ETV Bharat / state

Oxygen Bus: ತುರ್ತು ಆಮ್ಲಜನಕ ಸೇವೆಗೆ ಸಂಚಾರಿ ಬಸ್​ ಸೇವೆ ಆರಂಭ - ಹಾಸನ ಆಕ್ಸಿಜನ್ ಬಸ್​

ಹಾಸನದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಬಸ್ ಸೇವೆ ಆರಂಭವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಈ ಬಸ್ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ.

Hassan oxigen bus news
Hassan oxigen bus news
author img

By

Published : May 29, 2021, 2:25 AM IST

ಹಾಸನ: ದಿನದಿಂದ ದಿನಕ್ಕೆ ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಆಕ್ಸಿಜನ್ ಒದಗಿಸುವುದು ದೊಡ್ಡ ಸವಾಲಾಗಿದೆ. ಅಲ್ಲದೇ ಹಾಸನದ ಹಿಮ್ಸ್ ಸರ್ಕಾರಿ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದ ಬರುವ ರೋಗಿಗಳಿಗೆ ಆಮ್ಲಜನಕ ನೀಡಲು ವೆಂಟಿಲೇಟರ್ ಮತ್ತು ಬೆಡ್​ಗಳ ಸಮಸ್ಯೆ ಎದುರಾಗಿದೆ.

Hassan oxigen bus news
ಹಾಸನದಲ್ಲಿ ಆಕ್ಸಿಜನ್ ಬಸ್​ ಸೇವೆ

ಈ ಕಾರಣಕ್ಕಾಗಿ ಕೊರೊನಾ ರೋಗಿಗಳ ಅನುಕೂಲಕ್ಕಾಗಿ ಹಾಸನದಲ್ಲಿ ಆಕ್ಸಿಜನ್ ಬಸ್ ಸೇವೆ ಪ್ರಾರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕೆಎಸ್​ಆರ್​ಟಿಸಿ ಸಂಸ್ಥೆ ಜಿಲ್ಲಾಡಳಿತಕ್ಕೆ ಇಂದು ಹಸ್ತಾಂತರ ಮಾಡಲಿದೆ. ಹಾಸನದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಬಸ್ ಸೇವೆ ಆರಂಭವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಈ ಬಸ್ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪ: ಪಿಎಸ್​​ಐಗೆ ನೀಡಿದ್ದ ನಿರೀಕ್ಷಣಾ ಜಾಮೀನು ರದ್ಧು; ಬಂಧಿಸಲು ಹೈಕೋರ್ಟ್​ ಆದೇಶ

ವಿನೂತನವಾಗಿ ಆರಂಭಿಸಿರುವ ಬಸ್​ನಲ್ಲಿ ಆರು ಆಕ್ಸಿಜನ್ ಸಿಲಿಂಡರ್​ಗಳಿದ್ದು,ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಿಗೂ ಇದು ಸಂಚಾರ ಮಾಡಲಿದೆ. ಜೊತೆಗೆ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೂ ಅತಿ ಅವಶ್ಯಕತೆಯಿರುವ ರೋಗಿಗಳಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಸೇವೆ ನೀಡಲಿದೆ.

ಈ ಬಸ್ ನಿರ್ಮಾಣವಾಗಿದ್ದು ಹೇಗೆ? ಯಾರ ಸಹಕಾರದಿಂದ ಈ ಬಸ್ ತಯಾರಾಗಿದೆ? ಇದರಲ್ಲಿರುವ ಸೌಲಭ್ಯಗಳೇನು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಮ್ಮ ಹಾಸನದ ಪ್ರತಿನಿಧಿ ವಾಕ್ ಥ್ರೂ & ಚಿಟ್ ಚಾಟ್ ಮೂಲಕ ಮಾಹಿತಿ ನೀಡಿದ್ದಾರೆ.

ಹಾಸನದಲ್ಲಿ ಆಕ್ಸಿಜನ್​ ಬಸ್ ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.