ETV Bharat / state

ಕಾರ್ಗಿಲ್​  ಕಲಿಗಳಿಗೆ ದೀಪ ನಮನ: ಬಲಿದಾನದ ಸ್ಮರಣೆ

1999 ರ ಕಾರ್ಗಿಲ್​ ಯುದ್ಧದ ವಿಜಯೋತ್ಸವ ಸ್ಮರಣಾರ್ಥ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವೀರಯೋಧರಿಗೆ ವಿಭಿನ್ನವಾಗಿ ಗೌರವ ನಮನ ಅರ್ಪಿಸಲಾಯ್ತು.

ಕಾರ್ಗಿಲ್ ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ
author img

By

Published : Jul 27, 2019, 6:47 AM IST

ಹಾಸನ: ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆ ವೀರಮರಣವನ್ನಪ್ಪಿದ ಸೈನಿಕರಿಗೆ ದೀಪ ನಮನದ ಮೂಲಕ ಗೌರವ ಸಮರ್ಪಿಸಲಾಯಿತು.

ಚನ್ನರಾಯಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಇಂಡಿಯನ್ ಕ್ರಿಕೆಟರ್ಸ್ ಸಂಘದ ವತಿಯಿಂದ ಕಾರ್ಗಿಲ್ ಯೋಧರಿಗೆ ದೀಪ ನಮನ ಕಾರ್ಯಕ್ರಮವನ್ನು ನಡೆಸಲಾಯಿತು. ಹುತಾತ್ಮ ಯೋಧರನ್ನು ನೆನೆದು, ಜ್ಯೋತಿ ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಕಾರ್ಗಿಲ್ ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ

ಸಾಮಾಜಿಕ ಕಾರ್ಯಕರ್ತ ಆನಂದ್ ಮಾತನಾಡಿ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನ ಪ್ರತಿವರ್ಷ ಜು.26ರಂದು ಆಚರಿಸುತ್ತಾ ಬಂದಿದ್ದು, ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲಾಗುತ್ತದೆ ಎಂದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಚಂದ್ರಶೇಖರ್ ಆಜಾದ್ ಮುಂತಾದವರು ಸ್ವಾತಂತ್ರ ಹೋರಾಟದ ಸಮಯದಲ್ಲಿ ಅನುಭವಿಸಿದ ಕಷ್ಟ, ಅವರ ಸಾಹಸ ಕಥೆಗಳನ್ನು ಹೇಳುತ್ತಾ ವೀರ ಯೋಧರ ಸಾಹಸಗಾಥೆಯನ್ನು ಕೂಡ ನೆನೆದರು.

Intro:ಹಾಸನ: ಕಾರ್ಗಿಲ್ ಯುದ್ಧ ನಡೆದು ಇಂದಿಗೆ ಇಪ್ಪತ್ತು ವರ್ಷಗಳು ಸಂದಿವೆ ಕಾರ್ಗಿಲ್ ವಿಜಯೋತ್ಸವದ ನಿಮಿತ್ತ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗೆ ದೇಶದಾದ್ಯಂತ ಗೌರವ ಸಮರ್ಪಣೆ ಸಲ್ಲಿಸಲಾಯಿತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವಿಭಿನ್ನ ರೀತಿಯಾಗಿ ವೀರಯೋಧರಿಗೆ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಣೆ ಮಾಡಿದರು.

ಚನ್ನರಾಯಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಪಟ್ಟಣದ ಇಂಡಿಯನ್ ಕ್ರಿಕೆಟರ್ಸ್ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಗಿಲ್ ಯೋಧರಿಗೆ ದೀಪ ನಮನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಘದ ನೂರಾರು ಸದಸ್ಯರು ಮೇಣದ ಬತ್ತಿಯನ್ನು ಹಚ್ಚಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಕೆಲವೊತ್ತು ದೀಪ ಬೆಳಗಿಸಿ ವಿನೂತನವಾಗಿ ಆಚರಣೆ ಮಾಡಿದರು.

ಭಾರತೀಯ ಸೈನಿಕರ ಶಕ್ತಿ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತೋರಿಸಿಕೊಟ್ಟಿದ್ದು 1999 ರಲ್ಲಿ ನಡೆದ ಕಾರ್ಗಿಲ್ ಎಂಬ ಮಹಾಯುದ್ಧ. ಪಾಕಿಸ್ತಾನದ ಉಗ್ರರ ಎದುರು ಎದೆಯೊಡ್ಡೆ ಸೇನೆಯನ್ನು ಹೊಡೆದುರುಳಿಸಿದ್ದು ನಮ್ಮ ಭಾರತೀಯ ಸೈನಿಕರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನ ಪ್ರತಿವರ್ಷ ಜು.26ರಂದು ಆಚರಿಸುತ್ತಾ ಬಂದಿದ್ದು, ಸೈನಿಕರ ತ್ಯಾಗ ಮತ್ತು ಬಲಿದಾನ ನೆನಪಿಸುವುದರ ಜೊತೆಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಕಾರ್ಗಿಲ್ ವಿಜಯೋತ್ಸವವನ್ನು ಇಂದು ಯುದ್ಧದಲ್ಲಿ ಮಡಿದ ಯೋಧರಿಗೆ ದೀಪ ಹಚ್ಚುವ ಮೂಲಕ ಗೌರವ ನಮನ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಸಮಾಜಿಕ ಕಾರ್ಯಕರ್ತ ಆನಂದ್ 200 ವರ್ಷಗಳು ಆಡಿದ ಬ್ರಿಟಿಷರನ್ನು ದೇಶದಿಂದ ಓಡಿಸಲು ಒಂದು ಸಾಕಷ್ಟು ಮಂದಿ ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದರು ಮಹಾತ್ಮಗಾಂಧಿ, ಬಾಲಗಂಗಾಧರನಾಥ ತಿಲಕ್ ಚಂದ್ರಶೇಖರ್ ಆಜಾದ್, ಮುಂತಾದವರು ಸ್ವಾತಂತ್ರ ಹೋರಾಟದ ಸಮಯದಲ್ಲಿ ಅನುಭವಿಸಿದ ಕಷ್ಟ ಮತ್ತು ಅವರ ಸಾಹಸ ಕಥೆಗಳನ್ನು ಹೇಳುವ ಮೂಲಕ ವೀರ ಯೋಧರ ಸಾಹಸಗಾಥೆಯನ್ನು ಕೂಡ ನೆನೆದರು.

ಇಂಡಿಯನ್ ಕ್ರಿಕೆಟರ್ಸ್ ನಟರಾಜ್, ಸ್ಟುಡಿಯೋ ಪ್ರಸಾದ್ ಕಾಂಗ್ರೆಸ್ ಮುಖಂಡ ಪೂರ್ಣಿಮಾ ವೆಂಕಟೇಶ್, ಮಾತೃಭೂಮಿ ವೃದ್ಧಾಶ್ರಮದ ಅಧ್ಯಕ್ಷ ಜಯಂ ನಾಗಣ್ಣ, ಕನ್ನಡ ಪರ ಹೋರಾಟಗಾರ ಕನ್ನಡ ವಾಸು, ಮುಂತಾದವರು ದೀಪ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.