ETV Bharat / state

ಹಾಸನದಲ್ಲಿ ಆಕ್ಸಿಜನ್​ ಕಳ್ಳಸಾಗಣೆ ಆರೋಪ: ಜಿಲ್ಲಾಡಳಿತದ ವಿರುದ್ಧ ರೇವಣ್ಣ ಗರಂ - ಹಾಸನ ವ್ಯಾಕ್ಸಿನೇಷನ್​

ಆಕ್ಸಿಜನ್ ಕಳ್ಳಸಾಗಾಣೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಹೆಚ್​.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

hassan
ಮಾಜಿ ಸಚಿವ ಹೆಚ್.ಡಿ.ರೇವಣ್ಣ
author img

By

Published : May 7, 2021, 7:00 AM IST

ಹಾಸನ: ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದ್ದು, ಈ ಮಧ್ಯೆ ಆಕ್ಸಿಜನ್​ ಕಳ್ಳಸಾಗಾಣೆಯಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವ ರೀತಿಯಲ್ಲಿ ಕ್ರಮ ಕೈಗೊಂಡಿದೆ ಎಂದು ತಿಳಿದಿಲ್ಲ. ಆದ್ರೆ ಜಿಲ್ಲೆಗೆ ಕೇವಲ 250 ರೆಮ್ಡಿಸಿವಿರ್ ಪೂರೈಕೆ ಆಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಸರ್ಕಾರ ರೆಮ್ಡಿಸಿವಿರ್ ಕಂಪನಿಯೊಂದಿಗೆ ಶಾಮೀಲಾಗಿರಬೇಕು ಅನಿಸುತ್ತದೆ. ಹಾಗಾಗಿ ದುಬಾರಿ ಹಣಕೊಟ್ಟು ಕೊಂಡುಕೊಳ್ಳಲಿ ಎಂದು ಜನರ ಜೀವನದೊಂದಿಗೆ ಚೆಲ್ಲಾಟವಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿದ ಸಂಸದರು, ಶಾಸಕರು ಜಿಲ್ಲೆಯಲ್ಲಿ ಲಾಕ್​ಡೌನ್​ ಮಾಡುವ ವಿಚಾರದ ಬಗ್ಗೆ ಮಾತುಕತೆ ನಡೆಸಿದರು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ

ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳು ಒದ್ದಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿದ್ರೆ ಸಾವಿನ ಸಂಖ್ಯೆ ಕೂಡಾ ಹೆಚ್ಚಾಗುತ್ತದೆ. ಇಂದಿನವರೆಗೆ 11 ಸಾವಿರ ಸಕ್ರಿಯ ಪ್ರಕರಣಗಳಿವೆ. ನಿನ್ನೆ 1348 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಆಕ್ಸಿಜನ್ ಇಲ್ಲದೇ ಚಾಮರಾಜನಗರದಲ್ಲಿ ಆದ ಪರಿಸ್ಥಿತಿ ಹಾಸನಕ್ಕೂ ಬರುತ್ತದೆ. ಲೀ.ಆಕ್ಸಿಜನ್ ಗೆ 21 ರೂ. ಇದ್ರೆ, ಚಿಕ್ಕಮಗಳೂರಿಗೆ 55 ರೂ.ಗೆ ಮಾರಾಟ ಮಾಡ್ತಿದ್ದಾರೆ. ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಈ ಪರಿಸ್ಥಿತಿಯಲ್ಲಿಯೂ ದಂಧೆ ನಡೆಯುತ್ತಿದೆ. ಆಸ್ಪತ್ರೆಗೆ ನುಗ್ಗಿ ದಂಧೆಯನ್ನು ಬಹಿರಂಗಪಡಿಸೋಣ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಲಸಿಕೆ ಕೊರತೆಯ ದೂರಿಲ್ಲ, ಸರತಿ ಸಾಲುಗಳಿಲ್ಲ: ಭುಜ್​​ನಲ್ಲಿ 'ಮಾದರಿ' ವ್ಯಾಕ್ಸಿನೇಷನ್​​

ಈ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ, ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆಸ್ಪತ್ರೆಗಳು ಮತ್ತು ಸರ್ಕಾರ ಜನರ ಪ್ರಾಣದ ಜೊತೆ ಆಟವಾಡಬಾದರು ಎಂದು ಎಚ್ಚರಿಸಿದರು.

ಮಾಧ್ಯಮದವರು ಕೋವೀಡ್​ಗೆ ಬಲಿಯಾದರೆ ಅವರ ಕುಟುಂಬಕ್ಕೂ 20 ಲಕ್ಷ ರೂ ಪರಿಹಾರ ಹಣ ನೀಡಬೇಕು. ಬೀದಿ ವ್ಯಾಪಾರಿಗಳು, ಕಾರ್ಮಿಕರು, ಬೀದಿ ಪಾಲಾಗುತ್ತಿದ್ದಾರೆ. ಅವರಿಗೆ ಬೇಕಾದ ಗೃಹೋಪಯೋಗಿ ಸೌಲಭ್ಯ ನೀಡಿ. ಜನರ ತೆರಿಗೆ ಹಣವನ್ನಲ್ಲವೇ ನೀವು ಕೊಡೋದು? ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.