ETV Bharat / state

ಹಿಂಬಾಗಿಲಿನ ಬೀಗ ಮುರಿದು ಚಿನ್ನಾಭರಣ ದೋಚಿದ ಚಾಲಕಿ ಕಳ್ಳರು - ಸಕಲೇಶಪುರ ಯಡೇಹಳ್ಳಿ ಮನೆ ಕಳ್ಳತನ

ತಾಲೂಕಿನ ಬಾಳ್ಳುಪೇಟೆ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಹಿಂಬಾಗಿಲಿನ ಬೀಗ ಮುರಿದು ಮನೆ ಕಳ್ಳತನ ಮಾಡಿರೋ ಘಟನೆ ನಡೆದಿದ್ದು, ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ ಕೆಲವು ಮಾಹಿತಿ ಕಲೆಹಾಕಿದ್ದಾರೆ.

home-robbery-in-sakleshpur-ballupete-yadehalli
ಯಡೇಹಳ್ಳಿ ಮನೆಗಳ್ಳತನ
author img

By

Published : Feb 11, 2020, 8:38 PM IST

ಸಕಲೇಶಪುರ: ಹಿಂಬಾಗಿಲಿನ ಬೀಗ ಮುರಿದು ಮನೆ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬಾಳ್ಳುಪೇಟೆ ಸಮೀಪದ ಯಡೇಹಳ್ಳಿ ಗ್ರಾಮದ ವಸಂತ್ ಎಂಬುವರ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ಮನೆಯ ಬೀರು ಒಡೆದು, ಸುಮಾರು 50 ಸಾವಿರ ರೂ. ನಗದು, 120 ಗ್ರಾಂ ಚಿನ್ನಾಭರಣ, ಹಾಗೂ 25 ಗ್ರಾಂ ಬೆಳ್ಳಿಯ ವಸ್ತುಗಳನ್ನ ದೋಚಿ ಪರಾರಿಯಾಗಿದ್ದಾರೆ. ಮನೆಯ ಮಾಲೀಕ ಮನೆ ಹಿಂಭಾದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಾಲೀಕರಿಗೆ ಯಾವ ಸಳಿವು ಗೊತ್ತಾಗದಂತೆ ಮನೆಗೆ ನುಗ್ಗಿರೋ ಕಳ್ಳರು ಚಾಲಕಿತನ ಮೆರೆದಿದ್ದಾರೆ.

ಹಿಂಬಾಗಿಲಿನ ಬೀಗ ಮುರಿದು ಚಿನ್ನಾಭರಣ ದೋಚಿದ ಚಾಲಕಿ ಕಳ್ಳರು

ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ವರಿಷ್ಠಾಧಿಕಾರಿ ನಂದಿನಿ, ಡಿ.ವೈ.ಎಸ್.ಪಿ ಗೋಪಿ, ವೃತ್ತ ನಿರೀಕ್ಷಕರಾದ ಗಿರೀಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕಾಗಮಿಸಿದ ಬೆರಳಚ್ಚು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿ ಕೆಲವು ಮಾಹಿತಿ ಕಲೆಹಾಕಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.