ETV Bharat / state

ಮನುಷ್ಯನ ಪ್ರಾಣಕ್ಕಿಂತ ಸರ್ಕಾರಕ್ಕೆ ಹಣವೇ ಹೆಚ್ಚಾಗಬಾರದು: ಹೆಚ್.ಡಿ.ರೇವಣ್ಣ - ಹಾಸನ ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಕೊರೊನಾ ನಿಂಯತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಮಾಜಿ ಸಚಿವ ಹೆಚ್​. ಡಿ. ರೇವಣ್ಣ, ಸರ್ಕಾರ ಏನಾದರೂ ದಿವಾಳಿಯಾಗಿದ್ದರೆ ಹೇಳಲಿ, ಸಾರ್ವಜನಿಕರಿಂದ ಚಂದಾ ಎತ್ತಿ ಕೊರೊನಾ ರೋಗವನ್ನು ನಿಭಾಯಿಸುತ್ತೇವೆ ಎಂದು ಟೀಕಿಸಿದರು.

hd-revanna-statement-on-cm-yadiyurappa
ಮಾಜಿ ಸಚಿವ ಹೆಚ್ ಡಿ ರೇವಣ್ಣ
author img

By

Published : Aug 6, 2020, 9:19 PM IST

ಹಾಸನ: ಸರ್ಕಾರ ಏನಾದರೂ ದಿವಾಳಿಯಾಗಿದ್ದರೆ ಹೇಳಲಿ, ಸಾರ್ವಜನಿಕರಿಂದ ನಾವು ಹಾಗೂ ಶಾಸಕರು ಚಂದಾ ಎತ್ತಿ ಕೊರೊನಾ ರೋಗವನ್ನು ನಿಭಾಯಿಸುತ್ತೇವೆ. ಮನುಷ್ಯನ ಪ್ರಾಣಕ್ಕಿಂತ ಸರ್ಕಾರಕ್ಕೆ ಹಣವೇ ಹೆಚ್ಚಾಗಬಾರದು ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ, ಸಿಎಂ ಬಿ. ಎಸ್​. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು.

ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್. ಡಿ. ರೇವಣ್ಣ ವಾಗ್ಧಾಳಿ

ಕೊರೊನಾ ನಿಧಿಗೆ ಸಾರ್ವಜನಿಕರಿಂದ 378 ಕೋಟಿ ರೂ. ಹಣ ದೇಣಿಗೆಯಾಗಿ ಸರ್ಕಾರಕ್ಕೆ ಬಂದಿದೆ. ಈ ಹಣದಲ್ಲಿ ಒಂದು ರೂ. ಸಹ ಖರ್ಚು ಮಾಡಿಲ್ಲ ಎಂದು ಹೇಳಲಾಗಿದೆ. ಇದರಲ್ಲೇ 60 ಕೋಟಿ ರೂ. ಬಳಸಲು ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿಗಳ ನಿಯಂತ್ರಣಕ್ಕೆ ಕೊಡಲಿ ಎಂದು ಸಲಹೆ ನೀಡಿ, ಎಲ್ಲಾ ತಾಲೂಕುಗಳಿಗೂ ಹಣ ನೀಡುವಂತೆ ಅವರು ಒತ್ತಾಯಿಸಿದರು.

'ಜಿಲ್ಲಾ ಉಸ್ತುವಾರಿ ಸಚಿವರ ಕ್ಯಾಂಪ್​​ ಮಾಡಿಸಿ'

ರಾಜ್ಯದ 30 ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಕ್ಷೇತ್ರದಲ್ಲಿ ಕ್ಯಾಂಪ್ ಮಾಡಬೇಕು. ಈ ವೇಳೆ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಟೀಮ್ ಮಾಡಬೇಕು. ಇದರಲ್ಲಿ ವೈದ್ಯರು, ತಾಲೂಕು ಅಧಿಕಾರಿಗಳನ್ನು ಹಾಗೂ ವಿಲೇಜ್ ಅಕೌಂಟೆಂಟರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

'10 ಅಡಿ ಸಾಮಾಜಿಕ ಅಂತರ ಕಾಪಾಡಿ'

ಕೊರೊನಾ ಪಾಸಿಟಿವ್ ಇರುವವರನ್ನು ಕನಿಷ್ಟ 10 ಅಡಿ ದೂರ ಇಟ್ಟು ಸಾಮಾಜಿಕ ಅಂತರ ಕಾಪಾಡಬೇಕು. ಮುರಾರ್ಜಿ ಶಾಲೆಗಳಲ್ಲಿ ಕುರಿಗಳನ್ನು ತುಂಬುವ ಹಾಗೆ ಕೊರೊನಾ ರೋಗಿಗಳನ್ನು ತುಂಬಿದ್ದಾರೆ. ಒಂದು ರೂಮಿಗೆ 5 ಹಾಸಿಗೆ ಹಾಕಿದರೆ ಉತ್ತಮ. ತಾತ್ಕಾಲಿಕ ಶೌಚಾಲಯ ನಿರ್ಮಿಸಲಿ. ಈಗ ಶಾಲೆಗಳು ನಡೆಯುತ್ತಿಲ್ಲ. ಆಯಾ ತಾಲೂಕಿನ ಶಾಲೆಗಳನ್ನು ಬಳಸಿಕೊಳ್ಳಲಿ.

ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ 50 ಸಾವಿರ ತಲುಪಿದೆ. ಆಗಸ್ಟ್ ಅಂತ್ಯದ ವೇಳೆಗೆ ಮತ್ತೊಂದು ಲಕ್ಷ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕಟ್ಟು ನಿಟ್ಟಿನಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಒಂದು ವಾರ ಇಲ್ಲೆ ಕ್ಯಾಂಪ್ ಹಾಕುವಂತೆ ಒತ್ತಾಯಿಸಿದರು.

'ಸಿಎಂ ಗುಣಮುಖರಾಗಲಿ'

ಯಡಿಯೂರಪ್ಪನವರು ಕೋವಿಡ್​​ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಿ ಬರಲಿ ಎಂದರು.

'ಖಾಸಗಿ ಆಸ್ಪತ್ರೆಯನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು'

ಕೊರೊನಾ ವಿಚಾರದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಹಾಸನ ಜಿಲ್ಲೆಯೊಂದರಲ್ಲೇ ದಿನೇ ದಿನೆ ನೂರಾರು ಪಾಸಿಟಿವ್ ಪತ್ತೆಯಾಗುತ್ತಿದ್ದು, ಇನ್ನು ಬೆಂಗಳೂರಿನಲ್ಲಿ ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಜೊತೆಗೆ ದಿನನಿತ್ಯ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.