ETV Bharat / state

ನಾವು ಪಕ್ಕಾ ಕಾಂಗ್ರೆಸ್ಸಿಗರು, ಆದ್ರೆ ಈ ಬಾರಿ ವೋಟು ಮಾತ್ರ ಮೋದಿಗೆ! - ದೇವೇಗೌಡ್ರ ಸ್ವಕ್ಷೇತ್ರ

ನಾವು ಪಕ್ಕಾ ಕಾಂಗ್ರೆಸ್ ಕಟ್ಟಾಳುಗಳು. ಮೈತ್ರಿ ಧರ್ಮ ಪಾಲಿಸಲು ಹೋಗಿ ನಾವು ಮಣ್ಣು ತಿನ್ನುವಂತಾಗಿದೆ. ನಾವು ಕಾಂಗ್ರೆಸ್ಸಿಗರಾದರೂ ನಮ್ಮ ವೋಟು ಮಾತ್ರ ಮೋದಿಗೆ ಎಂದ ಗೌಡ್ರ ಸ್ವಕ್ಷೇತ್ರದ ಕೈ ಕಾರ್ಯಕರ್ತರು.

ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೆಸ್ ಸಭೆ
author img

By

Published : Apr 8, 2019, 4:19 PM IST

ಹಾಸನ: ಮೋದಿ... ಮೋದಿ...ಮೋದಿ... ದೇಶದಲ್ಲೆಡೆ ಮೋದಿ ಹೆಸರು ವಿರಾಜಮಾನವಾಗಿ ರಾರಾಜಿಸುತ್ತಿದೆ. ಇವತ್ತು ಕೂಡಾ ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೆಸ್ ಸಭೆಯಲ್ಲಿ ಕೇಳಿಬಂದ ಸೌಂಡ್ ಇದು.

ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೆಸ್ ಸಭೆ

ಮೈತ್ರಿ ಧರ್ಮ ಪಾಲಿಸಲು ಹೋಗಿ ನಾವು ಮಣ್ಣು ತಿನ್ನುವಂತಾಗಿದೆ. ಈ ಬಾರಿ ಮೋದಿ ಚಾ ಕುಡಿದು ಸುಭದ್ರ ದೇಶ ಕಟ್ಟೋಣ ಅಂತ ಕಾರ್ಯಕರ್ತರು ಒಕ್ಕೊರಲಿನಿಂದ ದನಿಗೂಡಿಸಿದರು.

ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ರಾಜ್ಯದ ನಾಯಕರುಗಳಷ್ಟೆಯಲ್ದೇ, ದೇಶದ ನಾಯಕರುಗಳನ್ನ ಕೂಡಾ ಕರ್ನಾಟಕದ ಮಂಡ್ಯ ಮತ್ತು ಹಾಸನ ಕ್ಷೇತ್ರ ತಿರುಗಿ ನೋಡುವಂತೆ ಮಾಡಿದೆ. ಜೆಡಿಎಸ್ ಭದ್ರಕೋಟೆಯಲ್ಲೀಗ ಮೋದಿ ಹವಾ ಜೋರಾಗಿದೆ.

ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ಅಭ್ಯರ್ಥಿಯನ್ನು ಮಾತ್ರ ಮಾತಾಡೋದಿಕ್ಕೂ ಬಿಡದೇ ಸಭೆಯಿಂದ ಹೊರಕಳಿಸಿದ ಘಟನೆ ನಡೆಯಿತು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಹೊಳೆನರಸೀಪುರ ಕ್ಷೇತ್ರದಲ್ಲಿ ಇವತ್ತು ಮೋದಿ ಕಹಳೆ ಮೊಳಗಿದೆ. ಕ್ಷೇತ್ರದ ದಂಡಿಗನಹಳ್ಳಿ ವ್ಯಾಪ್ತಿಯ ಉದಯಪುರದ ಖಾಸಗಿ ಹೋಟೆಲ್​ನಲ್ಲಿ ಕರೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮತ್ತೆ ಮೋದಿ ಕೂಗು ಕೇಳಿ ಬಂದಿದೆ. ನಾವು ಪಕ್ಕಾ ಕಾಂಗ್ರೆಸ್ ಕಟ್ಟಾಳುಗಳು. ಆದ್ರೆ ಮೈತ್ರಿ ಹೆಸರಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಗಿಸಿಲು ನೋಡುತ್ತಿರುವ ಕುಟುಂಬ ರಾಜಕಾರಣದ ವಿರುದ್ಧ ನಾವೆಲ್ಲಾ ಒಂದಾಗಿ ಈ ಬಾರಿ ಮೋದಿ ನಾಯಕತ್ವದಲ್ಲಿ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎ.ಮಂಜುಗೆ ಮತ ಹಾಕ್ತೀವಿ. ಕಾರ್ಯಕರ್ತರಿದ್ರೆ ಪಕ್ಷ. ಇಲ್ಲವಾದ್ರೆ ಕಾಂಗ್ರೆಸ್ ನಾಶಕ್ಕೆ ನೀವೇ ನಾಂದಿ ಮಾಡಿಕೊಳ್ಳುತ್ತೀರಾ ಅಂತ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗದ್ದಲವೆಬ್ಬಿಸಿ ಭಾಷಣ ಮಾಡಲು ಬಂದಿದ್ದ ಬಾಗೂರು ಮಂಜೇಗೌಡರನ್ನ ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.

