ETV Bharat / state

ಮುಂಗಾರು ಮಳೆಯ ಅಬ್ಬರ: ಹಾಸನ ಜಿಲ್ಲೆಯ ಜನಜೀವನ ಅಸ್ತವ್ಯಸ್ತ - ಹೇಮಾವತಿ ನದಿ ಭರ್ತಿ

ಹೇಮಾವತಿ ನದಿಗೆ ಎರಡು ದಿನಗಳಲ್ಲಿ ಎರಡು ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇಂದು ಕೂಡಾ 17ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವುದರಿಂದ ಜೀವನದಿ ತನ್ನೊಡಲಿಗೆ ನೀರನ್ನ ತುಂಬಿಕೊಳ್ಳುತ್ತಿದೆ. ಹೇಮಾವತಿ ನದಿ ಪಾತ್ರದ ಕೆಂಪುಹೊಳೆ ಸೇರಿದಂತೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

ಮುಂಗಾರು ಮಳೆಯ ಅಬ್ಬರ: ಹಾಸನ ಜಿಲ್ಲೆಯ ಜನಜೀವನ ಅಸ್ತವ್ಯಸ್ತ
author img

By

Published : Aug 6, 2019, 9:50 PM IST

Updated : Aug 6, 2019, 10:06 PM IST

ಹಾಸನ: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಮುಂಗಾರಿನ ಅಬ್ಬರ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ಡ್ಯಾಂಗೆ ಒಳಹರಿವಿನ ಪ್ರಮಾಣವೂ ಏರಿಕೆಯಾಗಿದೆ.

ಪಶ್ಚಿಮ ಘಟ್ಟಗಳಾದ ಬಿಸಿಲೆ, ಮೂಡಿಗೆರೆ, ಚಿಕ್ಕಮಗಳೂರು ಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಎರಡು ದಿನಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಹೇಮಾವತಿಗೆ ಎರಡು ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇಂದು ಕೂಡಾ 17ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜೀವನದಿ ತನ್ನೊಡಲಿಗೆ ನೀರನ್ನ ತುಂಬಿಕೊಳ್ಳುತ್ತಿದೆ. ಹೇಮಾವತಿ ನದಿ ಪಾತ್ರದ ಕೆಂಪುಹೊಳೆ ಸೇರಿದಂತೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.

ಈ ಬಾರಿ ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೆ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿತ್ತು. ಅಗಾಗ್ಗೆ ಬಿದ್ದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಮಳೆ ಕೈಕೊಟ್ಟಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು. ಈಗ ಅಬ್ಬರಿಸುತ್ತಿರುವ ಮಳೆಯಿಂದ ರೈತರು ಒಂದು ಕಡೆ ಸಂತಸ ಪಟ್ಟುಕೊಂಡರೂ ಅತಿಯಾದ ಮಳೆ ಕೆಲವೆಡೆ ಆತಂಕ ಸೃಷ್ಟಿಸಿದೆ.

ಜೋರಾದ ಮುಂಗಾರಿನ ಅಬ್ಬರ

ಮಳೆಯ ಪ್ರಮಾಣ:
ಸಕಲೇಶಪುರ ತಾಲೂಕಿನಲ್ಲಿ ಜುಲೈ 4 ರಿಂದ ಸರಾಸರಿ 140 ಮಿ.ಮೀ. ಮಳೆಯಾಗಿದೆ. ಹೆತ್ತೂರು, ಯಸಳೂರು, ಹಾನುಬಾಳು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸರಾಸರಿ 120 ಮಿ.ಮೀ, ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ 60 ಮಿ.ಮೀ. ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಹಾಗೆಯೇ ಅರಕಲಗೂಡು 12 ಮಿ.ಮೀ, ಕೊಣನೂರು 12.2ಮಿ.ಮೀ, ದೊಡ್ಡಮಗ್ಗೆ 9.2 ಮಿ.ಮೀ, ಮಲ್ಲಿಪಟ್ಟಣ 27 ಮಿ.ಮೀ, ರಾಮನಾಥಪುರದಲ್ಲಿ 3.1 ಮಿ.ಮೀ ಮಳೆ ಸುರಿದಿದೆ.

ಸಕಲೇಶಪುರದ ಹೇಮಾವತಿ ಹೊಳೆ ಭಾಗಶಃ ಭರ್ತಿಯಾಗಿ ಹೊಂದಿಕೊಂಡಂತಿರುವ ಶಿವನ ದೇವಾಲಯದ ಬಾಗಿಲಿನ ತನಕ ನೀರು ಹರಿದು ಬಂದಿದೆ. ಇನ್ನೆರಡು ದಿನ ಇದೇ ರೀತಿ ಮಳೆಯಾದ್ರೆ, ದೇವಾಲಯ ಸಂಪೂರ್ಣ ಮುಳುಗುವ ಸಾಧ್ಯತೆಯಿದೆ.

ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಈಗಾಗಾಲೇ ಸಕಲೇಶಪುರ, ಆಲೂರು ತಾಲೂಕಿನ ಹೊಳೆಯಂಚಿನ ಭಾಗದಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಆ ಭಾಗದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ಸಹ ನೀಡಲಾಗಿದೆ.

Intro:ಹಾಸನ/ಸಕಲೇಶಪುರ: ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಮುಂಗಾರಿನ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಜೀವನದಿ ಹೇಮಾವತಿ ನದಿಯಿಂದ ಡ್ಯಾಂಗೆ ಒಳಹರಿವಿನ ಪ್ರಮಾಣ ಬಾರಿ ಹೆಚ್ಚಳವಾಗಿದೆ.

ಪಶ್ಚಿಮಘಟ್ಟಗಳಾದ ಬಿಸಿಲೆ, ಮೂಡಿಗೆರೆ, ಚಿಕ್ಕಮಗಳೂರು ಭಾಗದಲ್ಲಿ ಮಳೆರಾಯನ ಅಬ್ಬರ ಹೆಚ್ಚಾಗಿದ್ದು ಎರಡು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇದಲ್ಲದೆ ಹೇಮಾವತಿ ನದಿಯಿಂದ ಜಲಾಶಯಕ್ಕೆ ಎರಡು ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇಂದು ಕೂಡಾ 17ಸಾವಿರ ಕ್ಯೂಸೆಕ್ ನೀರು ಹರಿಯುತ್ತಿರುವುದಿರಿಂದ ಜೀವನದಿ ತನ್ನೋಡಲಿಗೆ ನೀರನ್ನ ತುಂಬಿಕೊಳ್ಳುತ್ತಿದ್ದಾಳೆ.

ಹೇಮಾವತಿ ನದಿ ಪಾತ್ರದ ಕೆಂಪುಹೊಳೆ ಸೇರಿದಂತೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಭತ್ತದ ಗದ್ದೆಗಳೆಲ್ಲವೂ ನೀರಿನಿಂದ ಜಲಾವೃತಗೊಂಡಿದ್ದು, ಭತ್ತದ ಸಸಿ ನಾಟಿ ಕಾರ್ಯವನ್ನು ರೈತರು ಸ್ಥಗಿತಗೊಳಿಸಿದ್ದಾರೆ. ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಇನ್ನು ಅರಕಲಗೂಡು, ಕೊಣನೂರು ಭಾಗದಲ್ಲಿ ಮಳೆ ಕೊರತೆಯಿಂದ ನೆಲಕಚ್ಚುತ್ತಿದ್ದ ಬೆಳೆಗಳಿಗೆ ನೆನ್ನೆಯಿಂದ ಸುರಿಯುತ್ತಿರುವ ಸೋನೆ ಮಳೆಯಿಂದ ಫಸಲಿಗೆ ಜೀವ ಸೆಲೆ ಬಂದಿದ್ದು, ರೈತರಿಗೆ ತುಸು ಸಂತಸ ನೀಡಿದೆ. ಈ ಬಾರಿ ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೆ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿತ್ತು. ಅಗಾಗ್ಗೆ ಬಿದ್ದ ಅಲ್ಪ ಮಳೆಯನ್ನು ನಂಬಿ ಬಿತ್ತನೆ ನಡೆಸಿದ್ದ ರೈತರು ಮಳೆ ಕೈಕೊಟ್ಟದ್ದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು, ಮುಸುಕಿನ ಜೋಳ, ಆಲೂಗೆಡ್ಡೆ ಬೆಳೆಗಳು ಮಳೆ ಕೊರತೆಯಿಂದ ರೈತರ ಕೈ ಕಚ್ಚುವ ಸ್ಥಿತಿ ಒದಗಿತ್ತು. ಈ ಮಧ್ಯೆ ಮುಸುಕಿನ ಜೋಳದ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡು ರೈತರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಕಳೆದ ಎರಡು ದಿನಗಳಲ್ಲಿ ಅಲ್ಪ ಪ್ರಮಾಣದ ಹದ ಮಳೆಯಾಗಿರುವುದು ಕೃಷಿಕಾರ್ಯಕ್ಕೆ ಚುರುಕು ನೀಡಿದೆ.

