ETV Bharat / state

ಬಿಟ್ಟ ಹೋಗ್​ ಬೇಡಾ ನನ್ನ..! ವಿರಹ ವೇದನೆಗೆ ಕೈಮೇಲಿನ ಹಚ್ಚೆ ಕೊಯ್ದುಕೊಂಡ ಯುವಕ.. - ಪೊಲೀಸ್ ಠಾಣೆ

ಇಬ್ಬರು ಮದುವೆಯಾದ ವಿಚಾರ ತಿಳಿದ ಯುವತಿ ಮನೆಯವರು, ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್​ ಕಂಪ್ಲೇಂಟ್ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಯುವತಿ ಅಜಯ್​ನನ್ನು ಬಿಟ್ಟು ತೆರಳಿದ್ದಾಳೆ. ಆಕೆ ಇಲ್ಲದೇ ನಾನು ಬದುಕುವುದಿಲ್ಲ. ನನಗೆ ನನ್ನ ಹೆಂಡತಿ ಬೇಕು ಎಂದು ಸಂಕಟ ಪಡುತ್ತಿದ್ದಾನೆ ಅಜಯ್​.

ವಿರಹ ವೇದನೆಗೆ ಕೈಮೇಲಿನ ಹಚ್ಚೆ ಕೊಯ್ದುಕೊಂಡ ಯುವಕ
author img

By

Published : Sep 22, 2019, 9:00 PM IST

Updated : Sep 22, 2019, 9:10 PM IST

ಹಾಸನ: ಪ್ರೀತಿ ಒಂದು ಮಾಯೆ. ಈ ಮಾಯೆಯ ಬಲೆಯೊಳಗೆ ಬಿದ್ದ ಅದೆಷ್ಟೋ ಜೀವಗಳು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಉದಾಹರಣೆಗಳಿವೆ. ಒಂದೊಮ್ಮೆ ನೀನೆ ನನ್ನ ಜಗತ್ತು ಎಂದವಳು ಬಿಟ್ಟು ಹೋದಾಗ ಪ್ರಿಯತಮನ ಸ್ಥಿತಿ ದಿಕ್ಕು ತೋಚದಂತಾಗುತ್ತದೆ.

ಅವರಿಬ್ಬರು 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು. ಆದರೆ, ಮನೆಯವರ ಒಪ್ಪಿಗೆ ಸಿಗದಿದ್ದಾಗ, ಕುಟುಂಬದ ವಿರುದ್ಧವಾಗಿಯೇ ಅಜಯ್​ ಮತ್ತು ಆತನ ಪ್ರಿಯತಮೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವಾರವೂ ಕಳೆದಿರಲಿಲ್ಲ. ಮನ ಮೆಚ್ಚಿದ ಮಡದಿ ತನ್ನ ಹೆತ್ತವರ ಕಣ್ಣೀರಿಗೆ ಕರಗಿ ಗಂಡನನ್ನು ತೊರೆದಿದ್ದಾಳೆ. ಪ್ರಿಯತಮೆಯನ್ನು ಕಳೆದುಕೊಂಡ ವಿರಹ ವೇದನೆ ಪ್ರಿಯತಮನನ್ನು ಚುಚ್ಚಿ ಕೊಲ್ಲುತ್ತಿದೆ. ತನ್ನವಳನ್ನು ತನಗೆ ಮರಳಿ ಕೊಡಿಸುವಂತೆ ಯುವಕ ಗೋಗರೆಯುತ್ತಿದ್ದಾನೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾರನಹಳ್ಳಿ ತಾಂಡಾ ನಿವಾಸಿಯಾಗಿರುವ ಅಜಯ್​, ಸದ್ಯ ಫ್ಲವರ್ ಡೆಕೋರೇಟರ್ ಕೆಲಸ ಮಾಡಿಕೊಂಡಿದ್ದಾನೆ.

ಬಿಟ್ಟ ಹೊಗ್​ ಬೇಡಾ ನನ್ನ..!

50 ಸಾವಿರ ದಂಡ ಕಟ್ಟಿ ಮದುವೆಯಾಗಿದ್ದರು :

ತಾಂಡಾಗಳಲ್ಲಿ ವಾಸಿಸುವ ಲಂಬಾಣಿ ಜನಾಂಗದವರು ತಮ್ಮ ಜಾತಿಯವರನ್ನಲ್ಲದೇ ಬೇರೆಯವರನ್ನ ಮದುವೆಯಾಗುವಂತಿಲ್ಲ. ಹಾಗೇನಾದ್ರೂ ಮದುವೆಯಾಗಿ ಬಂದ್ರೆ ಊರಿನ ಪಂಚಾಯತ್‌ಗೆ 50 ಸಾವಿರ ರೂ. ದಂಡ ಕಟ್ಟಬೇಕು. ಹಾಗಾಗಿ ಅಜಯ್ ಮನೆಯವರು ಊರಿನ ಪಂಚಾಯತ್‌ಗೆ 50 ಸಾವಿರ ರೂ. ದಂಡ ಕಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆಯಾಗಿದ್ದರು.

