ETV Bharat / state

ಜೆಡಿಎಸ್​ಗೆ ಯಾವುದೇ ರಾಜಕೀಯ ಸಿದ್ಧಾಂತ ಇಲ್ಲ: ಮಾಜಿ ಸಚಿವ ಮಹದೇವಪ್ಪ ಟೀಕೆ - ಮಾಜಿ ಸಚಿವ ಮಹದೇವಪ್ಪ ಸುದ್ದಿ

ಜೆಡಿಎಸ್​ಗೆ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತ ಇಲ್ಲವೆಂದು ಮಾಜಿ ಸಚಿವ ಹೆಚ್​ ಸಿ ಮಹದೇವಪ್ಪ ಟೀಕಿಸಿದ್ದಾರೆ.

H.C Mahadevappa ,ಎಚ್. ಸಿ ಮಹದೇವಪ್ಪ
author img

By

Published : Nov 10, 2019, 4:59 PM IST

ಹಾಸನ: ಜೆಡಿಎಸ್​ನವರಿಗೆ ರಾಜಕೀಯ ಸಿದ್ಧಾಂತವೇ ಇಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೊ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗೋದೆ ಆ ಪಕ್ಷದ ನಾಯಕರ ಕೆಲಸವಾಗಿದೆ ಎಂದು ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಮಹದೇವಪ್ಪ ಸುದ್ದಿಗೋಷ್ಟಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮೊದಲು ಜೆಡಿಎಸ್ ಪಕ್ಷದಲ್ಲಿದ್ದಾಗ ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ವೈರಿಗಳಾಗಿದ್ದರು. ಆದ್ರೆ ಈಗ ಜೆಡಿಎಸ್​ನವರು ಹಿಂದೆ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಬಳಿಕ 14 ತಿಂಗಳ ಕಾಲ ಕಾಂಗ್ರೆಸ್​ ಪಕ್ಷದೊಂದಿಗೆ ಸರ್ಕಾರ ರಚನೆ ಮಾಡಿದ್ದರು. ಜೆಡಿಎಸ್​ ಅಧಿಕಾರದಲ್ಲಿರುವ ಪಕ್ಷಕ್ಕೆ ಜಾರಿಕೊಳ್ಳುವ ಸಮಯ ಸಾಧಕ ಪಕ್ಷ. ಅವರಿಗೆ ರಾಜಕೀಯದ ಸಿದ್ಧಾಂತದ ಸ್ಪಷ್ಟತೆಯಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ಜೆಡಿಎಸ್​ನವರು ಯಾರನ್ನು ಕೋಮುವಾದಿ ಎಂದು ವಿರೋಧ ಮಾಡಿದ್ದರೋ ಅವರ ಜೊತೆಗೆ ಸೇರಿ ಸರ್ಕಾರ ರಚನೆ ಮಾಡುವುದು, ಚುನಾವಣೆ ಎದುರಿಸುವುದು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರ ನೈತಿಕ ಬಲವನ್ನು ಕುಗ್ಗಿಸಿದಂತಾಗುತ್ತದೆ. ಹಾಸನದಲ್ಲಿ ಕಾಂಗ್ರೆಸ್ ಪಕ್ಷ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಕರ್ತರನ್ನು ಬಲಪಡಿಸುವ ನಿಟ್ಟಿನಲ್ಲಿ ಗೊಂದಲಗಳನ್ನು ಸರಿದೂಗಿಸಿಕೊಂಡು ಒಟ್ಟಾಗಿ ನಾವೆಲ್ಲರೂ ಪ್ರಯತ್ನ ಮಾಡುತ್ತೇವೆ ಎಂದು ಮಹದೇವಪ್ಪ ಹೇಳಿದ್ರು.

ಇನ್ನು, ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ ಅವರು, ಟಿಪ್ಪು ಓರ್ವ ಸ್ವಾತಂತ್ರ್ಯ ಸೇನಾನಿ. ಹಿಂದೂ ಧಾರ್ಮಿಕ ವಿಸ್ತರಣೆಗೆ ಅನೇಕ ಕೊಡುಗೆಗಳನ್ನು ನೀಡಿದ್ದ. ಶ್ರೀರಂಗಪಟ್ಟಣದ ಸುತ್ತಮುತ್ತ ನಿರ್ಮಾಣವಾಗಿರುವಂತಹ ಹಲವು ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದ. ಅಲ್ಲದೆ ರಂಗನಾಥಸ್ವಾಮಿ ದೇವಾಲಯ ಮತ್ತು ಅದರ ಪಕ್ಕದಲ್ಲಿರುವ ಮಸೀದಿ ಇವತ್ತು ಏನಾದರೂ ತಾಂತ್ರಿಕತೆಯಲ್ಲಿ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಟಿಪ್ಪುವೇ ಕಾರಣ ಎಂದು ಮಹದೇವಪ್ಪ ಅವರು ಟಿಪ್ಪು ಪರ ಕಾಂಗ್ರೆಸ್​ ನಿಲುವನ್ನು ಸಮರ್ಥಿಸಿಕೊಂಡರು.

