ETV Bharat / state

ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬ: ಹಾಸನ ಡಿಸಿ ವಿರುದ್ದ ರೇವಣ್ಣ ಅಸಮಾಧಾನ - ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ

ಹೊಳೆನರಸೀಪುರ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ ಮಾಡಿರುವ ಘಟನೆ ನಡೆದಿದೆ.

KN_HSN_03_23_REVANNA_SPEECH_AVB_KA10026
ಅಭಿವೃದ್ದಿ ಕೆಲಸಗಳಲ್ಲಿ ವಿಳಂಬ: ಹಾಸನ ಡಿಸಿ ವಿರುದ್ದ ಅಸಮಧಾನ ಹೊರ ಹಾಕಿದ ಹೆಚ್.ಡಿ. ರೇವಣ್ಣ
author img

By

Published : Dec 23, 2019, 11:44 PM IST

ಹಾಸನ: ಹೊಳೆನರಸೀಪುರ ಕ್ಷೇತ್ರವನ್ನೆ ಟಾರ್ಗೆಟ್ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ ಮಾಡಿರುವ ಘಟನೆ ನಡೆದಿದೆ.

ಅಭಿವೃದ್ದಿ ಕೆಲಸಗಳಲ್ಲಿ ವಿಳಂಬ: ಹಾಸನ ಡಿಸಿ ವಿರುದ್ದ ಅಸಮಧಾನ ಹೊರ ಹಾಕಿದ ಹೆಚ್.ಡಿ. ರೇವಣ್ಣ

ಹೊಳೆನರಸೀಪುರದ 12 ಪುರಸಭೆ ಸದಸ್ಯರು ಕೂಡ ಸ್ಥಳದಲ್ಲಿದ್ದು, ನಾನು ಪೌರಕಾರ್ಮಿಕರ ಕೆಲಸಕ್ಕೆ ಬಂದಿರುವುದು, ದೊಡ್ಡವರ ಕೆಲಸಕ್ಕೆ ಬಂದಿಲ್ಲ ಸ್ವಾಮಿ ಎಂದರು. ಅದೇನು ಒಳಗೆ ಕುಳಿತು ಚರ್ಚೆ ಮಾಡುವ ಬನ್ನಿ ಸಾರ್ ಎಂದು ಡಿಸಿ ಕರೆದರೂ ಒಳಗೆ ಹೋಗದ ರೇವಣ್ಣ, ಹೊರಗೆ ನಿಂತು ಕಿಡಿಕಾರಿದರು. ನನ್ನ ಕ್ಷೇತ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು. ಈಗಾಗಲೇ ಸ್ಲಂ ಜಾಗ ಎಂದು ಡಿಕ್ಲೇರ್ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.

