ETV Bharat / state

ಹಾಸನದಲ್ಲಿ ಧಾರಾಕಾರ ಮಳೆ... ಜನಜೀವನ ಅಸ್ತವ್ಯಸ್ತ - heavy rain in hassan district

ನಾಲ್ಕು ದಿನದಿಂದ ಬಿಡುವ ಕೊಟ್ಟಿದ್ದ ಮಳೆರಾಯ ನಿನ್ನೆಯಿಂದ ಮತ್ತೆ ಭೋರ್ಗರೆದು ಸುರಿಯುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದಾನೆ. ನಿನ್ನೆ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.

ಹಾಸನದಲ್ಲಿ ಧಾರಕಾರ ಮಳೆ..ಜನಜೀವನ ಅಸ್ತವ್ಯಸ್ತ
author img

By

Published : Aug 20, 2019, 2:24 AM IST

ಹಾಸನ: ಆಗಸ್ಟ್ ಮೊದಲ ವಾರದಲ್ಲಿಯೇ ಪ್ರಾರಂಭವಾದ ಆಶ್ಲೇಷ ಮಳೆಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ನೆರೆ ಆವರಿಸಿ, ಸಾಕಷ್ಟು ಮಂದಿ ಪ್ರವಾಹಕ್ಕೆ ತತ್ತರಿಸಿದ್ದರು. ಇತಿಹಾಸದಲ್ಲಿಯೇ ಕಂಡರಿಯದ ಮಳೆ ಮತ್ತು ಪ್ರವಾಹ ಬಂದಿದ್ದರಿಂದ ಸಕಲೇಶಪುರ, ಹೊಳೆನರಸೀಪುರ, ಆಲೂರು ಮತ್ತು ಅರಕಲಗೂಡು ತಾಲೂಕಿನ ಜನತೆ ನೆರೆಗೆ ನಲುಗಿ ಹೋಗಿದ್ದರು.

ಹಾಸನದಲ್ಲಿ ಧಾರಕಾರ ಮಳೆ..ಜನಜೀವನ ಅಸ್ತವ್ಯಸ್ತ

ಇದೀಗ ಎರಡು ದಿನಗಳ ಹಿಂದಷ್ಟೇ ಪ್ರಾರಂಭವಾಗಿರುವ ಮಕ ಮಳೆಗೆ ಹಾಸನ ಜನ, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗೆಡ್ಡೆ ಕೊಳೆತು ಹೋಗುವ ಆತಂಕದಲ್ಲಿ ರೈತರಿದ್ದಾರೆ.

ಭಾರೀ ಮಳೆಯಿಂದಾಗಿ ಕಟ್ಟಿನಕೆರೆ ಮಾರುಕಟ್ಟೆ, ಪೆನ್ಶನ್ ಮೊಹಲ್ಲಾ, ಬಿಎಸ್ಎನ್ಎಲ್ ಭವನ ಮುಂಭಾಗದ ರಸ್ತೆಗಳು ನದಿಯಂತೆ ಹರಿದು ವಾಹನಗಳ ಸಂಚಾರ ದುಸ್ತರವಾಗಿತ್ತು. ಬಿಗ್ ಬಜಾರ್ ಸಮೀಪ ಚರಂಡಿಯನ್ನು ಮುಚ್ಚಿ, ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯ ತುಂಬೆಲ್ಲಾ ನೀರು ತುಂಬಿಕೊಂಡು ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಪರದಾಡುವಂತಾಗಿತ್ತು.

Intro:ಹಾಸನ: ನಾಲ್ಕು ದಿನದಿಂದ ಬಿಡುವ ಕೊಟ್ಟಿದ್ದ ಮಳೆರಾಯ ಇವತ್ತು ಮತ್ತೆ ಭೋರ್ಗರೆದು ಸುರಿಯುವ ಮೂಲಕ ಜಿಲ್ಲೆಯಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದಾನೆ. ಬೆಳಗ್ಗೆಯಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದ್ದು ಮಳೆಯಿಂದ ಜನ ಮತ್ತೆ ಹೈರಾಣಾಗಿದ್ದಾರೆ

ಆಗಸ್ಟ್ ಮೊದಲ ವಾರದಲ್ಲಿಯೇ ಪ್ರಾರಂಭವಾದ ಆಶ್ಲೇಷ ಮಳೆಗೆ ಜಿಲ್ಲೆಯೇ ತತ್ತರಗೊಂಡಿದ್ದು ಜಿಲ್ಲೆಯ ಆರು ತಾಲೂಕುಗಳಲ್ಲಿ ನೆರೆ ಆವರಿಸಿದ್ದು ಸಾಕಷ್ಟು ಮಂದಿ ಪ್ರವಾಹಕ್ಕೆ ತತ್ತರಿಸಿದ್ದರು. ಇತಿಹಾಸದಲ್ಲಿಯೇ ಕಂಡರಿಯದ ಮಳೆ ಮತ್ತು ಪ್ರವಾಹ ಬಂದಿದ್ದರಿಂದ ಸಕಲೇಶಪುರ ಹೊಳೆನರಸೀಪುರ ಆಲೂರು ಮತ್ತು ಅರಕಲಗೂಡು ತಾಲೂಕಿನ ಜನತೆ ನೆರೆಗೆ ನಲುಗಿ ಹೋಗಿದ್ದರು.

