ಹಾಸನ: ಎಚ್ ಆರ್ ಪಿ ಹಗರಣದ ಬಗ್ಗೆ ಸಂಪೂರ್ಣ ಮಾಹಿತಿ ನನಗಿಲ್ಲ. ಪುನರ್ವಸತಿ ಯೋಜನೆಯಡಿ ಜಮೀನನ್ನು ಅನರ್ಹರಿಗೆ ಹಂಚಿರುವ ಬಗ್ಗೆ ನಮ್ಮ ಇಲಾಖೆ ಕಂದಾಯ ಇಲಾಖೆಯಿಂದ ಏನು ಕ್ರಮ ಕೈಗೊಳ್ಳಬೇಕು. ಅದನ್ನು ಮಾಡಿ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇನೆ. ಎಚ್ ಆರ್ ಪಿ ಭೂ ಹಗರಣ ತನಿಖೆ ಮಾಡಲು ಡಿಸಿಗೆ ಸೂಚಿಸುವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಕದ ಕಡೂರು ಮೂಡಿಗೆರೆ ತಾಲೂಕಿನಲ್ಲಿ 6 ಸಾವಿರ ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ಹಂಚಿದ್ದನ್ನು ರದ್ದತಿ ಮಾಡಿದ್ದೇವೆ. ಯಾವ ಅಧಿಕಾರಿ ಇದನ್ನು ದರ್ಬಳಕೆ ಮಾಡಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಹೇಮಾವತಿ ಜಲಾಶಯ ಭೂ ಸಂತ್ರಸ್ತರ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಹಿಂದೆ ಇದ್ದಂತಹ ಸರ್ಕಾರ ಮಾಡಬೇಕಾದ ಕೆಲಸವನ್ನು ಈಗ ನನ್ನನ್ನು ಕೇಳುತ್ತಿದ್ದೀರಿ. ನಿಯಮದ ಪ್ರಕಾರ ತಹಸೀಲ್ದಾರ್‌ಗಳು ಇನ್ಮುಂದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳನ್ನು 90 ದಿನಗಳಲ್ಲಿ ತೆರವುಗೊಳಿಸಬೇಕು. ಆದರೆ, ಐದು ವರ್ಷಗಳಿಂದ ಹಲವು ಪ್ರಕರಣಗಳು ಬಾಕಿ ಉಳಿದಿವೆ ಎಂದರು.
158 ಕೇಸ್ 5 ವರ್ಷದಿಂದ ಬಾಕಿ ಇದ್ದವು. 90 ದಿನಗಳೊಳಗೆ ತಹಸೀಲ್ದಾರರ ಲೆವಲ್ ನಲ್ಲಿ ಇರುವ ಪ್ರಕರಣ ಕ್ಲಿಯರ್ ಮಾಡಿದ್ದೇವೆ. ಎಸಿ ಡಿಸಿ 180 ದಿನಗಳಲ್ಲಿ ಭೂ ನ್ಯಾಯ ಪ್ರಕರಣ ಕ್ಲಿಯರ್ ಮಾಡಬೇಕಿದೆ. ರಾಜ್ಯದಲ್ಲಿ ನಾನು ಅಧಿಕಾರದಲ್ಲಿ ಇದ್ದಾಗ 60 ಸಾವಿರ ಭೂ ನ್ಯಾಯ ಪ್ರಕರಣ ಬಾಕಿ ಇದ್ದವು. 30 ಸಾವಿರ ಪ್ರಕರಣ ಕ್ಲಿಯರ್ ಮಾಡಿದ್ದೇವೆ. ಉಳಿದ ಪ್ರಕರಣಗಳನ್ನು ಜನವರಿ ತಿಂಗಳೊಳಗೆ ಕ್ಲಿಯರ್ ಮಾಡಲು ತಿಳಿಸಿರುವೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಈ ಬಗ್ಗೆ ಪ್ರತಿವಾರ ಪರಿಶೀಲನೆ ಮಾಡುತ್ತೇನೆ. ಇ - ಆಫೀಸ್ ನಲ್ಲಿ ಯಾವ ಕಡತ ಎಲ್ಲಿದೆ ಒಂದ ಬಟನ್ ಒತ್ತಿದರೆ ಗೊತ್ತಾಗುತ್ತದೆ. 15 ದಿನಗಳಿಗಿಂತ ಹೆಚ್ಚು ಕಾಲ ಕಡತಗಳು ವಿಎ, ಆರ್ಐ ಬಳಿ ಉಳಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವೆ. ಜಮೀನು ದುರಸ್ತಿ ಅಭಿಯಾನ ಮಾಡುವ ಬಗ್ಗೆ ಅಭಿಯಾನ ಹಮ್ಮಿಕೊಂಡಿದ್ದೇನೆ ಎಂದರು.
ಜನರು ಯಾರು ಅರ್ಜಿ ಸಲ್ಲಿಸುವ ಹಾಗಿಲ್ಲ. ನಾವೇ ದುರಸ್ತಿ ಪಟ್ಟಿ ಮಾಡಿ ಈ ಕೆಲಸ ಮಾಡುತ್ತೇವೆ. 3 ವರ್ಷಗಳಿಂದ ಆಗದೇ ಬಾಕಿ ಇರುವ ಸರ್ವೆ ಇಲಾಖೆ ಕೆಲಸಗಳನ್ನು ಶೀಘ್ರವಾಗಿ ಮುಗಿಸಲು ಪೈಲಟ್ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಆಡಿಯೋ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಯತೀಂದ್ರ ಆ ಕ್ಷೇತ್ರದ ಯಾವ ಸ್ಕೂಲ್ ಬಿಲ್ಡಿಂಗ್ ಮಾಡಲು ಪಟ್ಟಿ ನೀಡಿದರು. ಈ ಬಗ್ಗೆ ಚರ್ಚೆ ಮಾಡುವುದರಿಂದ ರಾಜ್ಯದ ಜನರ ಸಮಯ, ನಮ್ಮ ಸಮಯ ಹಾಳು ಮಾಡುತ್ತಿದ್ದೇವೆ. ಆರೋಪ ಮಾಡುವವರ ಬಗ್ಗೆ ಕಳೆದ ಚುನಾವಣೆಯಲ್ಲಿ ಜನ ತೀರ್ಮಾನ ನೀಡಿದ್ದಾರೆ. ಜನರ ಸಮಸ್ಯೆ ಇಟ್ಟುಕೊಂಡು ವಿರೋಧ ಪಕ್ಷದವರು ಮಾತನಾಡಲಿ ಎಂದು ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.
ಇದನ್ನೂಓದಿ:ನರೇಗಾ ಯೋಜನೆಯಲ್ಲಿ ಮಾನವ ದಿನಗಳನ್ನ ಹೆಚ್ಚಿಸಲು ಕೇಂದ್ರಕ್ಕೆ ಮನವಿ: ಡಿಸಿಎಂ ಡಿ ಕೆ ಶಿವಕುಮಾರ್