ETV Bharat / state

ಮಲೆನಾಡಲ್ಲಿ ವರುಣನ ಆರ್ಭಟ: ಸಕಲೇಶಪುರದಲ್ಲೂ ಪ್ರವಾಹ ಭೀತಿ

ವರುಣನ ಆರ್ಭಟಕ್ಕೆ ಮಲೆನಾಡು ನಲುಗಿ ಹೋಗಿದ್ದು, ಬಡಾವಣೆಗಳು ಜಲಾವೃತಗೊಂಡಿವೆ. ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಮಲೆನಾಡಲ್ಲಿ ವರುಣ ಆರ್ಭಟ
author img

By

Published : Aug 10, 2019, 8:44 PM IST

ಹಾಸನ: ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಕಲೇಶಪುರ ಹೈರಾಣಾಗಿದೆ. ಹಾಸನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ರು ಮಲೆನಾಡು ಭಾಗದ ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಭೋರ್ಗರೆದು ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ವಾರದಿಂದ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ಹೇಮಾವತಿ ನದಿಯಿಂದ 1.3 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಸಕಲೇಶಪುರದ ಹಲವು ಬಡಾವಣೆಗಳು ಜಲಾವೃತಗೊಂಡು, ಕೆರೆಕಟ್ಟೆಗಳು ಉಕ್ಕಿ ಹರಿದಿವೆ. ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು, ಹಳ್ಳಿಗಳ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಕಳೆದ ಕೆಲ ದಿನಗಳಿಂದ ವಿದ್ಯುತ್, ದೂರವಾಣಿ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಮುಳುಗಿದ್ದ ಗ್ರಾಮೀಣ ಭಾಗದ ಜನರಿಗೆ ಇದೀಗ ರಸ್ತೆ ಸಂಪರ್ಕ ಇಲ್ಲದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮಲೆನಾಡಲ್ಲಿ ವರುಣ ಆರ್ಭಟ

ಸಕಲೇಶಪುರ-ಬಿಸಿಲೆ-ಹಾನುಬಾಳು-ಯಸಳೂರು-ಕಾಡುಮನೆ, ವಣಗೂರು, ಚಂಗಡಿಹಳ್ಳಿ ಭಾಗದಲ್ಲಿ ಮಳೆಯ ರೌದ್ರ ನರ್ತನದಿಂದ ಜನ್ರು ಹೈರಾಣಾಗಿದ್ದಾರೆ. ದಿನ ಬಳಕೆ ವಸ್ತುಗಳನ್ನ ಕೊಳ್ಳಲು ಹೊರಹೋಗದ ಸ್ಥಿತಿಗೆ ತಲುಪಿದ್ದಾರೆ. ತಿಂಗಳುಗಳ ಕಾಲ ಮಾಡಿದ ಕೃಷಿ ಚಟುವಟಿಕೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಕಾಫಿ, ಅಡಕೆ, ಮೆಣಸು, ಶುಂಠಿ ಮತ್ತು ನಾಟಿ ಮಾಡಲಾಗಿದ್ದ ಭತ್ತ ನೀರುಪಾಲಾಗಿದೆ.

ಇನ್ನು ಪಟ್ಟಣದ ಆಜಾದ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಲಾಗಿದೆ. ಇನ್ನು ರಭಸವಾಗಿ ಬೀಸುತ್ತಿರುವ ಗಾಳಿಗೆ ನೂರಾರು ಮನೆಗಳ ಹೆಂಚುಗಳು, ಮೇಲ್ಛಾವಣಿ ಸೇರಿದಂತೆ, ಮನೆಯ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪಟ್ಟಣದ ಹೊರವಲಯದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸುಮಾರು 25 ಮನೆಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಬೆಂಗಳೂರು-ಮಂಗಳೂರು ನಡುವಿನ ಶಿರಾಡಿ ಘಾಟ್ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ರಸ್ತೆಯ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪೊಲೀಸರಿಗೆ ಹರಸಾಹಸದ ಕೆಲಸವಾಗಿದೆ.

Intro:ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮತ್ತೆ ಸಕಲೇಶಪುರ ಹೈರಾಣಾಗಿದೆ. ಹಾಸನದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ರು, ಮಲೆನಾಡು ಭಾಗವಾದ ಚಿಕ್ಕಮಗಳೂರು ಮತ್ತು ಮೂಡಿಗೆರೆ ಭಾಗದಲ್ಲಿ ಭೋರ್ಗರೆದು ಸುರಿಯುತ್ತಿರುವ ಮಳೆಯಿಂದ ಈ ಭಾಗದಲ್ಲಿ ಅಕ್ಷರಶಃ ಜಲ ಪ್ರವಾಹ ಎದುರಾಗಿದೆ. .

