ಹಾಸನ: ಕೇವಲ ಸಿಟಿ-ಟು-ಸಿಟಿ ಕನೆಕ್ಟ್ ಮಾಡುವ ಏರ್ ಪೋರ್ಟ್ ಬೇಕಾಗಿಲ್ಲ. ಹಾಸನ ಜಿಲ್ಲೆಯನ್ನು ಪ್ರಪಂಚದ ಭೂಪಟದಲ್ಲಿ ನೋಡುವಂತಹ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡುವ ಕನಸು ದೇವೇಗೌಡ ಅವರದ್ದು, ಹಾಗಾಗಿ ಅದನ್ನ ಮುಂದಿನ ದಿನದಲ್ಲಿ ಎಲ್ಲರೂ ಒಟ್ಟಾಗಿ ಮುಖ್ಯಮಂತ್ರಿ ಮತ್ತು ಪ್ರಧಾನಿ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಈಗಾಗಲೇ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ಅಧಿವೇಶನ ಮುಗಿದ ಬಳಿಕ ನಾನು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹರ್ದಿಪ್ ಸಿಂಗ್ ಪೂರಿ ಭೇಟಿ ಮಾಡಿ ಚರ್ಚೆ ಮಾಡುವ ಮೂಲಕ ಗಮನ ಸೆಳೆಯಲಾಗುವುದು. ಜಿಲ್ಲೆಗೆ ಕೇವಲ ಸಿಟಿ ಟು ಸಿಟಿ ಕನೆಕ್ಟ್ ಮಾಡುವ ಏರ್ ಪೋರ್ಟ್ ಬೇಕಾಗಿಲ್ಲ. ನಾವು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡುವ ಕನಸು ಇಟ್ಟುಕೊಂಡಿದ್ದೇವೆ ಎಂದರು.
ಓದಿ: ಶ್ರೀ ಸಾಮಾನ್ಯನಿಗೂ ಹೊರೆಯಾಗುವಂತಹ ಬಜೆಟ್: ಆರ್ಥಿಕ ವಿಶ್ಲೇಷಕರಿಂದ ಆತಂಕ
ನಮಗೆ ದೊಡ್ಡ ಅಲೋಚನೆಗಳಿವೆ. ಹಾಸನ ಜಿಲ್ಲೆಯನ್ನು ಪ್ರಪಂಚದ ಭೂಪಟದಲ್ಲಿ ಹಾಕಬೇಕು ಅನ್ನುವ ಆಸೆ ನಮ್ಮದು. ಹಾಸನ ಜಿಲ್ಲೆ ಬರಿ ಇಂಡಿಯಾ ಮ್ಯಾಪ್ನಲ್ಲೇ ಇರಬೇಕಾ ಎಂದು ಪ್ರಶ್ನೆ ಮಾಡಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ರೈತರಿಗೆ ಅವರೇ ಪರಿಹಾರ ಕೊಡಲಿ. ಇಲ್ಲಿಯ ಏರ್ ಪೋರ್ಟ್ ಮಾಡಲು ದುಡ್ಡಿಲ್ಲ ಆದರೇ ಶಿವಮೊಗ್ಗದಲ್ಲಿ ಏರ್ ಪೋರ್ಟ್ ಮಾಡಲು ದುಡ್ಡಿದೆ. 2008ರಲ್ಲಿ ಹಾಸನದ ಏರ್ ಪೋರ್ಟ್ ರದ್ದು ಮಾಡಿ ಶಿವಮೊಗ್ಗಕ್ಕೆ ತೆಗೆದುಕೊಂಡು ಹೋದರು ಎಂದು ಆಕ್ರೋಶ ವ್ಯಕ್ತಪಡಿಸಿದ್ರು.