ಹಾಸನ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಅಧ್ಯಕ್ಷ ಸ್ಥಾನಕ್ಕೆ ಇಂದು ಕಂದಲಿ ಕ್ಷೇತ್ರದ ವಿಮಲ ವೆಂಕಟೇಗೌಡರವರು ಅವಿರೋಧವಾಗಿ ಆಯ್ಕೆಗೊಂಡರು.
ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿ ಕೆ.ಎಸ್. ಮಂಜೇಗೌಡರು ಆಯ್ಕೆಗೊಂಡಿದ್ದರು. ಕಾಲಾವಧಿ ನಿರ್ಧಾರದಂತೆ ಅಧ್ಯಕ್ಷ ಸ್ಥಾನವು ತೆರವುಗೊಂಡ ಹಿನ್ನೆಲೆಯಲ್ಲಿ ಇಂದು ಚುನಾವಣೆ ಮಾಡಲು ತೀರ್ಮಾನ ಕೈಗೊಂಡಿದ್ದರು. ತಹಶೀಲ್ದಾರ್ ಶಿವಶಂಕರಪ್ಪರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಜೆಡಿಎಸ್ ಪಕ್ಷದಿಂದ ಕಂದಲಿ ಕ್ಷೇತ್ರದ ವಿಮಲ ವೆಂಕಟೇಗೌಡ ಓರ್ವ ಮಹಿಳೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಹೆಸರನ್ನು ಹೇಳಲಾಯಿತು.
ನಂತರದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಮಾಜಿ ಅಧ್ಯಕ್ಷ ಲಕ್ಷ್ಮಣ್, ನಿರ್ದೇಶಕರಾದ ಬಿದರಿಕೆರೆ ಜಯರಾಮ್ ಇತರರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ನಂತರ ಮಾತನಾಡಿದ ಎಪಿಎಂಸಿ ನೂತನ ಅಧ್ಯಕ್ಷೆ ವಿಮಲರವರು, ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಮಹಿಳೆಗೆ ಅವಕಾಶ ನೀಡಿದ್ದು, ನನಗೆ ನೀಡಿರುವ ಜವಬ್ಧಾರಿಯನ್ನು ನಿಷ್ಟೆಯಿಂದ ನಿರ್ವಹಿಸಿ ಮುಂದೆ ಉತ್ತಮ ಕೆಲಸ ಮಾಡಲಾಗುವುದು. ಎಪಿಎಂಸಿ ನಿರ್ದೆಶಕರ ಸಹಕಾರದಲ್ಲಿ ಇಲ್ಲಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಮಾತನಾಡಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಮಾರ್ಗದರ್ಶನದಂತೆ ನಾವೆಲ್ಲರೂ ವಿಮಲ ವೆಂಕಟೇಗೌಡರನ್ನು ಅಧ್ಯಕ್ಷರಾಗಿ ಮಾಡಲು ಬೆಂಬಲ ನೀಡಿದ್ದೇವೆ. ಎಪಿಎಂಸಿ ಮಾರುಕಟ್ಟೆಯನ್ನು ಎಲ್ಲಾ ರೀತಿಯಲ್ಲೂ ರೆಕ್ಕೆಯನ್ನು ಕಟ್ಟು ಮಾಡಿ ದೇಹವನ್ನು ಮಾತ್ರ ಬಿಟ್ಟಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ಧ ಗುಡುಗಿದ್ದಾರೆ. ರೈತರಿಗೆ ಅನಾನುಕೂಳವಾಗುವಂತಹ ನಿರ್ಣಯವನ್ನು ಕೇಂದ್ರ ಸರಕಾರ ಮಾಡಿದೆ. ಹಿಂದಿನ ಸರಕಾರಗಳೆಲ್ಲಾ ಪಾರದರ್ಶಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಈಗ ಅವೆಲ್ಲವನ್ನು ತುಣಿದು ಎಪಿಎಂಸಿಯನ್ನು ಕಡಿಮೆ ದರ್ಜಿಗೆ ತಂದಿದೆ. ಇಲ್ಲಿ ಕೆಲಸ ಮಾಡುವ ನೌಕರರಿಗೆ ಸಂಬಳ ಕೊಡದಷ್ಟು ಸ್ಥಿತಿಗೆ ತರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಪಿಎಂಸಿ ವ್ಯಾಪಾರಸ್ತರು ಮತ್ತು ಸದಸ್ಯರುಗಳೆಲ್ಲಾ ಸೇರಿ 60 ಕೆಜಿ ತೂಕಕ್ಕೆ ನಿಗಧಿ ಮಾಡಲಾಗಿದೆ. ದಂಢ ವಿಧಿಸುವ ಎಲ್ಲಾ ಕೆಲಸವನ್ನು ಇಂದು ತಡೆ ಮಾಡಿದೆ. ಇಂದು ಕಾನೂನು ಜಾರಿ ರೈತರಿಗೆ ಉತ್ತಮವಾಗಿಲ್ಲ ಅನಾನೂಕೂಲವಾಗಿದೆ. ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ಕೋಟಿ ರೂ ಆಸ್ತಿಯಿದೆ. ಉಳಿಸಿಕೊಂಡು ಹೋಗುವುದಕ್ಕೆ ಕಾರ್ಯಕ್ರಮ ಮಾಡುವುದಕ್ಕೆ ಇಂದು ಅನ್ಯಾಯ ಮಾಡಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.