ETV Bharat / state

ಅರಕಲಗೂಡು: ಬಸವಾಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೊನಾ

author img

By

Published : Aug 27, 2020, 10:46 AM IST

ತಾಲೂಕು ವೈಧ್ಯಧಿಕಾರಿ ಡಾ. ಸ್ವಾಮಿಗೌಡ ಮತ್ತು ತಾಲೂಕು ಕೊರೊನಾ ಕಾರ್ಯಪಡೆ ಇದನ್ನು ನಿಯಂತ್ರಿಸಲು ಸಂಚಾರಿ ಕೊರೊನಾ ತಪಾಸಣಾ ವಾಹನ ಮತ್ತು ಕಾರ್ಯಪಡೆಯನ್ನು 3ನೇ ಬಾರಿ ಗ್ರಾಮಕ್ಕೆ ಕಳುಹಿಸಿದ್ದಾರೆ.

ಬಸವಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೊನಾ

ಅರಕಲಗೂಡು: ಬಸವಾಪಟ್ಟಣ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು, ಈಗ ಗ್ರಾಮದ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದೆ.

ಇದನ್ನರಿತ ತಾಲೂಕು ವೈಧ್ಯಧಿಕಾರಿ ಡಾ. ಸ್ವಾಮಿಗೌಡ ಮತ್ತು ತಾಲೂಕು ಕೊರೊನಾ ಕಾರ್ಯಪಡೆ ಇದನ್ನು ನಿಯಂತ್ರಿಸಲು ಸಂಚಾರಿ ಕೊರೊನಾ ತಪಾಸಣಾ ವಾಹನ ಮತ್ತು ಕಾರ್ಯಪಡೆಯನ್ನು 3ನೇ ಬಾರಿ ಗ್ರಾಮಕ್ಕೆ ಕಳುಹಿಸಿದ್ದಾರೆ.

ಬಸವಾಪಟ್ಟಣ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೊನಾ

ಮೊದಲ ಬಾರಿ ಸುಮಾರು 82 ಜನರ ಗಂಟಲು ದ್ರವ ಪರೀಕ್ಷೆ, 2ನೇ ಬಾರಿ 35 ಜನರನ್ನ ಪರೀಕ್ಷೆ ಮಾಡಲಾಗಿತ್ತು. ಗ್ರಾಮದಲ್ಲಿನ ಅಂಗಡಿ ಮಾಲೀಕರು ಮತ್ತು ವರ್ತಕರ ತಪಾಸಣೆ ನಡೆಸಲು ತಿರ್ಮಾನಿಸಿ, ಬಸವಾಪಟ್ಟಣ ಗ್ರಾಮ ಪಂಚಾಯತ್​ನಿಂದ ಪ್ರತಿಯೊಂದು ಅಂಗಡಿ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಿ, ಪರೀಕ್ಷೆಗೆ ಒಳಗಾಗಿ ಈ ಬಗ್ಗೆ ದಾಖಲೆ ಪತ್ರವನ್ನು ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಸುಮಾರು 55 ಜನ ವರ್ತಕರು ಮತ್ತು ಸಾರ್ವಜನಿಕರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಯಿತು.

ಜನರಲ್ಲಿ ಇರುವ ಆತಂಕವನ್ನು ದೂರ ಮಾಡಲು ಮತ್ತು ಎಚ್ಚರಿಕೆಯಿಂದ ಇರಲು ತಾಲೂಕು ಕೊರೊನಾ ಕಾರ್ಯಪಡೆ ಕಾರ್ಯನಿರತವಾಗಿದೆ. ಮುಂಜಾಗ್ರತೆಯಿಂದ ಕೊರೊನಾ ನಿಯಂತ್ರಣ ಸಾಧ್ಯ ಎಂದು ವೈದ್ಯಧಿಕಾರಿ ಡಾ. ರಾಜೇಶ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.