ಒಪ್ಪಿಕೊಂಡವಳು ಕೈಕೊಟ್ಟು ಹೋದಳು :

ಇಬ್ಬರು ಮದುವೆಯಾದ ವಿಚಾರ ತಿಳಿದ ಯುವತಿ ಮನೆಯವರು, ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್​ ಕಂಪ್ಲೇಂಟ್ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಯುವತಿ ಅಜಯ್​ನನ್ನು ಬಿಟ್ಟು ತೆರಳಿದ್ದಾಳೆ. ಆಕೆ ಇಲ್ಲದೇ ನಾನು ಬದುಕುವುದಿಲ್ಲ. ನನಗೆ ನನ್ನ ಹೆಂಡತಿ ಬೇಕು ಎಂದು ಸಂಕಟ ಪಡುತ್ತಿದ್ದಾನೆ ಅಜಯ್​.

ಈ ಸಂಬಂಧ ಅಜಯ್ ಕೂಡ ಅರಸಿಕೆರೆ ಮತ್ತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾನೆ. ಮನವಿಗೆ ಸ್ಪಂದಿಸಿದ ಎಸ್ಪಿ ಸಹ ಮತ್ತೊಮ್ಮೆ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಿಸಿ ನ್ಯಾಯ ದೊರಕಿಸಿಕೊಡುವ ಭರವಸೆಯನ್ನ ನೀಡಿದ್ದಾರೆ.

ಕೈ ಕೊಯ್ದುಕೊಂಡು ಆಸ್ಪತ್ರೆಗೆ ದಾಖಲು :

ಆದರೆ, ನೊಂದ ಯುವಕ ತನ್ನ ಕೈಮೇಲೆ ಹಾಕಿಕೊಂಡಿದ್ದ ಆಕೆಯ ಹೆಸರಿನ ಹಚ್ಚೆ ಮೇಲೆ ಚಾಕುವಿನಿಂದ ಕುಯ್ದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

Intro:ಹಾಸನ: ಇವರು 5 ವರ್ಷಗಳಿಂದ ಪ್ರೀತಿಸಿದ್ರು. ಮದುವೆಯನ್ನ ಕೂಡಾ ಆದ್ರು. ಮದುವೆಯಾಗಿ ವಾರವೂ ಕಳೆದಿಲ್ಲ. ಹೆತ್ತವರ ಕಣ್ಣಿರಿಗೆ ಕರಗಿ ಮದುವೆಯಾದ ಪ್ರಿಯತಮೆ ತನ್ನ ಪ್ರಿಯತಮನನ್ನ ತೊರೆದು ತವರು ಮನೆಗೆ ವಾಪಸ್ಸಾಗಿದ್ದು, ಭಗ್ನಪ್ರೇಮಿಯಾದ ಹುಡುಗ ಸಾಮಾಜಿಕ ಜಾಲಾತಾಣಗಳಲ್ಲಿ ಫಿಲಿಂಗ್ ಸಾಂಗ್ಸ್ ಹಾಕಿಕೊಂಡು ತನ್ನ ನೋವನ್ನ ಹಂಚಿಕೊಂಡಿರೋ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹೌದು...ಹೀಗೆ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ತನ್ನ ಪ್ರಿಯತಮೆಯೊಂದಿಗೆ ಕಳೆದ 5 ವರ್ಷಗಳಿಂದ ಸುತ್ತಾಡಿದ ನೆನಪಿನ ಪೋಟೋಗಳನ್ನ ತಿರುವು ಹಾಕುತ್ತಿರೋ ಪ್ರಿಯತಮನ ಹೆಸರು ಅಜೇಯ್. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ತಾಂಡ್ಯಾದವನು. ಸದ್ಯ ಹಾಸನದಲ್ಲಿ ಪ್ಲವರ್ ಡೆಕೋರೆಟರ್ ಕೆಲಸ ಮಾಡಿಕೊಂಡಿರೋ ಮತ್ತು ಅರಸೀಕೆರೆ ತಾಲ್ಲೂಕಿನ ಸಿಂಧೂ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ರು. 2 ವರ್ಷಗಳ ಹಿಂದೆ ಮನೆಯವರಿಗೆ ವಿಚಾರ ತಿಳಿದು ಇಬ್ಬರಿಗೂ ಬುದ್ದಿವಾದ ಹೇಳಿ ಸುಮ್ಮನಾಗಿಸಿದ್ರು. ಎಷ್ಟೆ ಬುದ್ದಿವಾದ ಹೇಳಿದ್ರು ಒಮ್ಮೆ ಕಮಿಟ್ ಆದ್ರೆ ಪ್ರೇಮಿಗಳ ಮನಸ್ಸು ಯಾರ ಮಾತನ್ನ ಕೂಡಾ ಕೇಳೋದಿಲ್ಲ. ಪೋಷಕರಿಗೆ ಗೊತ್ತಾಗದಂತೆ ಇಬ್ಬರು ಭೇಟಿಯಾಗುತ್ತಿದ್ರು.