ಮೈತ್ರಿಯಿಂದ ಈಗಾಗಲೇ ನಾವು ಕಾಂಗ್ರೆಸ್ ಅಸ್ತಿತ್ವವನ್ನ ಕಳೆದುಕೊಂಡಿದ್ದೇವೆ. ಇವತ್ತು ನಾವೆಲ್ಲಾ ಈ ಸಭೆಗೆ ಬಂದಿರೋದು ದೇವೇಗೌಡ್ರ ಕುಟುಂಬದ ವಿರುದ್ಧ ಮತ ಹಾಕಲು. ಈ ಬಾರಿ ನಾವು ಕುಟುಂಬ ರಾಜಕಾರಣ ತೆಗೆಯಬೇಕೆಂದೇ ಪಣ ತೊಟ್ಟಿದ್ದೇವೆ. ಹಾಗಾಗಿ ನಾವು ಎ. ಮಂಜುವನ್ನ ಬೆಂಬಲಿಸುತ್ತೇವೆ ಎಂದಿದ್ದಾರೆ.

Intro:ಹಾಸನ: ನಾವು ಪಕ್ಕ ಕಾಂಗ್ರೇಸ್ - ಈ ಬಾರಿ ಮಾತ್ರ ಮೋದಿಗೆ ಓಟು.

ಹಾಸನ: ಮೋದಿ...ಮೋದಿ...ಮೋದಿ....ಹೌದು ದೇಶದಲ್ಲೆಡೆ ಮೋದಿ ಹೆಸರು ವಿರಾಜಮಾನವಾಗಿ ರಾರಾಜಿಸುತ್ತಿದೆ. ಇವತ್ತು ಕೂಡಾ ದೇವೇಗೌಡ್ರ ಸ್ವಕ್ಷೇತ್ರ ಹೊಳೆನರಸೀಪುರದ ಕಾಂಗ್ರೇಸ್ ಸಭೆಯಲ್ಲಿ ಕೇಳಿಬಂದ ಸೌಂಡ್ ಕಣ್ರೀ...ಮೋದಿ ಹೆಸರನ್ನ ಜಪಿಸುವ ಮೂಲಕ ಕಾಂಗ್ರೇಸ್ ಕಾರ್ಯಕರ್ತರು ಹುಚ್ಚರಾಗಿದ್ದಾರೆ. ಮೈತ್ರಿ ಧರ್ಮ ಪಾಲಿಸಲು ಹೋಗಿ ನಾವು ಮಣ್ಣು ತಿನ್ನುವಂತಾಗಿದೆ. ಈ ಬಾರಿ ಮೋದಿ ಚಾ ಕುಡಿದು ಸುಭದ್ರ ದೇಶವನ್ನ ಕಟ್ಟೋಣ ಅಂತ ಕಾರ್ಯಕರ್ತರು ಒಕ್ಕೋರಲಿನಿಂದ ಧನಿಗೂಡಿಸಿದ್ರು.

ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ರಾಜ್ಯದ ನಾಯಕರುಗಳಷ್ಟೆಯಲ್ದೇ, ದೇಶದ ನಾಯಕರುಗಳನ್ನ ಕೂಡಾ ಕರ್ನಾಟಕದ ಮಂಡ್ಯ ಮತ್ತು ಹಾಸನ ಕ್ಷೇತ್ರ ತಿರುಗಿ ನೋಡುವಂತೆ ಮಾಡಿದೆ. ಜೆಡಿಎಸ್ ಭದ್ರಕೋಟೆಯಲ್ಲಿ ಈಗ ಮೋದಿ ಹವಾ ಕೇಳಿಬರುತ್ತಿದೆ. ಇವತ್ತು ಕೂಡಾ ಜಿಲ್ಲಾ ಕಾಂಗ್ರೇಸ್ ನಾಯಕರುಗಳು ಬಂದಿದ್ರೆ ಕಾರ್ಯಕರ್ತರುಗಳಿಂದ ಧರ್ಮದೇಟು ಬೀಳ್ತಿದ್ವೋ ಏನೋ ಗೊತ್ತಿಲ್ಲ. ಆದ್ರೆ ರೋಚ್ಚಿಗೆದ್ದ ಕಾಂಗ್ರೇಸ್ ಕಾರ್ಯಕರ್ತರು ಮಾತ್ರ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ಅಭ್ಯರ್ಥಿಯನ್ನ ಮಾತ್ರ ಮಾತಾಡೋದಿಕ್ಕೂ ಬಿಡದೇ ಸಭೆಯಿಂದ ಹೊರಕಳಿಸಿದ್ರು.

