ETV Bharat / state

ಮಾಜಿ ಪ್ರಧಾನಿಗಳ ತವರಲ್ಲಿ ಕೆಟ್ಟು ನಿಂತ ಬೀದಿ ದೀಪಗಳೇ ಕಳ್ಳ ಕಾಕರಿಗೆ ವರ... ಕತ್ತಲಲ್ಲಿ ನಡೆಯುತ್ತಿದೆ ಕೊಲೆ, ಅತ್ಯಾಚಾರ - Hassan due to street lighting problem

ಹಾಸನ ನಗರಸಭೆ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿಯಲ್ಲಿ ಕೂಡ ಹಿಂದೆ ಬಿದ್ದಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಬೀದಿ ದೀಪಗಳದ್ದೇ ದೊಡ್ಡ ಸಮಸ್ಯೆ, ಹಾಸನ ನಗರಸಭೆ ವತಿಯಿಂದ 35 ವಾರ್ಡ್​ ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿವೆ.

increasing-crime-in-hassan-due-to-street-lighting-problem
ಬೀದಿ ದೀಪದ ಸಮಸ್ಯೆಯಿಂದ ಹಾಸನದಲ್ಲಿ ಹೆಚ್ಚಾಗುತ್ತಿದೆಯಾ ಅಪರಾಧ ಪ್ರಕರಣ...?
author img

By

Published : Sep 26, 2020, 5:56 PM IST

ಹಾಸನ: ಹಾಸನ ಅಂದರೆ ರಾಜಕೀಯವಾಗಿ ತನ್ನದೇ ಆದಂತಹ ಹೆಸರು ಮಾಡಿದ ಜಿಲ್ಲೆ. ಅಭಿವೃದ್ಧಿ ವಿಚಾರದಲ್ಲಿ ಹಾಸನ ಹಿಂದೆ ಬಿದ್ದಿಲ್ಲ. ಮಾಜಿ ಪ್ರಧಾನಿಗಳನ್ನು ಕೊಟ್ಟಂತಹ ಜಿಲ್ಲೆ ಒಂದು ಕಡೆಯಾದರೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೂರು ಪಕ್ಷದ ನಾಯಕರುಗಳು ಕೂಡ ಪ್ರತಿ ಬಜೆಟ್ ನಲ್ಲೂ ಯಾವುದಾದರೂ ಒಂದು ಕೊಡುಗೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದಿ ದೀಪದ ಸಮಸ್ಯೆಯಿಂದ ಹಾಸನದಲ್ಲಿ ಹೆಚ್ಚಾಗುತ್ತಿದೆಯಾ ಅಪರಾಧ ಪ್ರಕರಣ...?

ಹಾಸನ ನಗರಸಭೆ ಆದ ಬಳಿಕ ಸದ್ಯ 35 ವಾರ್ಡ್ ಗಳನ್ನು ಹೊಂದಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗದ ಹಿನ್ನೆಲೆಯಲ್ಲಿ ಸದ್ಯ ಎರಡುವರೆ ವರ್ಷಗಳಿಂದಲೂ ಕೂಡ ನಗರಸಭೆಗೆ ಆಯ್ಕೆಯಾದ ಸದಸ್ಯರುಗಳಲ್ಲಿ ಅಧಿಕಾರವಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ಹೀಗಿರುವಾಗ ಹಾಸನ ನಗರಸಭೆ ವ್ಯಾಪ್ತಿಗೆ ಬರುವ ಕ್ಷೇತ್ರಾಭಿವೃದ್ಧಿ ಮರೀಚಿಕೆಯಾಗಿದೆ.

ಹಾಸನ ನಗರಸಭೆ ಜನಪ್ರತಿನಿಧಿಗಳು ಇಲ್ಲದೆ ಅಭಿವೃದ್ಧಿಯಲ್ಲಿ ಕೂಡ ಹಿಂದೆ ಬಿದ್ದಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಬೀದಿ ದೀಪಗಳದ್ದೇ ದೊಡ್ಡ ಸಮಸ್ಯೆ, ಹಾಸನ ನಗರಸಭೆ ವತಿಯಿಂದ 35 ವಾರ್ಡ್​ ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿವೆ. ಹಾಸನದ ಪ್ರಮುಖ ರಸ್ತೆಗಳಲ್ಲಿ ಕೆಲವೊಂದು ಕಡೆ ದೀಪಗಳೇ ಇರುವುದಿಲ್ಲ. ಹೀಗಾಗಿ ಪುಂಡ ಪೋಕರಿಗಳ ಆವಾಸ ಸ್ಥಾನವಾಗಿ ಬಿಟ್ಟಿದೆ.