ಕಾಲೇಜಿಗೆ ಚಕ್ಕರಾಕಿ ಪುಲ್ ಎಂಜಾಯ್ ಮಾಡಿದ ಪ್ರೇಮಿಗಳು:
ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಬರುತ್ತಿದ್ದ ಸಿಂಧೂ, ವಾರದಲ್ಲಿ ಮೂರು ನಾಲ್ಕು ಬಾರಿ ತನ್ನ ಪ್ರೀಯತಮನೊಂದಿಗೆ ಸುತ್ತಾಡುತ್ತಿದ್ದಳು. ಪ್ಲವರ್ ಡೆಕೆರೇಟರ್ಸ್ ನಲ್ಲಿ ದುಡಿದ ಹಣವನ್ನೆಲ್ಲಾ ಅಜೇಯ್ ಸಿಂಧೂ ಹೇಳೋ ಮಾತಿಗೆ ಇಲ್ಲ ಅನ್ನದೇ ಸಕಲೇಶಪುರ, ಚಿಕ್ಕಮಗಳೂರು, ಮಡಿಕೇರಿ ಹೀಗೆ ಹಲವು ಜಿಲ್ಲೆಯಗಳ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ ಖುಷಿ ಖುಷಿಯಾಗಿ ಎಂಜಾಯ್ ಮಾಡ್ತಿದ್ರು. ಈ ವಿಚಾರವೆಲ್ಲಾ ಮತ್ತೊಮ್ಮೆ ಕುಟುಂಬದವರಿಗೆ ಗೊತ್ತಾದಾಗ ಸಿಂಧುವನ್ನ ಮನೆಯಿಂದ ಹೊರಹೋಗದಂತೆ ನಿರ್ಭಂದವೇರಿದ್ರು. ಕಾಲೇಜಿಗೆ ಹೋಗದಂತೆ 23 ವರ್ಷಕ್ಕೆ ಜೀವನದಲ್ಲಿ ಹಣ, ಅಂತಸ್ತು ಸಂಪಾದಿಸಿದ ಈತ ಇಚ್ಚೆಯನ್ನರಿತ ಪತ್ನಿಯನ್ನ ಪಡೆದುಕೊಂಡ ಕೆಲವೇ ದಿನದಲ್ಲಿ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಾನೆ. ಸಂಪ ಇಬ್ಬರನ್ನ ಸದ್ಯ ಹೆತ್ತವರು ದೂರ ಮಾಡಿ.

50 ಸಾವಿರ ದಂಡ ಕಟ್ಟಿ ಮದುವೆಯಾಗಿದ್ದರು:
ತಾಂಡ್ಯಗಳಲ್ಲಿ ವಾಸಿಸುವ ಲಂಬಾಣಿ ಜನಾಂಗದವರು ತಮ್ಮ ಜಾತಿಯವರನ್ನಲ್ಲದೇ ಬೇರೆಯವರನ್ನ ಮದುವೆಯಾಗುವಂತಿಲ್ಲ. ಹಾಗೇನಾದ್ರು ಮದುವೆಯಾಗಿ ಬಂದ್ರೆ ಊರಿನ ಪಂಚಾಯ್ತಿಗೆ 50 ಸಾವಿರ ದಂಡ ಕಟ್ಟಬೇಕು. ಹಾಗಾಗಿ ಸಿಂಧೂ ಬೇರೆ ಜಾತಿಯವಳಾಗಿದ್ರಿಂದ ಅಜಯ್ ಮನೆಯವರು ಊರಿನ ಪಂಚಾಯ್ತಿಗೆ 50 ಸಾವಿರ ದಂಡ ಕಟ್ಟಿ, ಆಕೆಯೊಂದಿಗೆ ಗ್ರಾಮಸ್ಥರುಗಳ ಸಮ್ಮುಖದಲ್ಲಿಯೇ ಮದುವೆಯಾಗಿದ್ದ.

