ETV Bharat / state

ಹಾಸನ: ಸನ್ನಡತೆ ಆಧಾರದಲ್ಲಿ 186 ರೌಡಿಶೀಟರ್​ಗಳಿಗೆ ಹೊಸ ಬದುಕಿಗೆ ಅವಕಾಶ

ಹಾಸನ ಜಿಲ್ಲೆಯಲ್ಲಿ ಸನ್ನಡತೆಯ ಆಧಾರದ ಮೇಲೆ ಒಂದಷ್ಟು ರೌಡಿಗಳನ್ನು ರೌಡಿ ಶೀಟರ್​ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಆದರೆ ಮತ್ತದೇ ಕೆಲಸಕ್ಕೆ ಕೈ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಸ್​ಪಿ ಎಚ್ಚರಿಕೆ ಕೊಟ್ಟಿದ್ದಾರೆ.

186-rowdy-sheeters-given-a-new-life-sp-give-strict-warning
ಹಾಸನ: ಸನ್ನಡತೆ ಆಧಾರದ ಮೇಲೆ 186 ರೌಡಿ ಶೀಟರ್​ಗಳಿಗೆ ಹೊಸ ಜೀವನಕ್ಕೆ ಅವಕಾಶ
author img

By

Published : Jan 4, 2023, 6:42 AM IST

ಸನ್ನಡತೆ ಆಧಾರದಲ್ಲಿ ರೌಡಿಶೀಟರ್​ಗಳಿಗೆ ಹೊಸ ಜೀವನಕ್ಕೆ ಅವಕಾಶ

ಹಾಸನ: 'ಜಿಲ್ಲೆಯಲ್ಲಿ ಸನ್ನಡತೆಯ ಆಧಾರದಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ ವ್ಯಕ್ತಿಗಳನ್ನು ಆ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ' ಎಂದು ಹಾಸನ ಎಸ್​ಪಿ ಹರಿರಾಂ ಶಂಕರ್ ಹೇಳಿದ್ದಾರೆ. ​ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕಿನ ಪೊಲೀಸ್ ಠಾಣೆಯಲ್ಲಿ ನಾನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದ 186 ಮಂದಿ ರೌಡಿಶೀಟರ್​ಗಳನ್ನು ಕರೆದು ಅವರು ಎಚ್ಚರಿಕೆ ನೀಡಿದರು. ಇದೇ ವೇಳೆ ಮಹತ್ವದ ವಿಚಾರ ತಿಳಿಸಿದರು.

'ನಿಮ್ಮ ಸನ್ನಡತೆಯ ಮೇಲೆ ಹೊಸ ಜೀವನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಕೆಲವರು ಉದ್ಯೋಗ ಸಿಗದೇ, ಮದುವೆಯಾಗಲೂ ಸಾಧ್ಯವಾಗದೇ, ಯಾವುದೋ ಸಣ್ಣ ತಪ್ಪಿನಿಂದ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ನಿಮ್ಮ ತಪ್ಪಿನಿಂದ ಇಡೀ ಕುಟುಂಬವೇ ತಲೆತಗ್ಗಿಸುವಂತಾಗಿದೆ' ಎಂದರು.

'ಪ್ರತಿ ಬಾರಿಯೂ ಚುನಾವಣೆ ಬಂದಾಗ ಅಥವಾ ತಿಂಗಳಿಗೊಮ್ಮೆ ನಿಮ್ಮ ಮನೆಗೆ ಪೊಲೀಸರು ಬಂದು ಹೋಗೋದು ಮಾಡುತ್ತಿದ್ದರೆ ಕುಟುಂಬದ ಮರ್ಯಾದೆಯೂ ಹಾಳಾಗುತ್ತದೆ. ಈ ಎಲ್ಲಾ ದೃಷ್ಟಿಕೋನದಲ್ಲಿ ಸನ್ನಡತೆಯ ಆಧಾರದಲ್ಲಿ ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಆದರೆ, ಮತ್ತದೇ ಘಾತಕ ಕೆಲಸಕ್ಕೆ ಕೈ ಹಾಕಿದರೆ ಹೊಸದಾಗಿ ರೌಡಿಶೀಟರ್ ಪಟ್ಟಿಗೆ ಸೇರಿಸಬೇಕಾಗುತ್ತದೆ' ಎಂದು ಎಸ್‌ಪಿ ಎಚ್ಚರಿಕೆಯ ಸಂದೇಶ ರವಾನಿಸಿದರು.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಗ್ರೂಪ್​ನಿಂದ ತೆಗೆದು ಹಾಕಿದ ಕಾರಣಕ್ಕೆ ಸಿಟ್ಟು.. ಅಡ್ಮಿನ್​ ನಾಲಿಗೆ ಕತ್ತರಿಸಿದ ದುರುಳರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.