬೆಳೆ ಆಲೂಗೆಟ್ಟೆ ಮತ್ತೆ ಮಂಕಾಗುವ ಸಾಧ್ಯತೆಯಿದ್ದು, ಅದಕ್ಕೆ ಪರ್ಯಾಯ ಮಾರ್ಗಸೂಚಿ ರೂಪಿಸಬೇಕು ಎಂಬುದು ನಮ್ಮ ರೈತ ಮುಖಂಡರ ಮಾತು.
ಬೈಟ್: ಕೊಟ್ಟೂರು ಶ್ರೀನಿವಾಸ್, ಜಿಲ್ಲಾಧ್ಯಕ್ಷ, ಹಾಸನ ಜಿಲ್ಲಾ ರೈತ ಸಂಘ .

ಒಟ್ಟಾರೆ ರಾಜ್ಯದ ಜನರಷ್ಟೆಯಲ್ಲದೇ ಜಿಲ್ಲೆಯ ಜನರು ಕೂಡಾ ಕೇಂದ್ರದ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು, ಕೃಷಿ, ಕೈಗಾರಿಕೆ, ನಿರುದ್ಯೋಗ ಸಮಸ್ಯೆ, ಅಂಗಮಾರಿ ರೋಗ, ವಿಮಾನ ನಿಲ್ದಾಣದ ಕನಸುಗಳು ಈ ಬಾರಿಯ ಬಜೆಟ್ ನಲ್ಲಿ ನನಸಾಗಲಿವೆಯಾ ಎಂಬುದನ್ನ ಕಾದುನೋಡಬೇಕಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.