ಹಾಸನ: ಜೋಳದ ಬೆಳೆ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸೊಪ್ಪನ್ನು ಅಬಕಾರಿ ಉಪಅಧೀಕ್ಷಕರು ವಶಪಡಿಸಿಕೊಂಡಿದ್ದಾರೆ.
ಹಾಸನ ತಾಲೂಕಿನ ನಂಜದೇವರ ಕಾವಲು ಗ್ರಾಮದ ನಿರ್ವಾಣಿಗೌಡ ಇವರಿಗೆ ಸೇರಿದ ಸರ್ವೆ ನಂ. 107ರಲ್ಲಿ ಜೋಳದ ಬೆಳೆ ಮಧ್ಯೆ ಅಕ್ರಮವಾಗಿ 25 ಸಾವಿರ ರೂ. ಮೌಲ್ಯದ ಗಾಂಜಾ ಬೆಳೆಯಲಾಗಿತ್ತು. ಎಲೆ, ಮೊಗ್ಗು, ಹೂವು ಭರಿತ ಒಟ್ಟು 31 ಗಾಂಜಾ ಗಿಡಗಳನ್ನು ಉಪ ಆಯುಕ್ತರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು, ಉಪವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಗರದ ಉಪ ಆಯುಕ್ತ ಗೋಪಾಲಕೃಷ್ಣಗೌಡ ಹಾಗೂ ಉಪ ಅಧೀಕ್ಷಕ ಎಂ.ಹೆಚ್. ರಘು, ಅಬಕಾರಿ ನಿರೀಕ್ಷಕಿ ಎ.ಎಸ್. ವಿದ್ಯಾ, ಆರಕ್ಷಕ ಉಪ ನಿರೀಕ್ಷಕಿ ಭಾರತೀ ರಾಯನಗೌಡ, ಅಬಕಾರಿ ರಕ್ಷಕ ಮಂಜುನಾಥ್, ಹೆಚ್.ಎಲ್. ಹನುಮಂತಯ್ಯ ಇತರರು ಉಪಸ್ಥಿತರಿದ್ದರು.