Intro:ಹಾಸನ: ಹೊಳೆನರಸೀಪುರ ಕ್ಷೇತ್ರವನ್ನೆ ಟಾರ್ಗೇಟ್ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಅವಾಜ್ ಹಾಕಿದ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ಬರುವ ಮೊದಲೇ ಹೆಚ್.ಡಿ. ರೇವಣ್ಣ ಆವರಣದಲ್ಲಿ ಬಂದು ಕಾರಿನಲ್ಲಿ ಕುಳಿತಿದ್ದರು. ಮಾಹಿತಿ ತಿಳಿದ ಡಿಸಿ ಆರ್. ಗಿರೀಶ್ ಕಛೇರಿಯಿಂದ ಹೊರಗೆ ಬಂದರು. ತಕ್ಷಣ ಒಳಗೆ ಬನ್ನಿ ಎಂದು ಕರೆದರೂ ಬಾರದೆ ಕಛೇರಿ ಹೊರಗೆ ಮಾತನಾಡಿ ಎಂದು ಡಿಸಿಗೆ ರೇವಣ್ಣ ತರಾಟೆಗೆ ತೆಗೆದುಕೊಂಡರು. ಹೊಳೆನರಸೀಪುರದ ೧೨ ಪುರಸಭೆ ಸದಸ್ಯರು ಕೂಡ ಸ್ಥಳದಲ್ಲಿದ್ದು, ನಾನು ಪೌರಕಾರ್ಮಿಕರ ಕೆಲಸಕ್ಕೆ ಬಂದಿರುವುದು, ದೊಡ್ಡವರ ಕೆಲಸಕ್ಕೆ ಬಂದಿಲ್ಲ ಸ್ವಾಮಿ ಎಂದರು. ನಿಮ್ಮ ಸಹಿಯನ್ನ ಹೇಗೆ ಫೋರ್ಜರಿ ಮಾಡಿದರು ಈ ಬಗ್ಗೆ ಉತ್ತರ ಕೊಡಬೇಕು.
ಅದೇನು ಒಳಗೆ ಕುಳಿತು ಚರ್ಚೆ ಮಾಡುವ ಬನ್ನಿ ಸಾರ್ ಎಂದು ಡಿಸಿ ಕರೆದರು ಒಳಗೆ ಹೋಗದ ರೇವಣ್ಣ ಹೊರಗೆ ನಿಂತು ಕಿಡಿಕಾರಿದ ಅವರು ನನ್ನ ಕ್ಷೇತ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.
ನಿಮಗೆ ಏನಾದರೂ ಒತ್ತಡ ಇದೆಯಾ, ಇಲ್ಲವೂ? ಬಿಜೆಪಿಯವರ ಕೆಲಸ ಮಾತ್ರ ಮಾಡುತ್ತೀರಾ ಹೇಳಿ ಸ್ವಾಮಿ ಎಂದು ಪ್ರಶ್ನೆ ಮಾಡಿದರು. ಈಗಾಗಲೇ ಸ್ಲಂ ಜಾಗ ಎಂದು ಡಿಕ್ಲೇರ್ ಮಾಡಿದ್ದಾರೆ. ಅದರೆ ಅವರ ಕೆಲಸ ಮಾಡಿಕೊಡುತ್ತಿಲ್ಲ ಎಂದು ಮಾತಿನ ವಾಗ್ದಳಿ ನಡೆಸಿ ಜಿಲ್ಲಾಧಿಕಾರಿಗಳ ಜೊತೆ ಅಸಮಾಧಾನ ಹೊರಹಾಕಿದರು. ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕೆಲಸಗಳಲ್ಲಿ ವಿಳಂಬವಾಗುತ್ತಿದೆ. ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಛೇರಿ ಎದುರು ಧರಣಿಗೆ ನಿರ್ಧಾರ ಮಾಡುವುದಾಗಿ ಹೇಳಿದರು.
ಹೊಳೆನರಸೀಪುರ ಪುರಸಭೆ ವ್ಯಾಪ್ತಿಯ ವಾರ್ಡ ನಂ. ೧೭ರ ಸರ್ವೆ ನಂ. ೬೪ ರಲ್ಲಿ ೭ ಎಕರೆ ೩೨ ಗುಂಟೆ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಣೆ ಮಾಡಬೇಕು. ೨೦೧೨ - ೧೩ನೇ ಸಾಲಿನಲ್ಲಿ ೨೯೩ ವಸತಿರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು , ಹೊಳೆನರಸೀಪುರ ಪಟ್ಟಣದ ಅಲ್ಪಸಂಖ್ಯಾತರುಗಳು , ೪೦ಕ್ಕೂ ಹೆಚ್ಚು ಪೌರಕಾರ್ಮಿಕರುಗಳು , ಹಿಂದುಳಿದ ವರ್ಗದವರುಗಳು ಹಾಗೂ ಪರಿಶಿಷ್ಟ ಜಾತಿ / ಪಂಗಡದ ಅರ್ಹ ಫಲಾನುಭವಿಗಳು ಸದರಿ ಬಡಾವಣೆಯಲ್ಲಿ ಅಂಬೇಡ್ಕರ್ ನಿವಾಸ ಯೋಜನೆ ಹಾಗೂ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಆ ಪ್ರದೇಶದಲ್ಲಿ ಕೆಲವು ಈಗಾಗಲೇ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿದ್ದು , ಕೆಲವು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುತ್ತದೆ . ಸದರಿ ಬಡಾವಣೆಯು ತಗಾದ ಪ್ರದೇಶವಾಗಿದ್ದು , ರಸ್ತೆ , ಚರಂಡಿ , ವಿದ್ಯುತ್ ಹಾಗೂ ಇತರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಜನರು ವಾಸಿಸಲು ಯೋಗ್ಯವಾಗಿರುವುದಿಲ್ಲ ಎಂದರು. ದುರುದ್ದೇಶಪೂರ್ವಕವಾಗಿ ಹೊಳೆನರಸೀಪುರ ಪಟ್ಟಣದ ಕೆಲವರಿಂದ ದೂರು ಅರ್ಜಿಗಳನ್ನು ಪಡೆದು, ಸ್ಥಳಪರಿಶೀಲನೆ ನಡೆಸದ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಹ ಸಲ್ಲಿಸಿರುವುದಿಲ್ಲ ಎಂದು ಕಿಡಿಕಾರಿದರು. ಕೂಡಲೇ ಸರ್ವೆ ನಂ. ೬೪ರ ೭ ಎಕರೆ ೩೨ ಗುಂಟೆ ಬಡಾವಣೆಯನ್ನು ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿ ಆದೇಶ ಹೊರಡಿಸುವಂತೆ ತಾಕೀತು ಮಾಡಿದರು.

ಬೈಟ್ : ಎಚ್. ಡಿ. ರೇವಣ್ಣ, ಮಾಜಿ ಸಚಿವ.

- ಅರಕೆರೆ ಮೋಹನಕುಮಾಋ, ಈಟಿವಿ ಭಾರತ, ಹಾಸನ.
Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.