ETV Bharat / state

ಕಾಂಗ್ರೆಸ್ ಪಕ್ಷ ಬಾಗಿಲು ಮುಚ್ಚಿ ಹೊಸ ಪಕ್ಷ ಸ್ಥಾಪನೆ ಮಾಡಲಿ: ಹೆಚ್.ಡಿ.ರೇವಣ್ಣ - HD Revanna news

ಕೋಮುವಾದಿಗಳ ಜೊತೆ ಇರುವ ಕಾಂಗ್ರೆಸ್ ತಕ್ಷಣ ಮನೆ ಬಾಗಿಲು ಮುಚ್ಚಿ ಹೊಸ ಪಕ್ಷ ಕಟ್ಟುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

HD Revanna suggested congress to open new party
ಮಾಜಿ ಸಚಿವ ಹೆಚ್​​ ಡಿ ರೇವಣ್ಣ ಸುದ್ದಿಗೋಷ್ಟಿ
author img

By

Published : Sep 30, 2021, 4:55 PM IST

ಹಾಸನ: ಬಿಜೆಪಿಯವರು ಕಾಂಗ್ರೆಸ್​ ಅನ್ನು ತೆಗೆಯಬೇಕು ಅಂತಾ, ಕಾಂಗ್ರೆಸ್ ಅವರು ಬಿಜೆಪಿಯನ್ನು ತೆಗೆಯಬೇಕು ಅಂತ ಹೋರಾಟ ಮಾಡುತ್ತಿದ್ದಾರೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಪಕ್ಷದ ಪರಿಸ್ಥಿತಿಯನ್ನು ನೋಡಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಟೀಕಿಸಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಟಿ

ಹಾಸನದ ಪ್ರವಾಸಿ ಮಂದಿರಲ್ಲಿ ಮಾತನಾಡಿದ ಅವರು, ಕೋಮುವಾದಿಗಳನ್ನು ದೂರವಿಡಬೇಕೆಂದು ಕಾಂಗ್ರೆಸ್ ಹೇಳುತ್ತೆ. ಆದರೆ ಇವತ್ತು ಕಾಂಗ್ರೆಸ್ ಪ್ರಾದೇಶಿಕ ಪಕ್ಷದ ಮನೆ ಬಾಗಿಲು ತಟ್ಟುತ್ತಿದೆ. ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಎಂದರು. ಇದೇ ವೇಳೆ, ಗುಬ್ಬಿ ಶ್ರೀನಿವಾಸಗೌಡ 2023ಕ್ಕೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಮಂತ್ರಿಯಾಗಲಿ ಎಂದು ಶುಭಕೋರಿದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಹೇಗಿದೆ ಎಂದು ಹುಡುಕುತ್ತಿದ್ದಾರೆ. ಎ-ಟೀಂ ಬಿ-ಟೀಂ ಯವರೇ ಜೆಡಿಎಸ್ ಮನೆ ಬಾಗಿಲಿಗೆ ಬಂದು ಕಟ್ಟುತ್ತಾರೆ. ಇಂತಹ ಕೆಟ್ಟ ಪರಿಸ್ಥಿತಿಯ ಕಾಂಗ್ರೆಸ್​ಗೆ ಬರಬಾರದಾಗಿತ್ತು. 2018ರಲ್ಲಿ ರಾಹುಲ್ ಗಾಂಧಿಯವರು ಹಾಸನಕ್ಕೆ ಬಂದು ಯಾರದ್ದೋ ಮಾತುಕೇಳಿ ನಮ್ಮ ಪಕ್ಷವನ್ನು ಬಿ-ಟೀಂ ಎಂದರು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂತು. 60 ವರ್ಷ ರಾಜಕೀಯ ಮಾಡಿದ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲೂ ಕುಸಿದಿದೆ. ಅವರುಗಳ ಕಷ್ಟಗಳನ್ನು ಕೇಳಲು ಕುಮಾರಣ್ಣ ಬರಬೇಕಾಯಿತು ಎಂದರು.

ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಆಯ್ತು. ಇನ್ನು ಜಾತಿಗಣತಿ ಬಿಡುಗಡೆ ಮಾಡಿಲ್ಲ. ಪ್ರಾದೇಶಿಕ ಪಕ್ಷದ ಬಾಗಿಲನ್ನು ಕೋಮುವಾದಿಗಳು ತಟ್ಟಲು ರೆಡಿಯಾಗಿದ್ದಾರೆ ಎನ್ನುವ ಮೂಲಕ ಬಿಜೆಪಿ ಪಕ್ಷದ ವಿರುದ್ಧವೂ ಹರಿಹಾಯ್ದರು. ಕೋಮುವಾದಿಗಳ ಜೊತೆ ಇರುವ ಕಾಂಗ್ರೆಸ್ ತಕ್ಷಣ ಮನೆ ಬಾಗಿಲು ಮುಚ್ಚಿ ಹೊಸ ಪಕ್ಷ ಕಟ್ಟುವುದು ಸೂಕ್ತ ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ಟಾಂಗ್​​​ ನೀಡಿದರು.

'ತಾಲಿಬಾನ್ ಎಂದರೆ ನಮಗೆ ಗೊತ್ತಿಲ್ಲ':

ನಮ್ಮ ಹತ್ತಿರ ಇರುವುದು ಹಳೆ ಡಕೋಟ ಕಾರು. ಅದರಲ್ಲಿಯೇ ಮುಂದಿನ ಚುನಾವಣೆ ಮಾಡುತ್ತೇವೆ. ತಾಲಿಬಾನ್ ಎಂದರೆ ನಮಗೆ ಗೊತ್ತಿಲ್ಲ. ಅದು ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಗೊತ್ತು. ಪ್ರಾದೇಶಿಕ ಪಕ್ಷಗಳಿಗೆ ಮೂಕಪ್ರಾಣಿಗಳ ನೋವು ಮಾತ್ರ ಗೊತ್ತು ಎನ್ನುವ ಮೂಲಕ ಸಿದ್ದರಾಮಯ್ಯ ಆರ್​ಎಸ್​ಎಸ್​ ಮತ್ತು ಬಿಜೆಪಿ ಪಕ್ಷವನ್ನು ತಾಲಿಬಾನ್​​ಗೆ ಹೋಲಿಕೆ ಮಾಡಿದ ಹಿನ್ನೆಲೆಯಲ್ಲಿ ಆ ವಿಚಾರಕ್ಕೆ ನಗುತ್ತಾ ಉತ್ತರಿಸಿದರು.

ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ಗೆಲ್ಲಲು ಪೈಪೋಟಿ: ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಇಂತಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.