ETV Bharat / state

ಹಾಸನ: ದೇಶದ 3ನೇ ಹೈಟೆಕ್ ಹಾಲು ಉತ್ಪಾದನಾ ಘಟಕ ನಾಳೆಯಿಂದ ಕಾರ್ಯಾರಂಭ - Hassan

ಹಾಸನದ ಬಿಎಂ ರಸ್ತೆಯಲ್ಲಿರುವ ಹಾಸನ ಹಾಲು ಒಕ್ಕೂಟದಿಂದಲೇ ಈ ಅತ್ಯಾಧುನಿಕ ಘಟಕ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ. ಬಹುತೇಕ ಯಂತ್ರೋಪಕರಣಗಳೇ ಇಲ್ಲಿ ಎಲ್ಲ ಕೆಲಸಗಳನ್ನು ನಿರ್ವಹಿಸಲಿದ್ದು, ಇಟಲಿ ಹಾಗೂ ಜರ್ಮನ್ ನ ತಂತ್ರಜ್ಞಾನವನ್ನು ಘಟಕ ಹೊಂದಿರುವುದು ವಿಶೇಷ.

Hassan
ಹಾಸನದಲ್ಲಿ ದೇಶದ ಮೂರನೇ ಹೈಟೆಕ್ ಹಾಲಿನ ಘಟಕ ನಾಳೆ ಶುಭಾರಂಭ
author img

By

Published : Oct 14, 2021, 10:13 PM IST

ಹಾಸನ: ದೇಶದಲ್ಲಿಯೇ 3ನೇ ಸ್ಥಾನಗಳಿಸಿರುವ ಹಾಸನ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ಈಗ ಮತ್ತೊಂದು ಹಿರಿಮೆಗೆ ಪಾತ್ರವಾಗುತ್ತಿದೆ. ದೇಶದಲ್ಲಿಯೇ 3ನೇ ಹಾಗೂ ದಕ್ಷಿಣ ಭಾರತದ ಮೊಟ್ಟ ಮೊದಲ, ಸುವಾಸಿತ ಹಾಲು ಉತ್ಪಾದನಾ ಘಟಕ ಬರೋಬ್ಬರಿ 167 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಅ. 15ರಿಂದ ಕಾರ್ಯಾರಂಭ ಮಾಡಲಿದೆ.

ಹಾಸನದಲ್ಲಿ ದೇಶದ ಮೂರನೇ ಹೈಟೆಕ್ ಹಾಲಿನ ಘಟಕ ನಾಳೆ ಶುಭಾರಂಭ..

ಈಗಾಗಲೇ ಪ್ರಾಯೋಗಿಕ ಚಾಲನೆ ನೀಡಲಾಗಿದ್ದು, ಇಟಲಿ ಹಾಗೂ ಜರ್ಮನಿಯಿಂದ ಬಂದಿರುವ ಅತ್ಯಾಧುನಿಕ ಕಂಪ್ಯೂಟರೈಸ್ಡ್​ ಯಂತ್ರಗಳ ಸಹಾಯದಿಂದ ಗಂಟೆಗೆ 30 ಸಾವಿರ ಬಾಟಲ್ ಹಾಲು ತಯಾರಾಗಲಿದ್ದು, ನಿತ್ಯ ಒಂದು ಲಕ್ಷ ಲೀಟರ್ ಹೆಚ್ವುವರಿ ಹಾಲನ್ನು ಬಳಕೆ ಮಾಡಿ ರೈತರಿಗೆ ಲಾಭ ಮಾಡಿಕೊಡುವ ಮಹತ್ವದ ಯೋಜನೆ ಇದಾಗಿದೆ.

ನಾಳೆ ಅಧಿಕೃತವಾಗಿ ಚಾಲನೆ

ಕರ್ನಾಟಕ ರಾಜ್ಯ ಹಾಲು ಉತ್ಪಾದಕ ಮಹಾಮಂಡಲದ ಅಡಿ ಕೆಲಸ ಮಾಡುವ ಹಾಸನ ಹಾಲು ಒಕ್ಕೂಟ ಮತ್ತೊಂದು ಮಹತ್ತರ ಸಾಧನೆ ಮಾಡಿ ದೇಶದಲ್ಲಿಯೇ ಹಿರಿಮೆಗೆ ಪಾತ್ರವಾಗುತ್ತಿದೆ. ಈಗಾಗಲೆ ಘಟಕಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗಿದ್ದು, ನಾಳೆಯಿಂದ ಅಧಿಕೃತವಾಗಿ ಚಾಲನೆಗೊಳ್ಳಲಿದೆ.

