ETV Bharat / state

ಹಾಸನದಲ್ಲಿ ಜೆಡಿಎಸ್​ -ಕಾಂಗ್ರೆಸ್​​ ನಡುವೆ ಬಿರುಕು: ತೆನೆ ಹೊತ್ತವಳ​ ಸಹವಾಸ ಸಾಕು ಎಂದ ಎಂಎಲ್​​ಸಿ - ರೇವಣ್ಣ ವಿರುದ್ಧ ಎಂಎಲ್​​ಸಿ ಗೋಪಾಲಸ್ವಾಮಿ ವಾಗ್ದಾಳಿ

ಹಾಸನ ಜಿಲ್ಲಾ ಪಂಚಾಯಿತಿ ಸಭೆಗೆ ಜೆಡಿಎಸ್​ನ 23 ಸದಸ್ಯರು ಗೈರಾದ ಹಿನ್ನೆಲೆ ಕಾಂಗ್ರೆಸ್​ - ಜೆಡಿಎಸ್​ ನಡುವೆ ಬಿರುಕು ಮೂಡಿದ್ದು,ಕಾಂಗ್ರೆಸ್​​ ನಾಯಕರು ಜೆಡಿಎಸ್​​ ಸಹವಾಸ ಸಾಕು ಅಂತ ಬಹಿರಂಗವಾಗಿ ಹೇಳಿಕೆ ನೀಡ್ತಿದ್ದಾರೆ.

hassan  congress leaders outrage on jds party
ಹಾಸನದಲ್ಲಿ ಜೆಡಿಎಸ್​ ಕಾಂಗ್ರೆಸ್​​ ನಡುವೆ ಬಿರುಕು
author img

By

Published : Jun 6, 2020, 10:41 AM IST

Updated : Jun 6, 2020, 11:52 AM IST

ಹಾಸನ: ಸದ್ಯ ಹಾಸದಲ್ಲಿ ಕೈ ನಾಯಕರು ಜೆಡಿಎಸ್ ರಾಜಕೀಯ ದಾಳಕ್ಕೆ ಬೆಪ್ಪಾಗಿ ಹೋಗಿದ್ದಾರೆ. ಜೆಡಿಎಸ್ ಜೊತೆ ಸೇರಿ ನಮ್ಮ ಕಾರ್ಯಕರ್ತರಿಗೆ ಮೋಸ ಮಾಡಿದಂತಾಯ್ತು ಎಂದು ಕಾರ್ಯಕರ್ತರಲ್ಲಿ ಕ್ಷಮೆ ಕೇಳ್ತಿದ್ದಾರೆ.

ಹಾಸನದಲ್ಲಿ ಜೆಡಿಎಸ್​ ಕಾಂಗ್ರೆಸ್​​ ನಡುವೆ ಬಿರುಕು

ಕಳೆದ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರು ಹೈ - ಕಮಾಂಡ್ ಆದೇಶದಂತೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಕ್ಕೆ ನಿಂತು ಪ್ರಜ್ವಲ್ ರೇವಣ್ಣ ಗೆಲುವಿಗೆ ಹೆಗಲು ಕೊಟ್ಟರು. ಈ ವೇಳೆ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಒಲ್ಲದ ಮನಸಿನಿಂದ ಸೈ ಅಂದ್ರು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿದ್ದ ಎ.ಮಂಜು ಪಕ್ಷ ತೊರೆದು ಬಿಜೆಪಿ ಪಾಳಯಕ್ಕೆ ಜಿಗಿದಿದ್ದಾರೆ.

ಆದರೆ, ಈಗ ಕೈ ನಾಯಕರು ಜೆಡಿಎಸ್ ಸಂಘದಿಂದ ರೋಸಿ ಹೋಗಿದ್ದಾರೆ. ಇದಕ್ಕೆ ಕಾರಣ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕರೆದ ಮೂರು ಸಭೆಗಳಿಗೂ ಜೆಡಿಎಸ್‌ನ 23 ಸದಸ್ಯರು ಗೈರಾಗಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾ ಪಂಚಾಯತ್ ಗೆ ಬಂದ ಒಟ್ಟು 112 ಕೊಟಿ ಹಣ ವಾಪಸ್ ಆಗುತ್ತೆ. ಅಂತ ಅಧ್ಯಕ್ಷೆ ಶ್ವೇತಾ ದೇವರಾಜ್ ಕಳವಳ ವ್ಯಕ್ತಪಡಿಸಿದ್ರು. ಇದಕ್ಕೆ ನೇರ ಕಾರಣ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಾರಣ ಅಂತ ಹೇಳಿಕೆ ನೀಡಿದ್ರು. ಇದಕ್ಕೆ ಹಾಸನ ಎಂ​ಎಲ್​​ಸಿ ಗೋಪಾಲಸ್ವಾಮಿ ಧ್ವನಿ ಗೂಡಿಸಿದ್ರು.

ಇದಕ್ಕೆ ಪ್ರತಿಯಾಗಿ ಮಾಜಿ ಸಚಿವ ರೇವಣ್ಣ ಹಾಸನ ಜಿ.ಪಂ.​ಅಧ್ಯಕ್ಷೆ ಶ್ವೇತಾ ದೇವರಾಜ್ ಹಾಗೂ ಎಮ್​​ಎಲ್​ಸಿ ಗೋಪಾಲಸ್ವಾಮಿಗೆ ಟಾಂಗ್ ನೀಡಿದ್ರು. ಇವರಿಂದ ನಾನು ಕೋವಿಡ್ ಪಾಠ ಹೇಳಿಸಿಕೊಳ್ಳಬೇಕಿಲ್ಲ. ಎಂ​​ಎಲ್​ಸಿ ಯಾದವರು ಸ್ವಲ್ಪ ತಿಳ್ಕೊಂಡು ಮಾತಾಡಬೇಕು, ಅವರು ಸರಿಯಾಗಿ ಸಭೆಯನ್ನ ಮಾಡ್ತಿಲ್ಲ ಅಂತ ರೇವಣ್ಣ ಪ್ರತಿದಾಳಿ ಮಾಡಿದ್ರು.

ಆದ್ರೆ ಈಗ ಜೆಡಿಎಸ್​ಗೆ ಸಹಾಯ ಮಾಡಿದ ಅದೇ ಕೈ ನಾಯಕರು ನಾವು ಇಂತಹರೊಂದಿಗೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದ್ವಿ. ನಮ್ಮ ಕಾರ್ಯಕರ್ತರನ್ನ ಕೈ ಮುಗಿದು ಕೇಳಿಕೊಳ್ಳುತ್ತೇವೆ ದಯವಿಟ್ಟು ನಮ್ಮನ್ನ ಕ್ಷಮಿಸಿ, ಇವರ ಸಹಾವಾಸವೇ ಸಾಕು. ರಾಜ್ಯ ನಾಯಕರು ಇವರಿಂದ ದೂರ ಇದ್ರೆ ಉತ್ತಮ ಅಂತ ಹಾಸನದ ಎಂಎಲ್ ಸಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಹಾಸನದ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಮೈತ್ರಿ ಮಾತಾಡಿದ್ರೆ ನಾವು ಇವರ ಜೊತೆ ಹೋಗಲು ರೆಡಿ ಇಲ್ಲ ಅಂತ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Last Updated : Jun 6, 2020, 11:52 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.