ಹಾಸನ: ಇಂದು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮುಂಜಾನೆಯಿಂದ ಸಂಜೆಯ ತನಕ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆದ ವಾಣಿಜ್ಯ ಬೆಳೆಗಳಾದ ಶುಂಠಿ, ಆಲೂಗೆಡ್ಡೆ ಹಾಗೂ ಮೆಕ್ಕೆ ಜೋಳ ನೆಲಕಚ್ಚಲಿದ್ದು, ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಅ. 21ರ ತನಕ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ 9.1 ಮಿ.ಮೀ. ಮಳೆಯಾದ್ರೆ, ಹೊಸೂರು 5.4 ಮಿ.ಮೀ. ಹಾಸನ ತಾಲ್ಲೂಕಿನ ದುದ್ದದಲ್ಲಿ 0.6 ಮಿ.ಮೀ, ಹಾಸನ ತಾಲ್ಲೂಕಿನಲ್ಲಿ 12.8 ಮಿ.ಮೀ ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು 17 ಮಿ.ಮೀ, ಕಸಬಾ 8 ಮಿ.ಮೀ, ನುಗ್ಗೇಹಳ್ಳಿ 8.4 ಮಿ.ಮೀ, ಹಿರೀಸಾವೆ 25.1 ಮಿ.ಮೀ, ಶ್ರವಣಬೆಳಗೊಳ 32.4 ಮಿ.ಮೀ, ಬೇಲೂರು ತಾಲ್ಲೂಕಿನ ಹಗರೆ 1.8 ಮಿ.ಮೀ, ಬಿಕ್ಕೋಡು 1.6 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 35.8 ಮಿ.ಮೀ. ಹೊಳೆನರಸೀಪುರ 2.4 ಮಿ.ಮೀ , ಅರಸೀಕೆರೆ ತಾಲ್ಲೂಕಿನ ಗಂಡಸಿಯಲ್ಲಿ 34.6 ಮಿ.ಮೀ, ಕಸಬಾ 42 ಮಿ.ಮೀ, ಜಾವಗಲ್ 6.2 ಮಿ.ಮೀ, ಯಳವಾರೆ 32.2 ಮಿ.ಮೀ, ಕಣಕಟ್ಟೆ 49.6 ಮಿ.ಮೀ ಮಳೆಯಾಗಿದೆ. ಇಂದಿನಿಂದ ಮತ್ತೆ ಮೂರು ದಿನಗಳ ತನಕ ಚಿತ್ತಾ ಮಳೆ ಆರ್ಭಟಿಸಲಿದೆ.