ಪ್ರಮುಖ ರಸ್ತೆಗಳಲ್ಲಿ ಇಲ್ಲ ಬೀದಿ ದೀಪಗಳು:

ಹಾಸನ ನಗರದ ಎಮ್​​​ಜಿ ರಸ್ತೆಯಲ್ಲಿ ಕೆಲವೊಮ್ಮೆ ಬೀದಿದೀಪಗಳು ಉರಿಯುವುದಿಲ್ಲ. ಪ್ರತಿನಿತ್ಯ ಇಲ್ಲಿ ಸಂಜೆಯಾಗುತ್ತಲೇ ಸಾವಿರಾರು ಮಂದಿ ಓಡಾಡುತ್ತಲೇ ಇರುತ್ತಾರೆ. ಕಾರಣ ಇದೇ ರಸ್ತೆಯಲ್ಲಿ ದೇವಸ್ಥಾನ, ಶಾಪಿಂಗ್ ಮಾರ್ಕೆಟ್, ಫಾಸ್ಟ್ ಫುಡ್ ಸವಿಯಲು ಸೂಕ್ತ ಸ್ಥಳವಾಗಿದ್ದು, ಇಂತಹ ರಸ್ತೆಯಲ್ಲಿಯೇ ರಾತ್ರಿ ವೇಳೆ ವಿದ್ಯುತ್ ದೀಪ ಉರಿಯದೆ ಇರುವುದು ಪುಂಡ ಯುವಕರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಬೀದಿ ದೀಪದ ಸಮಸ್ಯೆಯಿಂದ ಹೆಚ್ಚಾಗುತ್ತಿದೆ ಅಪರಾಧ ಪ್ರಕರಣಗಳು:

ರಾತ್ರಿ ಆಗುತ್ತಲೇ ಕೆಲ ಪುಂಡ ಪೋಕರಿಗಳು ಬೈಕ್ ವ್ಹೀಲಿಂಗ್ ಮಾಡುವ ಮೂಲಕ ನಾಗರಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಕಳೆದ ಹದಿನೈದು ದಿನಗಳ ಹಿಂದೆ ನಗರದ ಪ್ರಮುಖ ರಸ್ತೆಯಾದ ಎಂಆರ್ ವೃತ್ತದ ಬಳಿ ನಡುರಾತ್ರಿಯಲ್ಲಿ ಒಬ್ಬ ಮಹಿಳೆಯ ಕೊಲೆ ನಡೆದಿದ್ದು, ಬಳಿಕ ಆಕೆ ಮೇಲೆ ಅತ್ಯಾಚಾರ ಮಾಡಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆ. ಇದೆ ಅಲ್ಲದೆ ಹಾಸನದ ರಿಂಗ್ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣ, ಬೀದಿ ದೀಪ ಇಲ್ಲದಿರುವುದೇ ಪ್ರಮುಖ ಕಾರಣ ಎಂದರೆ ತಪ್ಪಾಗದು.

ಸ್ಲಂಗಳಲ್ಲಿ ಬೀದಿ ದೀಪಗಳನ್ನು ಸರಿಪಡಿಸಿಲ್ಲ:

ಹಾಸನದ ಸ್ಲಮ್ ಬಡಾವಣೆಗಳಲ್ಲಿಯೂ ಕೂಡ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲದೆ ರಾತ್ರಿಯಾದರೆ ಸಾಕು ಕತ್ತಲೆ ಆವರಿಸಿ ಬಿಡುತ್ತದೆ. ಎಂಜಿ ರಸ್ತೆಯ ಪಕ್ಕದ ರಸ್ತೆಯಲ್ಲಿ ಹೆಣ್ಣುಮಕ್ಕಳ ವಸತಿ ನಿಲಯ, ವಿದ್ಯಾರ್ಥಿ ನಿಲಯ, ಬಲಿಜ ಭವನ ಸೇರಿದಂತೆ ಹತ್ತಕ್ಕೂ ಹೆಚ್ಚು ವಸತಿ ನಿಲಯಗಳಿವೆ. ಇಷ್ಟೇ ಅಲ್ಲದೆ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರ ಕೆಲವು ವಸತಿ ನಿಲಯಗಳಲ್ಲಿ ಆಶ್ರಯ ಪಡೆದಿದ್ದು, ಪ್ರತಿದಿನ ರಾತ್ರಿ ಸಮಯದಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಗಲಿನಲ್ಲಿ ಉರಿಯುವ ಬೀದಿ ದೀಪಗಳು:

