ETV Bharat / state

ಹಾಸನದಲ್ಲಿ ಆಶ್ಲೇಷ ಮಳೆ ಅನಾಹುತ: ಗೋಡೆ ಕುಸಿದು ಬಾಲಕ ಸಾವು - state rain situation

ಹಾಸನದಲ್ಲಿ ಮಳೆಗೆ ಮನೆ ಗೋಡೆ ಕುಸಿದು ಬಾಲಕನೋರ್ವ ಮೃತಪಟ್ಟಿದ್ದಾನೆ.

boy died by house wall collapsed due to rain in Hassan
ಗೋಡೆ ಕುಸಿದು ಬಾಲಕ ಸಾವು
author img

By

Published : Aug 5, 2022, 3:13 PM IST

ಹಾಸನ: ಹಾಸನದಲ್ಲಿ ಮಳೆ ಮುಂದುವರಿದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಬಾಗೂರು ಮತ್ತು ನುಗ್ಗೆಹಳ್ಳಿ ನಡುವೆ ಇರುವ ತಗಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂವನಹಳ್ಳಿ (ವಡ್ಡರಹಟ್ಟಿ) ಗ್ರಾಮದಲ್ಲಿ ಗೋಡೆ ಕುಸಿದು ಬಾಲಕನೋರ್ವ ಮೃತಪಟ್ಟಿದ್ದಾನೆ.

ಗೋಡೆ ಕುಸಿದು ಬಾಲಕ ಸಾವು ಪ್ರಕರಣ

ವಿಜಯಕುಮಾರ್ ಮತ್ತು ಚೈತ್ರ ದಂಪತಿಯ ಪುತ್ರ, 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ (13) ಮೃತ ವಿದ್ಯಾರ್ಥಿ. ರಾತ್ರಿ ಸುರಿದ ಮಳೆಗೆ ಮನೆಯ ಬಲಭಾಗದ ಗೋಡೆ ಬಾಲಕನ ಮೇಲೆ ಬಿದ್ದು ಅನಾಹುತ ಘಟಿಸಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಆಗಸ್ಟ್ 3ರಂದು ಪ್ರಾರಂಭವಾದ ಆಶ್ಲೇಷ ಮಳೆ ಮೊದಲಿಗೆ ಅರಸೀಕೆರೆ ನಂತರ ಶ್ರವಣಬೆಳಗೊಳ ಈಗ ಬಾಗೂರು ಮತ್ತು ನುಗ್ಗೆಹಳ್ಳಿ ಸಮೀಪ ಅವಾಂತರ ಸೃಷ್ಟಿಸಿದೆ. ಮೂರು ದಶಕಗಳ ಬಳಿಕ ಅರಸೀಕೆರೆ ನಗರ ಜಲಾವೃತಗೊಂಡಿದೆ. ಶ್ರವಣಬೆಳಗೊಳದಲ್ಲಿ ವರುಣಾರ್ಭಟಕ್ಕೆ ವಿಂಧ್ಯಗಿರಿ ಬೆಟ್ಟದ ಕಲ್ಲುಗಳು ಕುಸಿದಿವೆ.

ಇದನ್ನೂ ಓದಿ: ಕೋಡಿ ಬಿದ್ದ ಕಂತನಹಳ್ಳಿ ಕೆರೆ: ಕೊಚ್ಚಿ ಹೋದ ರಸ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.