ಹಾಸನ: ಹಾಸನಾಂಬೆ ದೇವಾಲಯದ ಬಾಗಿಲು ಇದೇ ತಿಂಗಳ 5ರಂದು ಮಧ್ಯಾಹ್ನ ತೆರೆಯಲಿದೆ ಎಂದು ತಹಶೀಲ್ದಾರ್ ಶಿವಶಂಕರಪ್ಪ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಂದು ಸಾಂಪ್ರದಾಯಿಕವಾಗಿ ದೇವಿಯ ಒಡವೆಗಳನ್ನು ಅರ್ಚಕರಿಗೆ ಹಸ್ತಾಂತರಿಸಿ ಪೂಜೆ ಸಲ್ಲಿಸಲಾಗಿದೆ. ನವೆಂಬರ್ 5ರಿಂದ 16ರವರಗೆ ದೇವಿಯ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಕೋವಿಡ್ ಹಿನ್ನೆಲೆ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಮೊದಲ ಹಾಗೂ ಕೊನೆಯ ದಿನ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ ಮಾಡಿಕೊಡಲು ಈಗಾಗಲೇ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಸಾರ್ವಜನಿಕರಿಗೆ ಎಲ್‌ಇಡಿ ಪರದೆ ಮೂಲಕ ನಗರದ ಪ್ರಮುಖ ವೃತ್ತಗಳಲ್ಲಿ ದರ್ಶನದ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.