ತಾಲ್ಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಕೃಷಿ ಪ್ರದೇಶ ಇದ್ದು ಪ್ರಸ್ತುತ ತಂಬಾಕು, ಆಲೂಗೆಡ್ಡೆ, ಶುಂಠಿ, ಮುಸುಕಿನ ಜೋಳ, ದ್ವಿದಳ ಧಾನ್ಯ, ರಾಗಿ ಸೇರಿದಂತೆ ವಿವಿಧ ಬೆಳೆಗಳು 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ 52ರಷ್ಟು ಗುರಿ ಸಾಧನೆಯಾಗಿದೆ. ನಾಲಾ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗುತ್ತಿತ್ತು. ಆದ್ರೆ ಮಳೆಯಾಗದ ಹಿನ್ನಲೆಯಲ್ಲಿ ರೈತರು ಪೈರುಗಳನ್ನ ಸಿದ್ದಪಡಿಸಿಕೊಂಡು ನಾಲೆಗೆ ನೀರು ಹರಿಸುವುದನ್ನೆ ನಿರೀಕ್ಷೆ ಮಾಡುತ್ತಿದ್ದಾರೆ.

ಈ ಮದ್ಯೆ 2 ದಿನದಿಂದ ಜಿಲ್ಲೆಯ ಸಕಲೇಶಪುರ ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ಬಿದ್ದ ಮಳೆಯ ಪ್ರಮಾಣವನ್ನ ನೋಡೋದಾದ್ರೆ...

ಸಕಲೇಶಪುರ ತಾಲ್ಲೂಕಿನಲ್ಲಿ ಜುಲೈ 4 ರಿಂದ ಸರಾಸರಿ 140 ಮಿ.ಮೀ. ಮಳೆಯಾಗಿದೆ. ಹೆತ್ತೂರು, ಯಸಳೂರು, ಹಾನುಬಾಳು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸರಾಸರಿ 120 ಮಿ.ಮೀ, ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ 60 ಮಿ.ಮೀ. ಮಳೆಯಾಗಿರುವುದಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಹಾಗೇ ಅರಕಲಗೂಡು 12 ಮಿ.ಮೀ, ಕೊಣನೂರು 12.2ಮಿ.ಮೀ, ದೊಡ್ಡಮಗ್ಗೆ 9.2 ಮಿ.ಮೀ, ಮಲ್ಲಿಪಟ್ಟಣ 27 ಮಿ.ಮೀ, ರಾಮನಾಥ ಪುರದಲ್ಲಿ 3.1 ಮಿ.ಮೀ ಮಳೆಯಾಗಿದೆ.

ಸಕಲೇಶಪುರದ ಹೇಮಾವತಿ ಹೊಳೆ ಭಾಗಶಃ ಭರ್ತಿಯಾಗಿ ನೀರು ಹರಿಯುತ್ತಿರುವುದರಿಂದ ಹೊಳೆಗೆ ಹೊಂದಿಕೊಂಡಂತಿರುವ ಶಿವನ ದೇವಾಲಯದ ಬಾಗಿಲಿನ ತನಕ ನೀರು ಹರಿಯುತ್ತಿದ್ದು, ಇನ್ನೇರಡು ದಿನ ಇದೇ ರೀತಿ ಮಳೆಯಾದ್ರೆ, ಸಂಪೂರ್ಣ ಮುಳುಗುವ ಸಾಧ್ಯತೆಯಿದೆ.

ಇನ್ನು ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಈಗಾಗಾಲೇ ಸಕಲೇಶಪುರದ, ಆಲೂರು ತಾಲ್ಲೂಕಿನ ಹೊಳೆಯಂಚಿನ ಭಾಗದಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಆ ಭಾಗದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ

ಒಟ್ಟಾರೆ ಹಲವು ದಿನದಿಂದ ಮುನಿಸಿಕೊಂಡಿದ್ದ ವರುಣ ಎರಡು ದಿನದಿಂದ ಜಿಲ್ಲೆಗೆ ಆಗಮಿಸಿದ್ದಷ್ಟೆಯಲ್ಲದೇ ಅಬ್ಬರಿಸಿ ಬೋಬ್ಬಿರಿಯುತ್ತಿದ್ದಾನೆ. ಜೀವನದಿ ತುಂಬುವ ಲಕ್ಷಣಗಳು ಕಾಣುತ್ತಿದ್ದು, ಮೂರು ಜಿಲ್ಲೆಯ ನೀರಿನ ಬವಣೆ ನೀಗುವ ಜೊತೆಗೆ ಯಾವುದೇ ರೀತಿಯ ಅನಾವುತ ಆಗದಿರಲಿ ಎಂಬುದೇ ನಮ್ಮ ಪ್ರಾರ್ಥನೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ..

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Aug 6, 2019, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.