ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆ ಈ ಬಾರಿ ಅಕ್ಟೋಬರ್ 17 ರಿಂದ 29 ರವರೆಗೆ ದರ್ಶನ ನೀಡಲಿದ್ದು, ಹಾಸನಾಂಬೆ ದೇವಿಗೆ ಅಲಂಕಾರ ಮಾಡುವ ಉದ್ದೇಶದಿಂದ ಇವತ್ತು ಶಾಸ್ತ್ರೋಕ್ತವಾಗಿ ದೇವಿಯ ಒಡವೆಗಳನ್ನು ಖಜಾನೆಯ ಇಲಾಖೆ ಕಚೇರಿಯಿಂದ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಆವರಣಕ್ಕೆ ತರಲಾಯಿತು.
ಹಾಸನಾಂಬೆ ದೇವಾಲಯದ ಬಾಗಿಲನ್ನು ಇದೆ ತಿಂಗಳು 17ರ ಗುರುವಾರ ಮದ್ಯಾಹ್ನ ತೆಗೆದು 12. 30ಕ್ಕೆ ತೆರೆಯಲಾಗುವುದು. ಈ ಬಾರಿ ಹಾಸನಾಂಬೆ ದರ್ಶನಕ್ಕಾಗಿ ವಿಶೇಷವಾಗಿ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡುವ ಮೂಲಕ ಭಕ್ತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ. ಈ ಬಾರಿ 13 ದಿನಗಳ ಕಾಲ ಸಾರ್ವಜನಿಕರ ದರ್ಶನ ಸಿಗಲಿದ್ದು, ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಸಿಗುವ ಸೌಲಭ್ಯಗಳ ಮಾಹಿತಿ ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ ಬಗ್ಗೆ ಮಾಹಿತಿ, ಹೊರಗಿನಿಂದ ಬರುವ ಭಕ್ತಾಧಿಗಳಿಗೆ ಹಾಸನ ಸುತ್ತ ಮುತ್ತ ಯಾವ ಯಾವ ಪ್ರೇಕ್ಷಣಿಯ ಸ್ಥಳಗಳಿವೆ ಇದನ್ನು ಕೂಡ ವೆಬ್ ಸೈಟ್ ನಲ್ಲಿ ಮಾಹಿತಿ ಕೊಡಲಾಗಿದೆ.