ಹಾಸನ : ಮಹಾಮಾರಿ ಕೊರೊನಾದಿಂದ ನಮ್ಮ ಜೀವನವನ್ನು ನಡೆಸುವುದೇ ಕಷ್ಟಕರವಾಗಿದ್ದು, ನಮ್ಮ ಸಮಾಜಕ್ಕೆ ಕನಿಷ್ಠ 10 ಸಾವಿರ ರೂಗಳನ್ನು ನೀಡುವಂತೆ ಜಿಲ್ಲಾ ವಿಶ್ವಕರ್ಮ ಚಿನ್ನ- ಬೆಳ್ಳಿ ಕೆಲಸಗಾರರ ಸಂಘದ ಸದಸ್ಯ ಹೆಚ್.ಎನ್. ನಾಗೇಂದ್ರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಶ್ವಕರ್ಮ ಸಮಾಜವು ಬಹು ಪ್ರಾಚೀನ ಕಾಲದಿಂದಲೂ ಶಿಲ್ಪ ಪರಂಪರೆಯನ್ನು ಮಾಡುವ ಮೂಲಕ ಬರಲಾಗಿದೆ. ಹಿಂದೆ ನಮಗೆ ರಾಜ ಮಹಾರಾಜರು ಆಶ್ರಯ ನೀಡಿ ನಮಗೆ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಈಗಿನ ಕೊರೊನಾ ಪರಿಸ್ಥಿತಿಯಲ್ಲಿ ನಮಗೆ ಮುಖ್ಯಮಂತ್ರಿಗಳು ಮತ್ತು ಪ್ರಧಾನಿಗಳೇ ರಾಜರು ಎಂದರು.
ಲಾಕ್ಡೌನ್ ಆದೇಶ ಜಾರಿಗೆ ಬಂದ ಮೇಲೆ ನಮ್ಮ ಯಾವ ಕೆಲಸಗಳು ನಡೆಯದೇ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಭಾರತ ಸಂವಿಧಾನವು ಎಲ್ಲರಿಗೂ ಸಮಾನವಾಗಿ ನೋಡಬೇಕೆಂದು ಎಂದು ಹೇಳಿದರೇ ಈಗ ನಮ್ಮ ಸಮುದಾಯಕ್ಕೆ ತಾರತಮ್ಯ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರವು ಇತರ ಸಮಾಜಕ್ಕೆ ನೀಡಿದ ಧನ ಸಹಾಯವನ್ನು ನಮ್ಮ ಸಮುದಾಯ ಬಗ್ಗೆಯು ಗಮನ ನೀಡಿ ಕನಿಷ್ಠ ಹತ್ತು ಸಾವಿರ ರೂಗಳನ್ನು ನೀಡಲು ಮನವಿ ಮಾಡುವುದಾಗಿ ಹೇಳಿದರು.