ಹೌದು ಇವತ್ತು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಹೊಳೆನರಸೀಪುರ ಕ್ಷೇತ್ರದಲ್ಲಿ ಇವತ್ತು ಮೋದಿ ಕಹಳೆ ಮೊಳಗಿದೆ. ಕ್ಷೇತ್ರ ದಂಡಿಗನಹಳ್ಳಿ ವ್ಯಾಪ್ತಿಯ ಉದಯಪುರದ ಖಾಸಗಿ ಹೋಟೆಲ್ ನಲ್ಲಿ ಕರೆದಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಮತ್ತೆ ಮೋದಿಯ ಕೂಗೂ ಕೇಳಿ ಬಂದಿದೆ. ನಾವು ಪಕ್ಕ ಕಾಂಗ್ರೇಸ್ ಕಟ್ಟಾಳುಗಳು. ಆದ್ರೆ ಮೈತ್ರಿ ಹೆಸರಲ್ಲಿ ಕಾಂಗ್ರೇಸ್ ಪಕ್ಷವನ್ನ ಮುಗಿಸಿಲು ನೋಡುತ್ತಿರುವ ಕುಟುಂಬದ ರಾಜಕಾರಣದ ವಿರುದ್ದ ನಾವೇಲ್ಲಾ ಒಂದಾಗಿ ಈ ಬಾರಿ ಮೋದಿ ನಾಯಕತ್ವದಲ್ಲಿ ಹಾಸನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಎ.ಮಂಜುಗೆ ಮತ ಹಾಕ್ತಿವಿ. ಕಾರ್ಯಕರ್ತರಿದ್ರೆ ಪಕ್ಷ. ಇಲ್ಲವಾದ್ರೆ ಕಾಂಗ್ರೇಸ್ ನಾಶಕ್ಕೆ ನೀವೇ ನಾಂದಿ ಮಾಡಿಕೊಳ್ಳುತ್ತೀರಾ ಅಂತ ಸಭೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಆಕ್ರೋಶವನ್ನ ವ್ಯಕ್ತಪಡಿಸಿ ಗದ್ದಲವೆಬ್ಬಿಸಿ ಭಾಷಣ ಮಾಡಲು ಬಂದಿದ್ದ ಬಾಗೂರು ಮಂಜೇಗೌಡರನ್ನ ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.

ಮೈತ್ರಿಯಿಂದ ಈಗಾಗಲೇ ನಾವು ಕಾಂಗ್ರೇಸ್ ಅಸ್ಥಿತ್ವವನ್ನ ಕಳೆದುಕೊಂಡಿದ್ದೇವೆ. ಇವತ್ತು ನಾವೇಲ್ಲಾ ಈ ಸಭೆಗೆ ಬಂದಿರೋದು ದೇವೇಗೌಡ್ರ ಕುಟುಂಬದ ವಿರುದ್ದ ಮತವನ್ನ ಹಾಕಲು ಬಂದಿರುವ ಕಾಂಗ್ರೇಸ್ ಕಟ್ಟಾಳುಗಳು ನಾವು. ಈ ಬಾರಿ ನಾವು ಕುಟುಂಬ ರಾಜಕಾರಣವನ್ನ ತೆಗೆಯಬೇಕೆಂದೆ ಪಣತೊಟ್ಟಿದ್ದೇವೆ. ಆ ಕೆಲಸವನ್ನ ನಾವು ಚುನಾವಣೆಯಾದ ಬಳಿಕ ಕಾಂಗ್ರೇಸ್ ಕಾರ್ಯಕರ್ತರು ಮಾಡ್ತೇವೆ ಹಾಗಾಗಿ ನಾವು ಎ.ಮಂಜುವನ್ನ ಬೆಂಬಲಿಸುತ್ತೇವೆ.

ಬೈಟ್: ಮಳಲಿ ಶರತ್ , ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತ

Body:0

Conclusion:ಎಂಬ ಸುದ್ದಿಯನ್ನು ರಿಪೋರ್ಟರ್ ಆ್ಯಪ್ ಮೂಲಕ ಹಾಕಲಾಗಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.