ETV Bharat / state

ಹಾಸನ: ಪ್ರೀತಿಸಿ ವರಿಸಿದ ಪತ್ನಿಯನ್ನು ಬರ್ಬರವಾಗಿ ಕೊಂದು ಪರಾರಿಯಾದ ಪತಿ - A husband who brutally killed his wife in Hassan

ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ.

ಪತ್ನಿ ಕೊಲೆ
A husband killed his wife in Hassan
author img

By

Published : Jul 21, 2022, 1:28 PM IST

ಹಾಸನ: ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಹತಾಶನಾದ ಪತಿಯೊಬ್ಬ ಕೋಪದ ಕೈಗೆ ಬುದ್ಧಿ ಕೊಟ್ಟು ಮಾರಕಾಸ್ತ್ರದಿಂದ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ಹಾಸನದ ಬೇಲೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಶ್ವಿನಿ ಮೃತ ಮಹಿಳೆ, ಜಗದೀಶ್ ಕೊಲೆ ಮಾಡಿದ ಗಂಡ.

17 ವರ್ಷಗಳ ಹಿಂದೆ ಜಗದೀಶ್-ಅಶ್ವಿನಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಒಂದೂವರೆ ದಶಕಗಳ ಕಾಲ ಜೊತೆಯಾಗಿಯೇ ಕಷ್ಟಸುಖದಲ್ಲಿ ಭಾಗಿಯಾಗಿದ್ದರು. ಜೀವನಕ್ಕಾಗಿ ಮೆಡಿಕಲ್ ಶಾಪ್ ತೆರೆದಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೆಡಿಕಲ್ ಶಾಪ್ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಾ ಬಂದ ಜಗದೀಶ್, ಆ ಕೋಪವನ್ನು ಹೆಂಡತಿ ಮೇಲೆ ತೀರಿಸಿಕೊಳ್ಳಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಪದೇ ಪದೇ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗಂಡನ ವರ್ತನೆಯಿಂದ ಬೇಸತ್ತ ಅಶ್ವಿನಿ, ಕಳೆದ ಐದಾರು ತಿಂಗಳ ಹಿಂದೆ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಈ ಮಧ್ಯೆ ಆರೋಪಿ ಜಗದೀಶ್, ವಾರದಲ್ಲಿ ಎರಡು ಮೂರು ಬಾರಿ ಆಕೆಯ ಮನೆಗೆ ಬಂದು ಗಲಾಟೆ ಮಾಡಿ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನಂತೆ. ಎಂದಿನಂತೆ ಮಕ್ಕಳು ಶಾಲೆಗೆ ತೆರಳಿದ್ದಾಗ ಇಂದು ಮಧ್ಯಾಹ್ನ ಬಂದ ಆತ, ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಬೇಲೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ​ಯನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: ಟಂಟಂ ವಾಹನ ತೊಳೆಯಲು ಹೋಗಿ ಅಪ್ಪ-ಮಗ ಸಾವು.. ಧಾರವಾಡದಲ್ಲಿ ದುರಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.