ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ಜೋಳ, ರಾಗಿ, ಭತ್ತವನ್ನು ಖರೀದಿಗೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಾಸನದ ಎಪಿಎಂಸಿ ಆವರಣದಲ್ಲಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಯನ್ನು ಅಡಮಾನ ಮಾಡಿಕೊಂಡು ಸರ್ಕಾರ ನಿಗಧಿ ಮಾಡಿದ ಶೇ.70 ರಷ್ಟು ಹಣವನ್ನು ಪಾವತಿಸಬೇಕು ಹಾಗು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ಸರ್ಕಾರ ನೇರವಾಗಿ ದವಸ ಧಾನ್ಯಗಳನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.
ತೂಕ ಮಾಡಲು ವಿದ್ಯುತ್ ಚಾಲಿತ ಯಂತ್ರಗಳನ್ನು ಸರ್ಕಾರವೇ ನಿರ್ವಹಿಸಿ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಬೇಕು. ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಡಲು ಗೋದಾಮು, ಶಿಥಲೀಕರಣ ವ್ಯವಸ್ಥೆಯನ್ನು ಸಮರ್ಪಕವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಡಾ.ಸ್ವಾಮಿನಾಥ್ ಆಯೋಗದ ವರದಿಯನ್ನು ಶೀಘ್ರವಾಗಿ ಜಾರಿಮಾಡಬೇಕು.ಜೋಳಕ್ಕೆ ನಿಗಧಿಪಡಿಸಿರುವ ದರವನ್ನು ನೀಡಬೇಕು. ಅತಿವೃಷ್ಟಿಹಾಗೂ ಅನಾವೃಷ್ಟಿಯಿಂದ ನಾಶವಾಗಿರುವ ಬೆಳೆ ಶೀಘ್ರ ಪರಿಹಾರಬೇಕು ಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತ್ಯಾವಿಹಳ್ಳಿ ಲಕ್ಷ್ಮಣ, ಹೊನ್ನಾವರ ಸಿದ್ದಪ್ಪ,ಮಲ್ಲೇಶಣ್,ವೆಂಕಟರಾಮು, ಚೆಲುವಣ್ಣ ಮತ್ತಿರರು ಇದ್ದರು.