ETV Bharat / state

ಲಾಕ್​ಡೌನ್​ ನಡುವೆಯೂ ರಾಜಾರೋಷವಾಗಿ ನಡೆಯುತ್ತಿದೆ ಕಲ್ಲು ಗಣಿಗಾರಿಕೆ: ಸ್ಥಳೀಯರ ಆಕ್ರೋಶ

author img

By

Published : Mar 31, 2020, 7:22 PM IST

ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಅರಕೆರೆ ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

illigal stone mining in hassan
ಲಾಕ್​ಡೌನ್​ ನಡುವೆ ರಾಜಾರೋಷವಾಗಿ ನಡೆಯುತ್ತಿದೆ ಕಲ್ಲು ಗಣಿಗಾರಿಕೆ

ಹಾಸನ: ಕೊರೊನಾ ಲಾಕ್​ಡೌನ್​ ನಡುವೆಯೂ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಅರಕೆರೆ ಗ್ರಾಮದಲ್ಲಿ ಮಾತ್ರ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ‌.

ಗಣಿ ಮಾಲೀಕರು ಅಕ್ರಮವಾಗಿ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದಾರೆ. ಸರ್ಕಾರ ಬಡ ಕೂಲಿ ಕಾರ್ಮಿಕರು ರಸ್ತೆಗಿಳಿಯದಂತೆ ನಿರ್ಬಂಧಿಸಿದೆ. ಸಾಮಾನ್ಯ ಜನ ಬೀದಿಗಿಳಿದರೆ ಲಾಠಿ ರುಚಿ ತೋರಿಸುವ ಪೊಲೀಸರು, ಕಲ್ಲು ಗಣಿಗಾರಿಕೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಜನಸಾಮಾನ್ಯರಿಗೆ ಇರುವ ಲಾಕ್​ಡೌನ್​, ಕಲ್ಲುಗಣಿಗಾರಿಕೆ ನಡೆಸುವವರಿಗೆ ಯಾಕೆ ಇಲ್ಲ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

ಲಾಕ್​ಡೌನ್​ ನಡುವೆಯೂ ರಾಜಾರೋಷವಾಗಿ ನಡೆಯುತ್ತಿದೆ ಕಲ್ಲು ಗಣಿಗಾರಿಕೆ

ತಕ್ಷಣ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.