ಸಕಲೇಶಪುರ: ಸರ್ಕಾರ ಅನುಮತಿ ಮೇರೆಗೆ ಹೋಟೆಲ್ಗಳು ಆರಂಭವಾಗಿದ್ದರೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಪಾರ್ಸೆಲ್ಗೆ ಅವಕಾಶವಿದ್ದರೂ ನಷ್ಟ ಅನುಭವಿಸುವ ಆತಂಕದಿಂದ ಮಾಲೀಕರು ಹೋಟೆಲ್ಗಳನ್ನು ತೆರೆಯುವ ಗೋಜಿಗೆ ಹೋಗಿರಲಿಲ್ಲ. ಈಗ ತೆರೆದರೂ ಗ್ರಾಹಕರು ಬರುತ್ತಿಲ್ಲ. ಹೀಗಾಗಿ ಮಾಲೀಕರಿಗೆ ಆತಂಕ ಎದುರಾಗಿದೆ.
ಸರ್ಕಾರ ಹೋಟೆಲ್ಗಳನ್ನು ತೆರೆಯಲು ತಡವಾಗಿ ಅವಕಾಶ ನೀಡಿದೆ. ಹಲವು ಕ್ಷೇತ್ರಗಳಿಗೆ ಸರ್ಕಾರ ತುಸು ಆರ್ಥಿಕ ನೆರವು ನೀಡಿದೆ. ಆದರೆ, ನಮ್ಮ ಉದ್ಯಮಕ್ಕೆ ಮಾತ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಹೋಟೆಲ್ ಮಾಲೀಕ ನಾರಾಯಣ ಆಳ್ವ ಬೇಸರ ವ್ಯಕ್ತಪಡಿಸಿದರು.
ಇದೀಗ ಹೋಟೆಲ್ ತೆರೆದಿದ್ದರೂ ಜನ ಅಷ್ಟಾಗಿ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕಷ್ಟದಲ್ಲಿರುವ ಹೋಟೆಲ್ ಮಾಲೀಕರ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು. ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.