ಹಳೆ ಬಸ್ ನಿಲ್ದಾಣದ ಸಮೀಪದ ಕಟ್ಟಿನಕೆರೆ ಮಾರ್ಕೆಟ್ ಗಳಲ್ಲಿ ಬೆಳಗಿನ ಜಾವವೇ ದೀಪಗಳು ಉರಿದರೂ ಹಾರಿಸುವಂತಹ ಗೋಜಿಗೆ ನಗರಸಭೆ ಹೋಗುವುದಿಲ್ಲ. ಇನ್ನು ಅಂಬೇಡ್ಕರ್ ಭವನದ ರಸ್ತೆ, ಹೇಮಾವತಿ ಪ್ರತಿಮೆಯ ಬಳಿ, ಸರ್ಕಾರಿ ಆಸ್ಪತ್ರೆ ರಸ್ತೆ, ಮಹಾವೀರ ವೃತ್ತ, ಜಿಲ್ಲಾ ಉಪ ಕಾರಾಗೃಹದ ರಸ್ತೆ, ರವಿಂದ್ರ ನಗರ ಗಣಪತಿ ದೇವಸ್ಥಾನದ ರಸ್ತೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ರಸ್ತೆ, ರಾಜಕುಮಾರ್ ಬಡಾವಣೆ ಹೀಗೆ ಹಲವು ಕಡೆ ಬೀದಿ ದೀಪಗಳನ್ನು ಸರಿಪಡಿಸುವ ಕೆಲಸಕ್ಕೆ ನಗರಸಭೆ ಮುಂದಾಗಿಲ್ಲ. ಹೀಗಾಗಿ ಹಾಸನದ ಜನತೆಯ ಚೆಸ್ಕಾಂ ಮತ್ತು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹಾಸನಕ್ಕೆ ಮೊದಲ ಪೈಲೆಟ್ ಪ್ರಾಜೆಕ್ಟ್:

ಹಾಸನದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಕೃಷ್ಣ ಬಡಾವಣೆಗೆ ಸ್ವಯಂ ಚಾಲಿತ ವಿದ್ಯುತ್ ನಿರ್ವಹಣೆ ಮಾಡುವ ಪೈಲೆಟ್ ಪ್ರಾಜೆಕ್ಟ್ ಕೂಡ ಮಂಜೂರಾಗಿದೆ. ಆದರೆ ಹಾಸನ ನಗರಸಭೆಗೆ ಒಳಪಡುವ ಸದ್ಯ 35 ವಾರ್ಡ್​ಗಳಲ್ಲಿ ವಿದ್ಯುದ್​​ದೀಪಗಳ ಸಮಸ್ಯೆ ಎದ್ದುಕಾಣುತ್ತಿದೆ. ಅದನ್ನು ಸರಿಪಡಿಸುವ ಕಾರ್ಯವನ್ನು ಕೂಡ ನಗರಸಭೆ ಮಾಡದಿರುವುದು ಬೇಸರದ ಸಂಗತಿ. ಇದರ ಮಧ್ಯೆ ಕೃಷ್ಣ ನಗರಕ್ಕೆ ಪೈಲೆಟ್ ಪ್ರಾಜೆಕ್ಟ್ ಸಿಕ್ಕಿರುವುದು ಅದೃಷ್ಟವೇ ಸರಿ.

ಇನ್ನಾದರೂ ಹಾಸನ ನಗರಸಭೆ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಸಹಯೋಗದಲ್ಲಿ ಹಾಸನ ನಗರದಲ್ಲಿ ರಿಪೇರಿಯಾಗದ ನೂರಾರು ವಿದ್ಯುತ್ ದೀಪಗಳು ಅವುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.