ಈಗ ಎರಡು ದಿನಗಳ ಹಿಂದಷ್ಟೇ ಪ್ರಾರಂಭವಾಗಿರುವ ಮಕ ಮಳೆಗೆ ಹಾಸನ ಜನ ಅಷ್ಟೇ ಅಲ್ಲದೆ ರೈತರು ಕಂಗಾಲಾಗಿದ್ದಾರೆ. ನಡೆದ ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ವಾಣಿಜ್ಯ ಬೆಳೆ ಆಲೂಗೆಡ್ಡೆ ಎಲ್ಲಿ ಕೊಳೆತು ಹೋಗುವ ಹಂತ ತಲುಪುತ್ತದೆ ಎಂಬ ಆತಂಕದಲ್ಲಿಯೇ ರೈತರು ದಿನದೂಡುತ್ತಿದ್ದಾರೆ.

ಇದರ ಮತ್ತೆ ಇವತ್ತು ಕೂಡ ಜಿಲ್ಲೆಯ ಜೀವನದಿ ಹೇಮಾವತಿ ತುಂಬಿದ್ದು ಮತ್ತೊಮ್ಮೆ ನೀರನ್ನು ನದಿಯ ಮೂಲಕ ಹೊರಬರುವ ಸಿದ್ಧತೆಯನ್ನು ಕೂಡ ಜಲಾಶಯದ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇಂದು ಹಾಸನ ಸೇರಿದಂತೆ, ಸಕಲೇಶಪುರ, ಹೊಳೆನರಸೀಪುರ, ಶ್ರವಣಬೆಳಗೂಳ, ಚನ್ನರಾಯಪಟ್ಟಣ, ಕೊಣನೂರು, ರಾಮನಾಥಪುರ ಸೇರಿದಂತೆ ಸಾಕಷ್ಟು ಕಡೆ ಭರ್ಜರಿ ಮಳೆಯಾಗಿದೆ.

ಇನ್ನು ಹಾಸನದಲ್ಲಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಕಟ್ಟಿನಕೆರೆ ಮಾರುಕಟ್ಟೆ ಪೆನ್ಶನ್ ಮೊಹಲ್ಲಾ ಬಿಎಸ್ಎನ್ಎಲ್ ಭವನ ಮುಂಭಾಗದ ರಸ್ತೆಗಳು ನದಿಯಂತೆ ಹರಿದು ವಾಹನಗಳ ಸಂಚಾರ ದುಸ್ತರವಾಗಿತ್ತು. ಬಿಗ್ ಬಜಾರ್ ಸಮೀಪ ಚರಂಡಿಯನ್ನು ಮುಚ್ಚಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ನೀರು ಸರಾಗವಾಗಿ ಹರಿಯದ ಕಾರಣ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡು ದ್ವಿಚಕ್ರ ವಾಹನಗಳು ಅಷ್ಟೇ ಅಲ್ಲದೆ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಟ್ಟರು.

ಇನ್ನು ಈಗಾಗಲೇ ರೈತರು ಬಿತ್ತನೆ ಮಾಡಿದ್ದ ಆಲೂಗೆಡ್ಡೆ ಹೊರಳಿ ಶುಂಠಿ ಅವರೆಕಾಯಿ ಮುಂತಾದ ದ್ವಿದಳ ಧಾನ್ಯದ ಬೆಳೆಗಳು ಮಳೆಯ ರಭಸಕ್ಕೆ ನೆಲಕಚ್ಚುತ್ತಿವೆ. ಹೀಗಾಗಿ ಒಂದು ಕಡೆ ಮಳೆಬಂದು ಜಲಾಶಯ ತುಂಬಿದ್ದರಿಂದ ಜಿಲ್ಲೆಯ ರೈತರ ವರ್ಷಪೂರ್ತಿ ನೀರಿಗೆ ಸಮಸ್ಯೆ ಇಲ್ಲ ಅಂತ ನಿರಾಳತೆಯನ್ನು ಹೊಂದುತಿರುವ ಆಗಲೇ ಮತ್ತೆ ಮುಖ ಮಳೆ ರೈತರ ಹಾಗೂ ಜಿಲ್ಲೆಯ ಜನರ ಜೀವನದ ಜೊತೆ ಮತ್ತೆ ಚೆಲ್ಲಾಟವಾಡಲು ಪ್ರಾರಂಭಿಸಿದೆ

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.