Intro:ಹಾಸನ: ಜೆಡಿಎಸ್ ನವರಿಗೆ ರಾಜಕೀಯ ಸಿದ್ಧಾಂತವೇ ಇಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅವರ ಪಕ್ಷದ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗೋದೆ ಅವರ ಕೆಲಸ ಅಂತ ಜೆಡಿಎಸ್ ಪಕ್ಷವನ್ನು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಖಾರವಾಗಿಯೇ ಟೀಕಿಸಿದರು.

ಇನ್ನು ನಾವು ಮೊದಲು ಜೆಡಿಎಸ್ ಪಕ್ಷದಲ್ಲಿದ್ದಾಗ ನಮಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಮಾನ ವೈರಿಗಳಾಗಿದ್ದರು. ಆದರೆ ಈಗ ಜೆಡಿಎಸ್ ನವ್ರು ಹಿಂದೆ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ರು. ಬಳಿಕ 14 ತಿಂಗಳ ಕಾಲ ನಮ್ಮ ಪಕ್ಷದೊಂದಿಗೆ ಸರ್ಕಾರ ರಚನೆ ಮಾಡಿದ್ರು. ಯಾವ ಪಕ್ಷ ಅಧಿಕಾರದಲ್ಲಿರುವ ಪಕ್ಷಕ್ಕೆ ಜಾರಿಕೊಳ್ಳುವ ಸಮಯಸಾಧಕ ಪಕ್ಷ. ಅವರಿಗೆ ರಾಜಕೀಯದ ಸಿದ್ಧಾಂತದ ಸ್ಪಷ್ಟತೆಯಿಲ್ಲ. ಎಂಬುದನ್ನು ಇವರ ಕಾರ್ಯವೈಖರಿಯೇ ಎತ್ತಿ ತೋರಿಸುತ್ತದೆ ಎಂದ್ರು.

ಜೆಡಿಎಸ್ ನವರು ಯಾರನ್ನು ಕೋಮುವಾದಿ ಎಂದು ವಿರೋಧ ಮಾಡಿದ್ದರೋ ಅವರ ಜೊತೆಗೆ ಸೇರಿ ಸರ್ಕಾರ ರಚನೆ ಮಾಡುವುದು ಮತ್ತು ಚುನಾವಣೆ ಎದುರಿಸುವುದು ಸರಿಯಲ್ಲ. ಇದ್ರಿಂದ ನಮ್ಮ ಕಾರ್ಯಕರ್ತರ ನೈತಿಕ ಬಲವನ್ನು ಕುಗ್ಗಿಸುತ್ತದೆ ಎಂಬುದು ನಮ್ಮ ಕಾರ್ಯಕರ್ತರ ಅಭಿಪ್ರಾಯ ಎಂದ ಅವರು ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಕರ್ತರನ್ನು ಬಲಪಡಿಸುವ ನಿಟ್ಟಿನಲ್ಲಿ ಗೊಂದಲಗಳನ್ನು ಸರಿದೂಗಿಸಿಕೊಂಡು ಒಟ್ಟಾಗಿ ನಾವೆಲ್ಲರೂ ಪ್ರಯತ್ನ ಮಾಡುತ್ತೇವೆ ಅಂತ ಹೇಳಿದ್ರು.

ಇನ್ನು ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ ಅವರು ಟಿಪ್ಪು ಒಬ್ಬ ಸ್ವಾತಂತ್ರ್ಯ ಸೇನಾನಿ. ಹಿಂದೂ ಧಾರ್ಮಿಕ ವಿಸ್ತರಣೆಗೆ ಅನೇಕ ಕೊಡುಗೆಗಳನ್ನು ನೀಡುದವರಲ್ಲಿ ಆತ ಕೂಡ ಒಬ್ಬ. ಶ್ರೀರಂಗಪಟ್ಟಣದ ಸುತ್ತಮುತ್ತ ನಿರ್ಮಾಣವಾಗಿರುವಂತಹ ಹಲವು ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾನೆ. ಅಲ್ಲದೆ ರಂಗನಾಥಸ್ವಾಮಿ ದೇವಾಲಯ ಮತ್ತು ಅದರ ಪಕ್ಕದಲ್ಲಿರುವ ಮಸೀದಿ ಇವತ್ತು ಏನಾದರೂ ತಾಂತ್ರಿಕತೆಯಲ್ಲಿ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಅಂತ ಮತ್ತೊಮ್ಮೆ ಪುನರುಚ್ಚಾರ ಮಾಡಿದರು.

*ಬೈಟ್: ಹೆಚ್. ಸಿ. ಮಹದೇವಪ್ಪ ಮಾಜಿ ಸಚಿವ*

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.