ವಾರದಿಂದ ಸುರಿಯುತ್ತಿರುವ ವರ್ಷಧಾರೆ ಮತ್ತಷ್ಟು ರೌದ್ರನರ್ತನ ಮುಂದುವರಿಸಿದ್ದು, ಹೇಮಾವತಿ ನದಿಯಿಂದ 1.3ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿರುವುದರಿಂದ ಮತ್ತೆ ಸಕಲೇಶಪುರದ ಹಲವು ಬಡಾವಣೆಗಳು ಜಲಾವೃತವಾಗಿದೆ. ಇಷ್ಟೆಯಲ್ಲದೇ ಕೆರೆಕಟ್ಟೆಗಳು ಉಕ್ಕಿಹರಿದಿವೆ. ಗ್ರಾಮೀಣ ಭಾಗದ ಬಹುತೇಕ ಕಡೆಗಳಲ್ಲಿ ಸೇತುವೆ, ರಸ್ತೆಗಳು ಜಲಾವೃತವಾಗಿ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದೆ. ಕಳೆದ ಕೆಲ ದಿನಗಳಿಂದ ವಿದ್ಯುತ್, ದೂರವಾಣಿ, ಮೊಬೈಲ್ ಸಂಪರ್ಕವೇ ಇಲ್ಲದೆ ಕತ್ತಲೆಯಲ್ಲಿ ಮುಳುಗಿದ್ದ ಗ್ರಾಮೀಣ ಭಾಗದ ಜನರಿಗೆ, ಇದೀಗ ರಸ್ತೆ ಸಂಪರ್ಕ ಇಲ್ಲದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮತ್ತಷ್ಟು ಮರಗಳು ಬುಡಮೇಲಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಸಕಲೇಶಪುರ-ಬಿಸಿಲೆ-ಹಾನುಬಾಳು-ಯಸಳೂರು-ಕಾಡುಮನೆ, ವಣಗೂರು, ಚಂಗಡಿಹಳ್ಳಿ ಭಾಗದಲ್ಲಿ ಮಳೆಯ ರೌದ್ರನರ್ತನ ದಿಂದ ಜನ್ರು ಹೈರಾಣಾಗಿದ್ದಾರೆ. ದಿನಬಳಕೆ ವಸ್ತುಗಳನ್ನ ಕೊಳ್ಳಲು ಹೊರಹೋಗದ ಸ್ಥಿತಿಗೆ ತಲುಪಿದ್ದಾರೆ. ತಿಂಗಳುಗಳ ಕಾಲ ಮಾಡಿದ ಕೃಷಿ ಚಟುವಟಿಕೆ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ. ರೈತರ ಮತ್ತೆ ಕಂಗಾಲಾಗಿದ್ದು, ಕೋಟ್ಯಾಂತರ ರೂ ಮೌಲ್ಯದ ಕಾಫಿ, ಅಡಕೆ, ಮೆಣಸು, ಶುಂಠಿ ಮತ್ತು ನಾಟಿ ಮಾಡಲಾಗಿದ್ದ ಭತ್ತದ ಬೆಳೆ ನೀರುಪಾಲಾಗಿದೆ.

ಇನ್ನು ಪಟ್ಟಣದ ಆಜಾದ್ ನಗರದಲ್ಲಿ ಮತ್ತೆ ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬ ವರ್ಗದವರು ಕಂಗಾಲಾಗಿದ್ದಾರೆ. ಸದ್ಯ ಅವರುಗಳನ್ನ ಸಂತ್ರಸ್ಥ ಶಿಬಿರಕ್ಕೆ ರವಾನಿಸಲಾಗಿದೆ. ಇನ್ನು ರಭಸವಾಗಿ ಬೀಸುತ್ತಿರುವ ಗಾಳಿಗೆ ನೂರಾರು ಮನೆಗಳ ಹೆಂಚುಗಳು, ಮೇಲ್ಚಾವಣಿ, ಸೇರಿದಂತೆ, ಮನೆಯ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಮದ್ಯಮ ಕುಟುಂಬವರ್ಗಕ್ಕೆ ಗಾಯದ ಮೇಲೆ ಬರೆಯೆಳೆದಂತಾಗಿದೆ.

ಪಟ್ಟಣದ ಹೊರವಲಯದ ಗುಡ್ಡ ಕುಸಿತವಾದ ಹಿನ್ನಲೆಯಲ್ಲಿ ಸುಮಾರು 25 ಮನೆಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಬೆಂಗಳೂರು-ಮಂಗಳೂರು ನಡುವಿನ ಶಿರಾಡಿಘಾಟ್ ಬಂದ್ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೆದ್ದಾರಿಯ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಇವುಗಳ ತೆರವು ಮಾಡುವುದು ಪೊಲೀಸರಿಗೆ ಹರಸಾಹಸದ ಕೆಲಸವಾಗಿದೆ.

ಒಟ್ಟಾರೆ ದಿನದಿಂದ ದಿನಕ್ಕೆ ವರುಣದ ಅಬ್ಬರ ಜೋರಾಗಿದ್ದು, ಮಲೆನಾಡು ಅಕ್ಷರಶಃ ಇಂದೆಂದು ಕಾಣದ ನೆರೆ ಪ್ರವಾಹವನ್ನ ಕಂಡು ಬೆಚ್ಚಿಬಿದ್ದಿದೆ. ಸರ್ಕಾರ ಕೂಡಾ ನೆರೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡುವಂತೆ ತಾಲ್ಲೂಕಿನ ಜನತೆ ಮನವಿ ಮಾಡಿದ್ದಾರೆ.Body:0Conclusion:ಸುನಿಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.