ಹಾಸನ/ಮೈಸೂರು: ಹಾಸನ ಜಿಲ್ಲೆಯ ಅರಕಲಗೂಡು ದೊಡ್ಡಮಗ್ಗೆ ಹೋಬಳಿ ಕಣಿಯಾರು ಗ್ರಾಮದ ಶ್ರೀ ಪುಟ್ಟಶೆಟ್ಟಿ ಮತ್ತು ಚಾಮಶೆಟ್ಟಿಗೆ ಸೇರಿದ 3 ಆಡುಗಳನ್ನು ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.
ಈ ಹಿನ್ನೆಲೆ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದ್ದು, ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಇನ್ನು ಘಟನೆ ನಡೆಸ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕಾವ್ಯಶ್ರೀ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಸ್ಥಳಿಯರೊಂದಿಗೆ ಚರ್ಚೆ ನಡೆಸಿದರು.
ಅಲ್ಲದೆ ಗ್ರಾಮದಲ್ಲಿ ಚಿರತೆ ಹಿಡಿಯಲು ಬೋನ್ಗಳನ್ನು ಇಡಲಾಗಿದೆ ಎಂದಿದ್ದಾರೆ. ಅಲ್ಲದೆ ಸಂಜೆಯ ವೇಳೆ ದನ-ಕರುಗಳನ್ನು ಹೊರಗೆ ಬಿಡಬೇಡಿ, ಮನೆಯಿಂದ ಕತ್ತಲಾದ ಮೇಲೆ ಹೊರಗೆ ಓಡಾಡಬೇಡಿ ಎಂದು ಸ್ಥಳಿಯರಲ್ಲಿ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಮೈಸೂರಿನ ನಂಜಾಪುರ ಗ್ರಾಮದಲ್ಲಿ ವರದರಾಜು ಅವರಿಗೆ ಸೇರಿದ್ದ ಕುರಿ ಚಿರತೆ ದಾಳಿಗೆ ಬಲಿಯಾಗಿದೆ. ಕೊಟ್ಟಿಯಲ್ಲಿ ಕಟ್ಟಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಒಂದು ತಿಂಗಳ ಅಂತರದಲ್ಲಿ 2 ಕುರಿಗಳು ಚಿರತೆಗೆ ಆಹಾರವಾಗಿವೆ.
ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಚಿರತೆ ದಾಳಿ ನಡೆಸುತ್ತಿದ್ದು ಸ್ಥಳಿಯರಲ್ಲಿ ಆತಂಕ ಮನೆಮಾಡಿದೆ.