ETV Bharat / state

ಹಾಸನದಲ್ಲಿ ನಿರಂತರ ಮಳೆ: ಹಾಸನಾಂಬೆ ದರ್ಶನ‌ಕ್ಕೆ ಭಕ್ತರಿಗೆ ಅಡ್ಡಿ - ಹಾಸನಾಂಬೆ ದೇವಿ ದರ್ಶನ‌

ಜಿಲ್ಲೆಯಲ್ಲಿ ಸಂಜೆ ವೇಳೆಗೆ ಶುರುವಾದ ಮಳೆರಾಯನ ಆರ್ಭಟಕ್ಕೆ ವಾಹನ ಸವಾರರು ಪರದಾಡುವಂತಾಗಿದ್ದು, ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ನಗರದ ಪ್ರಮುಖ ರಸ್ತೆಗಳಾದ ಬಿ.ಎಂ ರಸ್ತೆ, ಸಾಲಗಾಮೆ ರಸ್ತೆ, ಆರ್ ಸಿ ರಸ್ತೆ ಹಾಗೂ ಬಸೆಟ್ಟಿ ಕೊಪ್ಪಲು ರಸ್ತೆಗಳು ಚಿಕ್ಕ ಚಿಕ್ಕ ಹಳ್ಳದಂತೆ ನೀರಿನಿಂದ ಜಲಾವೃತಗೊಂಡಿವೆ.

ಹಾಸನದಲ್ಲಿ ಮುಂದುವರೆದ ಮಳೆ: ಹಾಸನಾಂಬೆ ದರ್ಶನ‌ಕ್ಕೆ ಅಡ್ಡಿ
author img

By

Published : Oct 17, 2019, 7:41 PM IST

ಹಾಸನ : ದಸರಾ ಮುಗಿದ ಬೆನ್ನಲೆ ಭಕ್ತರಿಗೆ ಹಾಸನಾಂಬೆ ದೇವಿ ದರ್ಶನ‌ ನೀಡಿದ್ದಾಳೆ. ಆದರೆ ಹೆಚ್ಚಿನ ಜನರು ಇಲ್ಲಿಗೆ ಹೋಗುವುದಕ್ಕೆ ಇದೀಗ ವರುಣರಾಯ ಅಡ್ಡಿಯಾಗಿದ್ದು ತನ್ನ ಆರ್ಭಟ ಜೋರಾಗಿ ಮುಂದುವರಿಸಿದ್ದಾನೆ.

ಹಾಸನದಲ್ಲಿ ಮುಂದುವರೆದ ಮಳೆ: ಹಾಸನಾಂಬೆ ದರ್ಶನ‌ಕ್ಕೆ ಅಡ್ಡಿ

ಸಂಜೆಯಿಂದ ಕೆಲ ಕಾಲ ವರುಣ ತಂಪೆರಿದಿದ್ದು, ಮನೆಯಿಂದ ಹೊರ ಬರಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನಾಂಬೆ ದೇವಿ ದರ್ಶನ‌ಕ್ಕೆ ಬಾಗಿಲು ತೆರೆದ ಮೊದಲ ದಿನವೇ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಳೆರಾಯ ಅಡ್ಡಿ ಮಾಡಿದ್ದಾನೆ. ಜಿಲ್ಲೆಯಲ್ಲಿ ಇಂದು ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ‌. ಮಹಾ ಮಳೆಗೆ ಕಾಫಿ, ಮೆಣಸು ಕೂಡ ಕೈಗೆ ಸಿಗದೇ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿರುವುದುರಿಂದ ಬೆಳೆಗಾರರ ಬದುಕು ಹೈರಾಣಾಗಿಸಿದೆ.

Intro:ಹಾಸನ : ದಸರಾ ಮುಗಿದ ಕೂಡಲೇ ಭಕ್ತರಿಗೆ ಹಾಸನಾಂಬೆ ದೇವಿ ದರ್ಶನ‌ ನೀಡಿದ್ದು, ಜಿಲ್ಲೆಯಲ್ಲಿ ವರುಣ ತನ್ನ ಆರ್ಭಟ ಶುರು ಮಾಡಿದ್ದಾನೆ.

ಬಿಸಿಲಿನ ತಾಪಕ್ಕೆ ಹೈರಾಣಗಿದ್ದ ಜನತೆಗೆ ಗುರುವಾರ ಸಂಜೆಯಿಂದ ಕೆಲ ಕಾಲ ವರುಣ ತಂಪೆರಿದಿದ್ದು, ಮನೆಯಿಂದ ಹೊರಬರಲು ಆಗದ ಪರಿಸ್ಥಿತಿ ತಂದೊಡ್ಡಿದೆ.

ಬಾಗಿಲು ತೆಗೆದ ಮೊದಲದಿನವೇ ಹಾಸನಾಂಬೆ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಮಳೆರಾಯ ಅಡ್ಡಿ ಮಾಡಿದ್ದಾನೆ. ಜಿಲ್ಲೆಯಲ್ಲಿ ಇಂದು ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯಲ್ಲಿ ಸಂಜೆ ವೇಳೆಗೆ ಶುರುವಾದ ಮಳೆರಾಯನ ಆರ್ಭಟಕ್ಕೆ ವಾಹನ ಸವಾರರು ಪರದಾಡುವಂತಾಯಿತು. ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ನಗರದ ಪ್ರಮುಖ ಬಿಎಂ ರಸ್ತೆ, ಸಾಲಗಾಮೆ ರಸ್ತೆ, ಆರ್ ಸಿ ರಸ್ತೆ ಹಾಗೂ ಬಸೆಟ್ಟಿ ಕೊಪ್ಪಲು ರಸ್ತೆ ಚಿಕ್ಕ ಚಿಕ್ಕ ಹಳ್ಳದಂತೆ ನೀರಿನಿಂದ ಜಲಾವೃತಗೊಂಡಿವೆ.

ಈ ವರ್ಷ ಬಿಡದೆ ಸುರಿಯುತ್ತಿರುವ ಮಳೆಗೆ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿ ಹೋಗಿದೆ‌. ಮಹಾಮಳೆಗೆ ಕಾಫಿ, ಮೆಣಸು ಕೂಡ ಕೈಗೆ ಸಿಲುಕದೆ ನುಂಗಲಾರದ ಬಿಸಿ ತುಪ್ಪವಾಗಿದ್ದು, ಬೆಳೆಗಾರರ ಬದುಕನ್ನ‌ ಹೈರಾಣಾಗಿಸಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.