ಬೈಟ್: ಅಜೇಯ್, ನೊಂದ ಪ್ರೇಮಿ.

ಒಪ್ಪಿಕೊಂಡವಳು ಕೈಕೊಟ್ಟು ಹೋದಳು:
ಇನ್ನು ಈ ವಿಚಾರ ಸಿಂಧು ಮನೆಯವರಿಗೆ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ದೂರು ನೀಡಿದ ಹಿನ್ನಲೆಯಲ್ಲಿ ಇಬ್ಬರನ್ನ ಠಾಣೆಗೆ ಕರೆಸಿ ವಿಚಾರಿಸಿದಾಗ ಪರಸ್ಪರ ಒಪ್ಪಿಮದುವೆಯಾಗಿದ್ದೇವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲಿಯೇ ಮನೆಯವರ ಸಿಂಧುವಿಗೆ ಏನು ಮೋಡಿ ಮಾಡಿದ್ರೋ ಗೊತ್ತಿಲ್ಲ. ಪೊಲೀಸ್ ಠಾಣೆಯಿಂದ ಹೊರಬರಬೇಕಾದ್ರೆ ನಾನು ನಮ್ಮ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಅಜೇಯ್ ಮನಸ್ಸಿಗೆ ನೋವುಂಟು ಮಾಡಿದೆಯಂತೆ. ಆಕೆ ಇಲ್ಲದೇ ನಾನು ಬದುಕುವುದಿಲ್ಲ. ನನಗೆ ನನ್ನ ಹೆಂಡತಿ ಬೇಕು ಎಂದು ಈಟಿವಿ ನ್ಯೂಸ್ ಮುಂದೆ ತನ್ನ ಅಳಲನ್ನು ತೋಡಿಕೊಂಡ.

ಬೈಟ್: ಅಜೇಯ್, ನೊಂದ ಪ್ರೇಮಿ.

ಇನ್ನು ಈ ಸಂಬಂಧ ಅಜೇಯ್ ಅರಸೀಕೆರೆ ಮತ್ತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರುನೀಡಿದ್ದು, ಸಿಂಧುವಿಲ್ಲದೇ ನಾನು ಬದುಕುವುದಿಲ್ಲ. ಆಕೆಯನ್ನ ನಾನು ಮನಸಾರೆ ಪ್ರೀತಿಸಿ ಮದುವೆಯಾಗಿದ್ದೇನೆ. ಸಿಂಧು ಮನೆಯವರ ಬಲವಂತಕ್ಕೆ ನನ್ನಿಂದ ದೂರವಾಗಿದ್ದಾಳೆ. ನಾನು ಅವಳನ್ನ ಚನ್ನಾಗಿ ನೋಡಿಕೊಳ್ಳುತ್ತೇನೆ. ನಮ್ಮಿಬ್ಬರನ್ನ ಒಂದು ಮಾಡಿ ಅಂತ ಮನವಿಯನ್ನ ಸಲ್ಲಿಸಿ ದೂರು ಕೂಡಾ ನೀಡಿದ್ದಾನೆ. ಮನವಿಗೆ ಸ್ಪಂದಿಸಿದ ಎಸ್ಪಿ ಕೂಡಾ ಮತ್ತೊಮ್ಮೆ ಸಿಂಧುವನ್ನ ಠಾಣೆಗೆ ಕರೆಸಿ ವಿಚಾರಸಿ ನ್ಯಾಯ ದೊರಕಿಸಿಕೊಡುವ ಭರವಸೆಯನ್ನ ನೀಡಿದ್ದಾರೆ.

ಆದ್ರೆ ನೊಂದ ಭಗ್ನ ಪ್ರೇಮಿ ಮಾತ್ರ ಸಾಮಾಜಿಕ ಜಾಲತಾಣಗಳ ಮೂಲಕ ಫಿಲಿಂಗ್ ಸಾಂಗ್ಸ್ ಡಬ್ಬ ಮಾಡಿಕೊಂಡು ವಿರಹವೇದನೆ ಅನುಭವಿಸುತ್ತಿದ್ದಾನೆ. ಅಲ್ಲದೆ ತನ್ನ ಕೈಮೇಲೆ ಹಾಕಿಕೊಂಡಿದ್ದ ಆಕೆಯ ಹೆಸರಿನ ಹಚ್ಚೆ ಮೇಲೆ ಚಾಕುವಿನಿಂದ ಕೈ ಕೊಯ್ದುಕೊಂಡು ಸತ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ

Body:0

Conclusion:0
Last Updated : Sep 22, 2019, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.