ಹಾಸನ: ಸರ್ಕಾರಿ ಕೆಲಸ ತೆಗೆದುಕೊಳ್ಳಬೇಕು ಅಂದ್ರೆ ಸಾಕಷ್ಟು ಕಷ್ಟ ಪಡಬೇಕು. ಆದ್ರೆ ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಒಂದೇ ಗ್ರಾಮದ ಇಬ್ಬರು ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರ ಅರ್ಜಿ ಸಲ್ಲಿಸಿದ ಗ್ರಾಮದವರನ್ನೇ ಪ್ರಥಮ ಆದ್ಯತೆ ಮೇಲೆ ಆಯ್ಕೆ ಮಾಡುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆ ಕೆಲಸ ಗಿಟ್ಟಿಸಿಕೊಳ್ಳುಲು ವಾಸ ಸ್ಥಳ, ರೇಷನ್ ಕಾರ್ಡ್, ವೋಟರ್ ಐಡಿಯನ್ನು ಬದಲಿಸಿ ಕೆಲಸ ಗಿಟ್ಟಿಸಿಕೊಳ್ಳಲು ಮುಂದಾಗಿರುವ ಎಂಬ ಆರೋಪ ಕೇಳಿ ಬಂದಿದೆ.
ವೀಣಾ ಎಂಬುವರು ಡಿಸಿ ಕಚೇರಿ ಅಲೆದು ಸಕಾಗಿರುವ ಮಹಿಳೆ. ಇವರು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಟಯ್ಯನ ಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆನ್ಲೈನಲ್ಲಿ ಅರ್ಜಿ ಹಾಕಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲು ಅದ್ಯತೆ ಕೊಡುವುದು ಸ್ಥಳೀಯರಿಗೆ ಮಾತ್ರ. ಇಲ್ಲಿ ಆ ಕೆಲಸ ಮಾತ್ರ ಆಗಿಲ್ಲ ಎನ್ನಲಾಗಿದೆ. ಹೇಗಾದ್ರು ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕೆಂದು ರಮ್ಯಾ ಎಂಬ ಮಹಿಳೆ ವಾಸ ಸ್ಥಳ, ವೋಟರ್ ಐಡಿ ಎಲ್ಲವನ್ನು ಬದಲಾವಣೆ ಮಾಡಿದ್ದಾರೆ ಎಂದು ವೀಣಾ ಆರೋಪಿಸಿದ್ದಾರೆ. ಈ ಹಿಂದೆ ಅರಕಲಗೂಡು ತಹಶೀಲ್ದಾರ್ ಕೂಡ ವಾಸ ಸ್ಥಳ ವಿವರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸರ್ ನನಗೆ ನ್ಯಾಯ ಬೇಕು. ನಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದವಳು. ಮೊದಲು ನನಗೆ ಕೆಲಸ ಕೊಡಬೇಕು. ಆದ್ರೆ ಕೆಲ ಹಿರಿಯ ಅಧಿಕಾರಿಗಳು ಪಕ್ಕದ ಗ್ರಾಮದವರಿಗೆ ಕೆಲಸ ಕೊಡಲು ಮುಂದಾಗಿದ್ದಾರೆ. ಇದರ ಬಗ್ಗೆ ನಾನೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ನನಗೆ ಕೆಲಸ ನೀಡುವುದಾಗಿ ಭರವೆಸೆ ನೀಡಿದ್ದಾರೆ. ಮೊದಲು ನಿಮ್ಮ ಗ್ರಾಮದವರಿಗೆ ಕೆಲಸ, ನಂತರ ಬೇರೆಯವರು ಅಂತ ಹೇಳಿದ್ದಾರೆ. ಇಷ್ಟಾದರು ದಾಖಲೆ ತಿರುಚಿದವರಿಗೆ ಕೆಲಸ ಕೊಡಲು ಮುಂದಾಗಿರುವುದು ಎಷ್ಟು ಸರಿ ಅಂತ ಕಣ್ಣೀರು ಹಾಕಿದ್ದಾರೆ.