ETV Bharat / state

ಹಾಸನ: ಜಿಲ್ಲೆಯಲ್ಲಿ ಇಂದೂ 300ರ ಗಡಿ ದಾಟಿದ ಕೊರೊನಾ ಕೇಸ್​

author img

By

Published : Oct 2, 2020, 3:45 PM IST

ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ಮುನ್ನೂರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಅತೀ ಹೆಚ್ಚು ಕೊರೊನಾ ಪೀಡಿತ ಜಿಲ್ಲೆಯಾಗುತ್ತಿದೆ.

Hassn District Covid-19 tally
ಹಾಸನದಲ್ಲಿ ಕೋವಿಡ್​ ಪ್ರಕರಣಗಳು

ಹಾಸನ : ಕಳೆದೆರಡು ದಿನಗಳಿಂದ ಮೂನ್ನೂರರ ಗಡಿ ದಾಟಿದ್ದ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ, ಇಂದೂ ಕೂಡ ಅದೇ ರೀತಿ ಮುಂದುವರೆದಿದೆ. ಇಂದು 309 ಹೊಸ ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ಇದುವರೆಗೂ ಜಿಲ್ಲೆಯಲ್ಲಿ 17, 470 ಮಂದಿಗೆ ಸೋಂಕು ತಗುಲಿದೆ. ಈಗಾಗಲೇ 3,558 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು 211 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 13,571 ಮಂದಿ ಕೊರೊನಾ ಮುಕ್ತರಾಗಿದ್ದಾರೆ. ಇಂದು 6 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ಒಟ್ಟು 341 ಮಂದಿ ಮೃತಪಟ್ಟಿದ್ದಾರೆ. ಒಟ್ಟು 49 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Hassn District Covid-19 tally
ಆರೋಗ್ಯ ಇಲಾಖೆಯ ಕೋವಿಡ್​ ವರದಿ

ತಾಲೂಕುವಾರು ಅಂಕಿ ಅಂಶ :

ಇಂದು ಆಲೂರು ತಾಲೂಕಿನಲ್ಲಿ 3, ಅರಕಲಗೂಡಿನಲ್ಲಿ 26, ಅರಸೀಕೆರೆಯಲ್ಲಿ 26, ಬೇಲೂರಿನಲ್ಲಿ 19, ಚನ್ನರಾಯಪಟ್ಟಣದಲ್ಲಿ 66, ಹಾಸನ ನಗರದಲ್ಲಿ 134, ಹೊಳೆನರಸೀಪುರದಲ್ಲಿ 30, ಸಕಲೇಶಪುರದಲ್ಲಿ 4, ಇತರ 1 ಹೊಸ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.