Hassan
ಹಾಸನದಲ್ಲಿ ದೇಶದ ಮೂರನೇ ಹೈಟೆಕ್ ಹಾಲಿನ ಘಟಕ ನಾಳೆ ಶುಭಾರಂಭ

25 ರಾಜ್ಯಗಳಲ್ಲಿ ಹಾಲಿನ ಉತ್ಪನ್ನಗಳು ಮಾರಾಟ

ವರ್ಷದ ಹಿಂದೆಯೇ ಚಾಲನೆ ಸಿಗಬೇಕಿದ್ದ ಘಟಕ ಕೊರೊನಾ ಕಾರಣದಿಂದ ಇದೀಗ ಕಾರ್ಯಾರಂಭ ಮಾಡುತ್ತಿದೆ. ಒಂದು ಗಂಟೆಗೆ 30 ಸಾವಿರ ಬಾಟಲ್​ನಂತೆ ದಿನಕ್ಕೆ 5 ಲಕ್ಷದ 40 ಸಾವಿರ ಬಾಟಲ್ ಹಾಲು ತಯಾರಾಗಲಿದೆ. ಬಾದಾಮ್ ಮಿಲ್ಕ್, ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ, ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್, ಚಾಕೋ, ಕೇಸರ್, ಸೋಯಾ ಹೀಗೆ ಹತ್ತಾರು ಫ್ಲೇವರ್​ಗಳಲ್ಲಿ ಸುವಾಸಿತ ಹಾಲು ಉತ್ಪಾದನೆಯಾಗಿ ಬಾಟಲ್ ಸೇರಲಿದೆ.

ಜತೆಗೆ ಹೆಚ್ಚು ದಿನ ಬಾಳಿಕೆ ಬರುವ ಪ್ಲೇನ್ ಹಾಲು, ಮಸಾಲ ಮಜ್ಜಿಗೆ, ಲಸ್ಸಿ ಕೂಡ ಇಲ್ಲಿ ಉತ್ಪಾದನೆಯಾಗಲಿದ್ದು, ದೇಶದ 25 ರಾಜ್ಯಗಳಲ್ಲಿ ಈ ಹಾಲಿನ ಉತ್ಪನ್ನಗಳು ಮಾರಾಟ ಆಗಲಿದೆ.

ರೈತರಿಗೆ ಹೆಚ್ಚಿನ ನೆರವು

ಶುಚಿ, ರುಚಿಗೆ ಆದ್ಯತೆ ನೀಡಿ, ಸುರಕ್ಷಿತವಾದ ಗುಣಮಟ್ಟದ ಹಲವು ಬಗೆಯ ಸುವಾಸಿತ ಹಾಲು ದೇಶದಾದ್ಯಂತ ಮಾರಾಟಕ್ಕೆ ಸಿದ್ದಗೊಳ್ಳಲಿದೆ. ಹಾಸನ ಹಾಲು ಒಕ್ಕೂಟದಲ್ಲಿ ನಿತ್ಯ ಒಂದು ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲಾಗುತ್ತಿತ್ತು, ಈಗ ಈ ಘಟಕ ಸಿದ್ಧವಾಗಿರುವುದರಿಂದ ಈ ಹೆಚ್ಚುವರಿ ಹಾಲು ಸಮರ್ಪಕವಾಗಿ ಬಳಕೆಯಾಗಲಿದೆ. ಇದರಿಂದ ಹೆಚ್ಚುವರಿ ಲಾಭ ಕೂಡ ಸಿಗಲಿದೆ. ಈ ಲಾಭದಲ್ಲಿ ರೈತರಿಗೆ ಹೆಚ್ಚಿನ ನೆರವು ಸಿಗಲಿದೆ.

ದೇಶದ 25 ರಾಜ್ಯಗಳಲ್ಲಿ ನಮ್ಮ ನಂದಿನಿ ಬ್ರಾಂಡ್​ನ ಈ ಸುವಾಸಿತ ಹಾಲು ಮಾರಾಟವಾಗಲಿದ್ದು, ಇದರಿಂದ ನಮ್ಮ ಬ್ರಾಂಡ್ ಹೆಚ್ಚು ಜನಪ್ರಿಯವಾಗಲಿದೆ. ಅಲ್ಲದೇ ಇದರಿಂದ ರೈತರ ಹೈನುಗಾರಿಕೆಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ಮಾಹಿತಿ ನೀಡಿದರು.

ಈ ಘಟಕ ಉದ್ಘಾಟನೆ ಜತೆಗೆ ಹಾಸನ ಹಾಲು ಒಕ್ಕೂಟ ಹೊಸದಾಗಿ ಕೆಐಎಡಿಬಿ ಸಮೀಪದ ಕೌಶಿಕ ಗ್ರಾಮದ 60 ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣ ಕೂಡ ಮಾಡುತ್ತಿದ್ದು, ಇದರಿಂದ ಈ ಭಾಗದ ಜಿಲ್ಲೆಗಳ ರೈತರಿಗೆ ನೆರವಾಗಲಿದೆ.

ಒಟ್ಟಿನಲ್ಲಿ ಒಂದಿಲ್ಲೊಂದು ಹೊಸ ಯೋಜನೆಗಳ ಮೂಲಕ ದೇಶದಲ್ಲಿಯೇ ಗಮನ ಸೆಳೆಯುವ ಹಾಸನ ಹಾಲು ಒಕ್ಕೂಟ ಈಗ ಮತ್ತೆ ಇಡೀ ದೇಶದ ಹೈನುಗಾರಿಕೆ ವಲಯ ತಿರುಗಿ ನೋಡುವ ಸಾಧನೆ ಮಾಡಿದೆ. ಇನ್ನು ಇದರಿಂದ ಬಂದ ಬಂದ ಲಾಭವನ್ನು ರೈತರಿಗೆ ನೀಡಲು ತಯಾರಾಗಿದ್ದು, ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಈ ಸಂದರ್ಭದಲ್ಲಿ ಇದು ಅನ್ನದಾತರಿಗೆ ಕೊಡುಗೆ ನೀಡಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.